ಮನಮೋಹಕ ವಿನ್ಯಾಸ, ಲಕ್ಷುರಿ ಫೀಚರ್ಸ್‌ನ ಆಡಿ Q7 ಫೇಸ್‌ಲಿಫ್ಟ್ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಆಡಿ ತನ್ನ ಆಡಿ Q7 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ Q7 ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ರೂ.88.66 ಲಕ್ಷವಾಗಿದೆ. ಭಾರತದಲ್ಲಿ ಈ ಹೊಸ ಆಡಿ Q7 ಫೇಸ್‌ಲಿಫ್ಟ್ (Audi Q7 Facelift) ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಐಷಾರಾಮಿ ಎಸ್‍ಯುವಿಯನ್ನು ಸ್ಥಳೀಯ ಅಸೆಂಬ್ಲಿ ಈಗಾಗಲೇ ಔರಂಗಾಬಾದ್ ಘಟಕದಲ್ಲಿ ಪ್ರಾರಂಭಿಸಿದೆ. 2024ರ ಜನವರಿ ತಿಂಗಳಿನಲ್ಲಿ ಜಾಗತಿಕವಾಗಿ ಅನಾವರಣಗೊಂಡ ಈ ಫೇಸ್‌ಲಿಫ್ಟ್ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಎಸ್‍ಯುವಿಯ ಜೀವಿತಾವಧಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಎಂಜಿನ್: ಆಡಿ Q7 ಫೇಸ್‌ಲಿಫ್ಟ್ ಎಸ್‍ಯುವಿ 3.0-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್‌ ನೊಂದಿಗೆ ಬಂದಿದೆ. ಈ ಎಂಜಿನ್ 340 hp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ ಮತ್ತು ಆಡಿಯ ಕ್ವಾಟ್ರೊ ಆಲ್-ವೀಲ್-ಡ್ರೈವ್ ತಂತ್ರಜ್ಞಾನವನ್ನು ಸ್ಯಾಂಡರ್ಡ್ ಆಗಿ ಹೊಂದಿದೆ.

Audi Q7 Facelift

ಹೊಸ ಆಡಿ ಐಷಾರಾಮಿ ಎಸ್‍ಯುವಿ 5.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಇನ್ನು ಈ ಐಷಾರಾಮಿ ಎಸ್‍ಯುವಿಯ ಟಾಪ್ ಸ್ಪೀಡ್ 250 ಕಿ.ಮೀ ಆಗಿದೆ. ಹೊಸ ಆಡಿ Q7 ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು X5, ಮರ್ಸಿಡಿಸ್ ಬೆಂಝ್ GLE, ವೋಲ್ವೋ XC90 ಮತ್ತು ಇತರ ಐಷಾರಾಮಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ವಿನ್ಯಾಸ: ಆಡಿ Q7 ಫೇಸ್‌ಲಿಫ್ಟ್ (Audi Q7 Facelift) ಎಸ್‍ಯುವಿಯು Q6 ಇ-ಟ್ರಾನ್‌ಗೆ ಹೋಲುವ OLED ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ, ದಪ್ಪವಾದ ಕ್ರೋಮ್ ಸರೌಂಡ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಷಡ್ಭುಜೀಯ ಮಾದರಿಗಳನ್ನು ಹೊಂದಿದೆ. Q8 ಎಸ್‍ಯುವಿಯಂತೆಯೇ ಬಂಪರ್‌ಗಳನ್ನು ನವೀಕರಿಸಲಾಗಿದೆ. ಈ ಹೊಸ ಐಷಾರಾಮಿ ಎಸ್‍ಯುವಿ ಖೀರ್ ಗೋಲ್ಡ್, ವೈಟೊಮೊ ಬ್ಲೂ, ಮಿಥೋಸ್ ಬ್ಲ್ಯಾಕ್, ಸಮುರಾಯ್ ಗ್ರೇ ಮತ್ತು ಗ್ಲೇಸಿಯರ್ ವೈಟ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Audi Q7 Facelift

ಫೀಚರ್ಸ್: ಹೊಸ ಆಡಿ ಐಷಾರಾಮಿ ಎಸ್‍ಯುವಿ ಸೀಡರ್ ಬ್ರೌನ್ ಮತ್ತು ಸೈಗಾ ಬೀಜ್. ಡ್ಯಾಶ್‌ಬೋರ್ಡ್ ವಿನ್ಯಾಸವು ಬದಲಾಗದೆ ಉಳಿದಿದ್ದರೂ, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್‌ಸ್ಟ್ರುಮೆಂಟೇಶನ್‌ನಲ್ಲಿ ಸುಧಾರಣೆಗಳಿವೆ. ನವೀಕರಿಸಿದ ವರ್ಚುವಲ್ ಕಾಕ್‌ಪಿಟ್ ಈಗ ಲೇನ್-ಬದಲಾವಣೆ ವಾರ್ನಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ. ಇದು Android Auto ಮತ್ತು Apple CarPlay ಅನ್ನು ಸಂಪೂರ್ಟ್ ಮಾಡುತ್ತದೆ.

ಇದರೊಂದಿಗೆ ವೈರ್ಡ್ ಕನೆಕ್ಟಿವಿಟಿಗಳ ಅಗತ್ಯವಿದೆ. ಒಟ್ಟಾರೆಯಾಗಿ, ಕ್ಯಾಬಿನ್ ಅದರ ಹಿಂದಿನ ವಿನ್ಯಾಸವನ್ನು ಉಳಿಸಿಕೊಂಡಿದೆ. ಹೊಸ ಆಡಿ ಐಷಾರಾಮಿ ಎಸ್‍ಯುವಿಯು ಆರಂಭದಲ್ಲಿ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು, ಆಡಿ ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಡೀಸೆಲ್ ಮಾದರಿಗಳನ್ನು ನಿಲ್ಲಿಸಿತು. ಇನ್ನು ಆಡಿ ಕಂಪನಿಯು ಹಲವು ತಿಂಗಳುಗಳ ಹಿಂದೆ ಆಡಿ ಕ್ಯೂ7 ಬೋಲ್ಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿತು. ಆಡಿ ಉತ್ಸಾಹಿಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಡಿಸೈನ್ ಹಾಗೂ ಸಾಟಿಯಿಲ್ಲದ ಪರ್ಫಾಮೆನ್ಸ್‌ನೊಂದಿಗೆ ಬಂದ ಮಾದರಿಯಾಗಿದೆ.

ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್, ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್, MMI ಟಚ್ ರೆಸ್ಪಾನ್ಸ್‌ನೊಂದಿಗೆ MMI ನ್ಯಾವಿಗೇಷನ್ ಪ್ಲಸ್, 19 ಸ್ಪೀಕರ್‌ಗಳೊಂದಿಗೆ B&O ಪ್ರೀಮಿಯಂ 3D ವಾಯಿಸ್ ಸಿಸ್ಟಮ್, 730 ವ್ಯಾಟ್‌ಗಳ ಒಟ್ಟು ಪವರ್ ಉತ್ಪಾದನೆ, ಇಂಟಿಗ್ರೇಟೆಡ್ ವಾಷರ್, ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್, ಪವರ್ಡ್ ಫೋಲ್ಡಬಲ್ 3ನೇ ಸಾಲಿನ ಸೀಟುಗಳು, 4 ಝೋನ್ ಏರ್ ಕಂಡೀಷನಿಂಗ್ ಜೊತೆಗೆ ಏರ್ ಅಯೋನೈಜರ್ ಮತ್ತು ಆರೊಮ್ಯಾಟೈಸೇಶನ್ ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 29, 2024, 11:51 [IST]
English summary
Audi q7 facelift suv top things details
Read more on audi india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+