ಭಾರತದಲ್ಲಿ ಹೊಸ ಮನಮೋಹಕ ಆಡಿ Q8 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಸಜ್ಜು
ಐಷಾರಾಮಿ ಕಾರು ತಯಾರಕರಾದ ಆಡಿ ಇಂಡಿಯಾ ತನ್ನ ಮುಂಬರುವ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಆಡಿ ಕ್ಯೂ8 ಫೇಸ್‌ಲಿಫ್ಟ್ (Audi Q8 Facelift) ಎಸ್‍ಯುವಿಯು ಭಾರತದಲ್ಲಿ ಆಗಸ್ಟ್ 22 ರಂದು (ನಾಳೆ) ಬಿಡುಗಡೆಯಾಗಲಿದೆ. ಈ ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯು ಕಳೆದ ಸೆಪ್ಟೆಂಬರ್‌ನಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯು ಪ್ರಮುಖ ಎಸ್‍ಯುವಿ ಕೊಡುಗೆಯನ್ನು ನವೀಕರಿಸಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹೊಸ ಎಸ್‍ಯುವಿಯ ಬದಲಾವಣೆಗಳು ಟೀಸರ್ ನಲ್ಲಿ ಹಲವಾರು ಮಾಹಿತಿಗಳು ಬಹಿರಂಗವಾಗಿವೆ.
ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ಗ್ರಿಲ್ ಮತ್ತು 'L'-ಆಕಾರದ ಇನ್ಸ್ ಸರ್ಟ್, ಅದರ ಪರಿಷ್ಕೃತ HD ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಡಿಜಿಟಲ್ OLED ಟೈಲ್-ಲೈಟ್‌ಗಳನ್ನು ಬರುತ್ತಿದೆ. ಒಟ್ಟಾರೆ ಕೂಪ್ ಆಕಾರವು ಬದಲಾಗದೆ ಉಳಿದಿದೆ. ಈ ಆಡಿ ಕೊಪೆ ಎಸ್‍ಯುವಿಯು ಹೊಸ ಅಲಾಯ್ ವೀಲ್ ವಿನ್ಯಾಸಗಳನ್ನು ಪಡೆಯುತ್ತದೆ. ಕಾರು ಹೊಸ ಡೇಟೈಮ್ ರನ್ನಿಂಗ್ ಲೈಟ್ ಸಿಗ್ನೇಚರ್ ಅನ್ನು ಪಡೆಯುತ್ತದೆ.

ಹೊರಭಾಗದಂತೆಯೇ, ಆಡಿ ಕ್ಯೂ8 ಫೇಸ್‌ಲಿಫ್ಟ್‌ನ ಒಳಭಾಗದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಇದು ಸ್ವಲ್ಪ ನವೀಕಣದ ಮತ್ತು ಹೊಸ ಬಣ್ಣದ ಥೀಮ್ ಆಯ್ಕೆಗಳೊಂದಿಗೆ ಬರುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, Q8 ಫೇಸ್‌ಲಿಫ್ಟ್ ADAS ಸೂಟ್ ಅನ್ನು ಪಡೆಯುತ್ತದೆ, ಇದು ಅಂತರ್ಗತ Spotify ಮತ್ತು Amazon Music ಅಪ್ಲಿಕೇಶನ್‌ಗಳೊಂದಿಗೆ ವಿಸ್ತರಿತ ಅಪ್ಲಿಕೇಶನ್ ಸ್ಟೋರ್ ಆಗಿದೆ.
ಈ ಎಸ್‍ಯುವಿಯಲ್ಲಿ MMI ಟಚ್‌ಸ್ಕ್ರೀನ್‌ಗಳನ್ನು ನೀಡುವುದನ್ನು ಮುಂದುವರಿಸುತ್ತದೆ; ನಾಲ್ಕು-ಝೂನ್ ಕ್ಲೈಮೆಂಟ್ ಕಂಟ್ರೋಲ್, ಒಂದು ಹೆಡ್-ಅಪ್ ಡೊಸ್ ಪ್ಲೇ, ಮಸಾಜ್ ಸೀಟುಗಳು ಮತ್ತು ಬ್ಯಾಂಗ್ & ಒಲುಫ್ಸೆನ್ ಹೈ-ಫೈ ಸಿಸ್ಟಮ್ ಅನ್ನು ಒಳಗೊಂಡಿದೆ. ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇಂಡಿಯಾ-ಸ್ಪೆಕ್ ಆಡಿ ಕ್ಯೂ8 ಫೇಸ್‌ಲಿಫ್ಟ್ ಪವರ್‌ಟ್ರೇನ್ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲ.

ವರದಿಗಳ ಪ್ರಕಾರ, ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿ ಮೈಲ್ಡ್-ಹೈಬ್ರಿಡ್ ಸಹಾಯದೊಂದಿಗೆ V6 ಎಂಜಿನ್ ನೊಂದಿಗೆ ಬರುತ್ತದೆ. ಇದು ಹೊರಹೋಗುವ ಆವೃತ್ತಿಯ ಹುಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಅದೇ ಎಂಜಿನ್ ಆಗಿದ್ದು, 335 bhp ಪವರ್ ಮತ್ತು 500 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಎಂಟು-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.
ಆಡಿ, ಇಂದು ಆಡಿ ಕ್ಯೂ7 ಬೋಲ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿತು. ಈ ವೈಯಕ್ತಿಕ ಅಭಿವ್ಯಕ್ತಿಯನ್ನು ಬಯಸುವ ಆಡಿ ಉತ್ಸಾಹಿಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಡಿಸೈನ್ ಹಾಗೂ ಸಾಟಿಯಿಲ್ಲದ ಪರ್ಫಾಮೆನ್ಸ್‌ನೊಂದಿಗೆ ಬರುತ್ತದೆ. ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್, ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್, MMI ಟಚ್ ರೆಸ್ಪಾನ್ಸ್‌ನೊಂದಿಗೆ MMI ನ್ಯಾವಿಗೇಷನ್ ಪ್ಲಸ್, 19 ಸ್ಪೀಕರ್‌ಗಳೊಂದಿಗೆ B&O ಪ್ರೀಮಿಯಂ 3D ವಾಯಿಸ್ ಸಿಸ್ಟಮ್ ಮತ್ತು 730 ವ್ಯಾಟ್‌ಗಳ ಒಟ್ಟು ಪವರ್ ಉತ್ಪಾದನೆಯನ್ನು ಹೊಂದಿದೆ.

ಇದರೊಂದಿಗೆ ಇಂಟಿಗ್ರೇಟೆಡ್ ವಾಷರ್, ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್, ಪವರ್ಡ್ ಫೋಲ್ಡಬಲ್ 3ನೇ ಸಾಲಿನ ಆಸನಗಳು, 4 ಝೋನ್ ಏರ್ ಕಂಡೀಷನಿಂಗ್ ಜೊತೆಗೆ ಏರ್ ಅಯೋನೈಜರ್ ಮತ್ತು ಆರೊಮ್ಯಾಟೈಸೇಶನ್, ಕೀ ಲೆಸ್ ಪ್ರವೇಶಕ್ಕಾಗಿ ಕಂಫರ್ಟ್ ಕೀ ಮತ್ತು ಗೆಸ್ಚರ್ ಆಧಾರಿತ ಕಾರ್ಯಾಚರಣೆಯೊಂದಿಗೆ ಎಲೆಕ್ಟ್ರಿಕ್ ಬೂಟ್ ಲಿಡ್ ನೀಡಲಾಗಿದೆ.
ಆಡಿ Q7 ಕಾರು, 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಮತ್ತು ಲೆಜೆಂಡರಿ ಕ್ವಾಟ್ರೋ ಆಲ್ ವೀಲ್ ಡ್ರೈವ್‌ನೊಂದಿಗೆ 3.0l V6 TFSI ಎಂಜಿನ್ ಅನ್ನು ಹೊಂದಿದೆ. ಇದು 340 hp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗಂಟೆಗೆ 250 ಕಿ.ಮೀ ಗರಿಷ್ಠ ವೇಗ ಮತ್ತು 5.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








