ಇನ್ಮುಂದೆ ಯಾರೂ ಬಸ್ ಹತ್ತಲ್ಲ! ಕಡಿಮೆ ದರದಲ್ಲಿ ಎಲೆಕ್ಟ್ರಿಕ್‌ ಟ್ಯಾಕ್ಸಿಗಳಿಗೆ ಚಾಲನೆ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (Kempegowda International Airport Bengaluru) ಹಾಗೂ ರಿಫೆಕ್ಸ್‌ ಇವೀಲ್ಜ್‌ (Refex eVeelz) ಸಹಯೋಹದೊಂದಿಗೆ ಈ ಬಾರಿ ವಿಶ್ವ ಪರಿಸರ ದಿನದ ಪ್ರಯುಕ್ತ ನೂತನವಾಗಿ "ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿ"ಗಳನ್ನು ಪರಿಚಯಿಸಿದೆ. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್‌ ಎಲೆಕ್ಟ್ರಿಕ್‌ ಎಸ್‍ಯುವಿ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಐಎಎಲ್‌ನ ಸಿಇಒ ಹರಿ ಮರಾರ್, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ ಅವರು ಚಾಲನೆ ನೀಡಿದರು.

ಮರುವಿನ್ಯಾಸಗೊಳಿಸಲಾದ ಎಲೆಕ್ಟ್ರಿ ಎಸ್‍ಯುವಿ ಟ್ಯಾಕ್ಸಿಗಳು ತಿಳಿನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣಗಳ ವಿಶಿಷ್ಟ ಬಣ್ಣಗಳಲ್ಲಿ ಇರಲಿವೆ. ಇದರಲ್ಲಿ ತಿಳಿನೀಲಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಎಲ್ಲರೂ ಬಳಸಬಹುದಾಗಿದ್ದು, ಈ ಬಣ್ಣವು ಸುಸ್ಥಿರತೆಯನ್ನು ಒತ್ತಿ ಹೇಳುತ್ತದೆ. ಇನ್ನು, ಗುಲಾಬಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು, ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿರುವುದು ವಿಶೇಷ.

Bengaluru Airport

ಇನ್ನು ಪ್ರತಿ ಪ್ರಯಾಣಿಕರಿಗೆ ಡ್ಯೂಟಿ ಮ್ಯಾನೇಜರ್, ಸ್ಥಳೀಯ ಪೋಲೀಸ್ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಿರುವ ಪೂರಕ "ಪಿಂಕ್ ಕಾರ್ಡ್" ಅನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಅರೆ-ರೊಬೊಟಿಕ್ ವಿಮಾನ ಟೋಯಿಂಗ್ ವಾಹನಗಳು ಮತ್ತು ಇವಿ ವಾಹನಗಳನ್ನು ಏರ್‌ಸೈಡ್ ಮತ್ತು ಲ್ಯಾಂಡ್‌ಸೈಡ್ ಎರಡೂ ಕಡೆಯಲ್ಲೂ ಅನುಷ್ಠಾನಗೊಳಿಸಲಾಗಿದೆ.

ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಾ ವಾಹನಗಳನ್ನು ಸಮರ್ಥನೀಯ ಆಯ್ಕೆಗಳಿಗೆ ಪರಿವರ್ತಿಸುವ ದೀರ್ಘಾವಧಿಯ ದೃಷ್ಟಿಯೊಂದಿಗೆ BIAL ಹೊಂದಾಣಿಕೆಯನ್ನು ಮುಂದುವರೆಸಿದೆ. ಈ ಎಲೆಕ್ಟ್ರಿಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಕನಿಷ್ಠ ದರ 100 ರೂ. ಇದು ಮೊದಲ 4 ಕಿ.ಮೀ.ಗಳಿಗೆ ದರವಾಗಿದೆ. ಬಳಿಕ ಪ್ರತಿ ಕಿಲೋಮೀಟರ್ ಗೆ 24 ರೂ. ಆಗುತ್ತದೆ. ಈ ದರ ನಿಗದಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ.

Bengaluru Airport

ವಿಶ್ವ ಪರಿಸರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಈ ಕಾರಣಕ್ಕಾಗಿಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿಗಳ ಸೇವೆಯನ್ನು ಹೊಸದಾಗಿ ಪರಿಚಯಿಸಲಾಗಿದೆ. ಪ್ರಸ್ತುತ, ಮೊದಲ ಹಂತದಲ್ಲಿ 175 ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಕ್ರಮೇಣ ಹೆಚ್ಚಾಗುವ ನಿರೀಕ್ಷೆಯಿದೆ. ಬೆಂಗಳೂರು ವಿಮಾನ ನಿಲ್ದಾಣವು ಬೆಂಗಳೂರು ನಗರದಿಂದ ದೂರದಲ್ಲಿದೆ. ಹಾಗಾಗಿ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು ಮತ್ತು ಬರಲು ಟ್ಯಾಕ್ಸಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

ಬೆಂಗಳೂರು (Bengaluru) ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಲಭ್ಯವಿದ್ದರೂ, ಟ್ಯಾಕ್ಸಿಗಳು ಹೆಚ್ಚಿನ ಪ್ರಯಾಣಿಕರ ಆಯ್ಕೆ ಮಾಡುತ್ತಾರೆ. ಓಲಾ, ಉಬರ್ ಮತ್ತು ಬ್ಲೂಸ್ಮಾರ್ಟ್ ನಂತಹ ಕಂಪನಿಗಳ ಟ್ಯಾಕ್ಸಿಗಳನ್ನು ಪ್ರಯಾಣಿಕರು ಹೆಚ್ಚಾಗಿ ಬಳಸುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಪರಿಚಯಿಸಿರುವ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಇನ್ಮುಂದೆ ಪ್ರಯಾಣಿಕರು ಹೆಚ್ಚಾಗಿ ಬಳಸಬಹುದು.

Bengaluru Airport

ಬಿಐಎಎಲ್‌ನ ಸಿಇಒ ಹರಿ ಮರಾರ್ ಮಾತನಾಡಿ, ಏರ್‌ಪೋರ್ಟ್‌ನಲ್ಲಿ ಪರಿಸರಯುಕ್ತ ವಾತಾವರಣ ನಿರ್ಮಾಣ ಮಾಡಲು ಈ ಪರಿಸರ ದಿನದಂದೇ ಬಹುತೇಕ ಇಂಧನಯುಕ್ತ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ ಟ್ಯಾಕ್ಸಿಗಳಾಗಿ ಪರಿವರ್ತಿಸಲಾಗಿದೆ. ಇದೀಗ 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಸೇರಿದಂತೆ ಶೇ.50 ಟ್ಯಾಕ್ಸಿಗಳು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ ಎಂದು ಹೇಳಿದರು.

ರಿಫೆಕ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಜೈನ್ ಮಾತನಾಡಿ, ರಿಫೆಕ್ಸ್‌ನ ಗ್ರೀನ್, ರಿಫೆಕ್ಸ್ ಇವೀಲ಼್ಮೂಲಕ ಏರ್‌ಪೋರ್ಟ್‌ನಲ್ಲಿ ಇವಿ ಟ್ಯಾಕ್ಸಿ ಒದಗಿಸುವ ಅವಕಾಶ ನಮಗೆ ದೊರೆತಿದೆ. ಈ ನೂತನ ಇವಿ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರು ಸುಲಭವಾಗಿ ಬುಕ್ ಮಾಡಬಹುದು. ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಲ್ಲಿ ಹಾಗೂ ಬಳಕೆದಾರ ಸ್ನೇಹಿ BLR ಪಲ್ಸ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಬುಕ್‌ ಮಾಡಬಹುದು ಎಂದು ಹೇಳಿದರು.

Article Published On: Thursday, June 6, 2024, 19:01 [IST]
English summary
Bengaluru airport introduces ev taxis details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+