ಭಾರತದಲ್ಲಿ ಕೈಗೆಟುಕುವ ಬೆಲೆಗೆ ಸಿಗುವ ಅತ್ಯುತ್ತಮ 7-ಸೀಟರ್ ಎಸ್‌ಯುವಿಗಳು
ಎಸ್‌ಯುವಿಗಳು ಭಾರತದಲ್ಲಿ ಸೆಡಾನ್‌ಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿವೆ, ಮೈಕ್ರೊ ಎಸ್‌ಯುವಿಗಳಿಂದ ಹಿಡಿದು ಪೂರ್ಣ ಗಾತ್ರದ ಎಸ್‌ಯುವಿಗಳು ಭಾರತದಲ್ಲಿ ಲಭ್ಯವಿವೆ. ಮೂರು ಸಾಲಿನ ಎಸ್‌ಯುವಿಗಳು ದೊಡ್ಡ ಕುಟುಂಬಗಳಿಗೆ ಸಾಮಾನ್ಯ ಆಯ್ಕೆಯಾಗಿದ್ದು, ಭಾರತದ 5 ಅತ್ಯಂತ ಕೈಗೆಟುಕುವ 7 ಸೀಟರ್ ಎಸ್‌ಯುವಿಗಳ ನೋಟ ಇಲ್ಲಿದೆ. ಇವುಗಳ ಬೇಸ್ ವೇರಿಯೆಂಟ್‌ಗಳು ಕಡಿಮೆ ಬೆಲೆಯಿರಲಿದ್ದು, ಟಾಪ್ ಎಂಡ್ ವೇರಿಯೆಂಟ್‌ಗಳು ಗರಿಷ್ಠ ಬೆಲೆಗೆ ತಲುಪುತ್ತವೆ ಎಂಬುದನ್ನು ಗಮನದಲ್ಲಿಡಬೇಕು. ಮಹೀಂದ್ರಾ, ಸಿಟ್ರನ್‌ನಂತಹ ಬ್ರಾಂಡ್‌ಗಳು ಈ 7 ಸೀಟರ್ ಎಸ್‌ಯುವಿ ವಿಭಾಗಕ್ಕೆ ಹೆಚ್ಚಿನ ಕೊಡುಗೆ ನೀಡಿವೆ.
ಮಹೀಂದ್ರಾ ಬೊಲೆರೊ: ಮಹೀಂದ್ರಾ ಬೊಲೆರೊ ಕಳೆದ ಎರಡು ದಶಕಗಳಿಂದ ತನ್ನ ಬೇಡಿಕೆಯನ್ನು ಕಳೆದುಕೊಳ್ಳದೆ ಉತ್ತಮ ಕಾರಾಗಿ ಮುಂದುವರೆಯುತ್ತಿದೆ. 9.98 ಲಕ್ಷ ರೂ.ಗಳ ಬೆಲೆಯನ್ನು ಹೊಂದಿರುವ ಈ ಕಾರು, ಇದೇ ಬೆಲೆಯಲ್ಲಿ ಸಿಗುವ ಇತರ ಎಸ್‌ಯುವಿಗಳಿಗೆ ಕಠಿಣ ಪೈಪೋಟಿ ನೀಡುತ್ತದೆ. 1.5 ಲೀಟರಿನ ಡೀಸೆಲ್ ಎಂಜಿನ್ 74 ಬಿಹೆಚ್‌ಪಿ ಪವರ್ ಹಾಗೂ 210 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಬೊಲೆರೊ ನಿಯೋ: ಮಹೀಂದ್ರಾ ಬೊಲೆರೊ ನಿಯೋ ಭಾರತದ ಅತ್ಯಂತ ಕೈಗೆಟುಕುವ 7-ಸೀಟರ್ ಎಸ್‌ಯುವಿಯಾಗಿದೆ. ಇದರ ಮೂಲ ಎನ್ 4 ರೂಪಾಂತರದ ಬೆಲೆಯು ರೂ.9.95 ಲಕ್ಷಗಳಾಗಿದೆ. 1.5 ಲೀಟರಿನ ಡೀಸೆಲ್ ಎಂಜಿನ್ 98 ಬಿಹೆಚ್‌ಪಿ ಪವರ್ ಹಾಗೂ 260 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹೆಚ್ಚಿನ ರೂಪಾಂತರಗಳು ಹಿಂಭಾಗದಲ್ಲಿ ಮೆಕ್ಯಾನಿಕಲ್ ಲಾಕಿಂಗ್ ಡಿಫರೆನ್ಶಿಯಲ್‌ನೊಂದಿಗೆ ಬರುತ್ತವೆ.
ಸಿಟ್ರೋನ್ ಸಿ 3 ಏರ್ ಕ್ರಾಸ್: ಸಿಟ್ರನ್ ಸಿ3 ಏರ್ ಕ್ರಾಸ್ ತನ್ನ ಸೆಗ್‌ಮೆಂಟಿನಲ್ಲಿ 7 ಸೀಟರ್‌ಗಳ ವಿಶಿಷ್ಟ ಆಯ್ಕೆಯನ್ನು ನೀಡುತ್ತದೆ. 1.2 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 206 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನೊಂದಿಗೆ ಬರುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್: ಮಹೀಂದ್ರಾ ಸ್ಕಾರ್ಪಿಯೋ - ಎನ್ ಇತ್ತೀಚಿನ ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಪವರ್ ಟ್ರೇನ್ ಅನ್ನು ಒಳಗೊಂಡಿದೆ. 13.85 ಲಕ್ಷ ರೂ. ಬೆಲೆ ಹೊಂದಿರುವ ಇದು 2.2-ಲೀಟರ್ ಡೀಸೆಲ್ ಎಂಜಿನ್ (173 ಬಿಹೆಚ್‌ಪಿ ಪವರ್ / 400 ಎನ್ಎಂ ಟಾರ್ಕ್) ಅಥವಾ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (200 ಬಿಹೆಚ್ ಪಿ / 380 ಎನ್ಎಂ) ಅನ್ನು ನೀಡುತ್ತದೆ. ರಿಯರ್ ವೀಲ್ ಮತ್ತು ಫೋರ್ ವ್ಹೀಲ್ ಡ್ರೈವ್ ಆಯ್ಕೆಗಳು ಲಭ್ಯವಿದೆ.
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್: ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎರಡನೇ ತಲೆಮಾರಿನ ಮಾದರಿಯಾಗಿದ್ದು, ಸ್ಕಾರ್ಪಿಯೋ ಎನ್ (ಮೂರನೇ ತಲೆಮಾರಿನ) ಬಿಡುಗಡೆಯ ಹೊರತಾಗಿಯೂ ಇನ್ನೂ ಲಭ್ಯವಿದೆ. 13.59 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ಇದು 7- ಮತ್ತು 9-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. 2.2 ಲೀಟರಿನ ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೇಲೆ ಪಟ್ಟಿ ಮಾಡಲಾದ ಎಲ್ಲಾ ಎಸ್‌ಯುವಿಗಳು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಸ್ಥಳಾವಕಾಶ, ಪ್ರಾಯೋಗಿಕತೆ ಮತ್ತು ಮೈಲೇಜ್ ನೀಡುತ್ತವೆ. ಇವು ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ಕುಟುಂಬಗಳಿಗೆ ಉತ್ತಮ ಎಸ್‌ಯುವಿಗಳಾಗಿವೆ. ಇವುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications