ಎರಡು ಕುಟುಂಬ ಪ್ರಯಾಣಿಸಬಹುದಾದ ಬೆಸ್ಟ್ 8-ಸೀಟರ್ ಕಾರುಗಳು... 7-ಸೀಟರ್ ಬೆಲೆಗೆ ಖರೀದಿಸಿ!

ಭಾರತದಲ್ಲಿ 7 ಸೀಟರ್ ಕಾರುಗಳ ಆಸುಪಾಸಿನ ಬೆಲೆಯಲ್ಲಿ 8-ಸೀಟರ್ ಕಾರುಗಳು ಕೂಡ ಸಿಗುತ್ತವೆ. ಟೊಯೋಟಾ, ಮಾರುತಿ ಕಂಪನಿಗಳಿಂದ ನೀಡಲಾಗುತ್ತಿರುವ ಜನಪ್ರಿಯ 8-ಸೀಟರ್ ಕಾರುಗಳ ಬಗ್ಗೆ ಎಷ್ಟು ಮಂದಿಗೆ ಗೊತ್ತು? ಹೌದು 6-7 ಸೀಟರ್ ಬೆಲೆಯಲ್ಲಿ ಲಭ್ಯವಿರುವ 8-ಸೀಟರ್ ಕಾನ್ಫಿಗರೇಶನ್ ಆಯ್ಕೆ ಹೊಂದಿರುವ 3 ಕಾರುಗಳಿವೆ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ ನಿಮಗೆ ಹೆಚ್ಚಿನ ಆಸನ ಸಾಮರ್ಥ್ಯದ ಕಾರು ಬೇಕಾಗಿದ್ದರೆ ಈ ಕಾರುಗಳು ಬೆಸ್ಟ್‌ ಎಂದು ಹೇಳಬಹುದು. ಯಾವೆಲ್ಲಾ ಕಾರುಗಳನ್ನು ನೀವು ಖರೀದಿಸಬಹುದು ಹಾಗು ಅವುಗಳ ವಿಶೆಷತೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

‎ಟೊಯೊಟಾ ಇನ್ನೋವಾ ಕ್ರಿಸ್ಟಾ: ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ ‎ಟೊಯೊಟಾ ಇನ್ನೋವಾ ಕ್ರಿಸ್ಟಾ ಜಿಎಕ್ಸ್, ಜಿಎಕ್ಸ್ ಪ್ಲಸ್, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. 7 ಮತ್ತು 8-ಸೀಟರ್ ಕಾನ್ಫಿಗರೇಶನ್ ಆಯ್ಕೆಗಳನ್ನು ಹೊಂದಿದೆ. ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 19.99 ಲಕ್ಷಗಳಾಗಿದೆ. ಇದರ 2.4 ಲೀಟರ್‌ ನ ಡೀಸೆಲ್ ಎಂಜಿನ್ 150 ಬಿಹೆಚ್ ಪಿ ಪವರ್ ಹಾಗೂ 343 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

best-8-seater-mpvs-in-india-innova-hycross-crysta-invicto

ಇನ್ನೋವಾ ಕ್ರಿಸ್ಟಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಆಂಬಿಯೆಂಟ್ ಲೈಟಿಂಗ್, 8 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್: ಟೊಯೊಟಾ ಇನ್ನೋವಾ ಹೈಕ್ರಾಸ್ ಎರಡು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಎಲೆಕ್ಟ್ರಿಕ್ ಮೋಟರ್ ಹೊಂದಿರುವ 2-ಲೀಟರ್ ಪೆಟ್ರೋಲ್ ಎಂಜಿನ್ (ಇ-ಸಿವಿಟಿಯೊಂದಿಗೆ ಜೋಡಿಸಲಾಗಿದೆ) ನೊಂದಿಗೆ ಬರುತ್ತದೆ. 8 ಸೀಟರ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.19.77 ಲಕ್ಷದಿಂದ ರೂ.30.98 ಲಕ್ಷಗಳಾಗಿದೆ. ADAS ಸೇರಿದಂತೆ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.

best-8-seater-mpvs-in-india-innova-hycross-crysta-invicto

ಮಾರುತಿ ಇನ್ವಿಕ್ಟೋ: ಮಾರುತಿ ಸುಜುಕಿ ಇನ್ವಿಕ್ಟೋ ಝೀಟಾ + ಮತ್ತು ಆಲ್ಫಾ + ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದ್ದು, 7-8 ಸೀಟರ್ ಕಾನ್ಫಿಗರೇಶನ್ ಆಯ್ಕೆಗಳನ್ನು ಹೊಂದಿದೆ. ಇನ್ವಿಕ್ಟೋ 8-ಸೀಟರ್ ಬೆಲೆಯ ವಿಷಯಕ್ಕೆ ಬಂದರೆ ರೂ.25.26 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. 2-ಲೀಟರ್ ಹೈಬ್ರಿಡ್ ಎಂಜಿನ್ ಹೊಂದಿದ್ದು, ಇದು 152 ಪಿಎಸ್ ಪವರ್ ಮತ್ತು 188 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಇದರಲ್ಲಿ ನೀವು 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

best-8-seater-mpvs-in-india-innova-hycross-crysta-invicto

6 - 7 ಸೀಟರ್ ಬೆಲೆಯಲ್ಲಿ ಲಭ್ಯವಿರುವ 8 - ಸೀಟರ್ ಕಾನ್ಫಿಗರೇಶನ್ ಆಯ್ಕೆ ಹೊಂದಿರುವ ಈ 3 ಕಾರುಗಳು ನಿಮ್ಮ ದೊಡ್ಡ ಕುಟುಂಬಕ್ಕೆ ಹೆಚ್ಚಿನ ಆಸನ ಸಾಮರ್ಥ್ಯವನ್ನು ನೀಡುವ ಬೆಸ್ಟ್‌ ಕಾರುಗಳಾಗಿವೆ. ಟೊಯೋಟಾ, ಮಾರುತಿ ಕಂಪನಿಗಳಿಂದ ನೀಡಲಾಗುತ್ತಿರುವ ಜನಪ್ರಿಯ 8-ಸೀಟರ್ ಕಾರುಗಳ ಬಗ್ಗೆ ನಿಮ್ಮ ಅನಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, December 14, 2024, 10:00 [IST]
English summary
Best 8 seater mpvs in india innova hycross crysta invicto
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+