ಹೆಚ್ಚಿನ ಸ್ಥಳಾವಕಾಶ ಬೇಕೇ? 6-7 ಸೀಟರ್ ಬಿಡಿ.. 8-ಸೀಟರ್ ಕಾರನ್ನು ಅದೇ ಬೆಲೆಗೆ ಖರೀದಿಸಿ!
ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ ನಿಮಗೆ ಹೆಚ್ಚಿನ ಆಸನ ಸಾಮರ್ಥ್ಯದ ಕಾರು ಬೇಕಾಗಬಹುದು, ಆದ್ರೆ 8- ಸೀಟರ್ ಕಾರುಗಳು ಸಾಮಾನ್ಯವಾಗಿ ಹೆಚ್ಚಿನ ಬೆಲೆ ಹೊಂದಿರುತ್ತವೆ. ಹಲವರಿಗೆ ತಿಳಿಯದೆ ವಿಷಯವೇನೆಂದರೆ ಭಾರತದಲ್ಲಿ 7 ಸೀಟರ್ ಕಾರುಗಳ ಆಸುಪಾಸಿನ ಬೆಲೆಯಲ್ಲಿ 8-ಸೀಟರ್ ಕಾರುಗಳು ಕೂಡ ಸಿಗುತ್ತವೆ. ಹೌದು, 6-7 ಸೀಟರ್ ಬೆಲೆಯಲ್ಲಿ ಲಭ್ಯವಿರುವ 8-ಸೀಟರ್ ಕಾನ್ಫಿಗರೇಶನ್ ಆಯ್ಕೆ ಹೊಂದಿರುವ 3 ಕಾರುಗಳನ್ನು ನಿಮಗಾಗಿ ಇಲ್ಲಿ ಪಟ್ಟಿ ಮಾಡಿದ್ದೇವೆ. ಟೊಯೋಟಾ, ಮಾರುತಿ ಕಂಪನಿಗಳಿಂದ ನೀಡಲಾಗುತ್ತಿರುವ ಜನಪ್ರಿಯ 8-ಸೀಟರ್ ಕಾರುಗಳ ಬಗ್ಗೆ ಇಲ್ಲಿ ನೋಡೋಣ.
ಮಾರುತಿ ಇನ್ವಿಕ್ಟೋ: ಮಾರುತಿ ಸುಜುಕಿ ಇನ್ವಿಕ್ಟೋ ಝೀಟಾ + ಮತ್ತು ಆಲ್ಫಾ + ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದ್ದು, 7-8 ಸೀಟರ್ ಕಾನ್ಫಿಗರೇಶನ್ ಆಯ್ಕೆಗಳನ್ನು ಹೊಂದಿದೆ. 2-ಲೀಟರ್ ಹೈಬ್ರಿಡ್ ಎಂಜಿನ್ ಹೊಂದಿದ್ದು, ಇದು 152 ಪಿಎಸ್ ಪವರ್ ಮತ್ತು 188 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಭಾರತದಲ್ಲಿ ರೂ.25.21 ಲಕ್ಷದಿಂದ ರೂ.28.92 (ಎಕ್ಸ್ ಶೋರೂಂ) ಲಕ್ಷ ಬೆಲೆಯಿದೆ.

ಇನ್ವಿಕ್ಟೋ 8-ಸೀಟರ್ ಬೆಲೆಯ ವಿಷಯಕ್ಕೆ ಬಂದರೆ ರೂ.25.26 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್: ಟೊಯೊಟಾ ಇನ್ನೋವಾ ಹೈಕ್ರಾಸ್ 8 ಸೀಟರ್ ರೂಪಾಂತರಗಳ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.19.77 ಲಕ್ಷದಿಂದ ರೂ.30.98 ಲಕ್ಷಗಳಾಗಿದೆ. ಇದು ಎರಡು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಎಲೆಕ್ಟ್ರಿಕ್ ಮೋಟರ್ ಹೊಂದಿರುವ 2-ಲೀಟರ್ ಪೆಟ್ರೋಲ್ ಎಂಜಿನ್ (ಇ-ಸಿವಿಟಿಯೊಂದಿಗೆ ಜೋಡಿಸಲಾಗಿದೆ) ನೊಂದಿಗೆ ಬರುತ್ತದೆ. ADAS ಸೇರಿದಂತೆ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ: ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ಈ ಕಾರಿನ ಬೆಲೆಯು ರೂ.19.99 ಲಕ್ಷದಿಂದ ರೂ.26.55 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಇದು ಜಿಎಕ್ಸ್, ಜಿಎಕ್ಸ್ ಪ್ಲಸ್, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. 7 ಮತ್ತು 8-ಸೀಟರ್ ಕಾನ್ಫಿಗರೇಶನ್ ಆಯ್ಕೆಗಳನ್ನು ಹೊಂದಿದೆ.
ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ 8 ಸೀಟರ್ ಟೊಯೊಟಾ ಇನ್ನೋವಾ ಕ್ರಿಸ್ಟಾದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 19.99 ಲಕ್ಷಗಳಾಗಿದೆ. ಇದರ 2.4 ಲೀಟರ್ ನ ಡೀಸೆಲ್ ಎಂಜಿನ್ 150 ಬಿಹೆಚ್ ಪಿ ಪವರ್ ಹಾಗೂ 343 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇನ್ನೋವಾ ಕ್ರಿಸ್ಟಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ 8 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಪಟ್ರೋಲ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications