ಹಬ್ಬದ ಸೀಸನ್‌ನಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಕಾರುಗಳು!

ಭಾರತದಲ್ಲಿ ಆಟೋ ಉದ್ಯಮ ವಿಶ್ವವೇ ತಿರುಗಿ ನೋಡುವ ಮಟ್ಟಕ್ಕೆ ಬೆಳೆದಿದೆ. ಸದ್ಯ ಭಾರತೀಯರಿಗೆ ಸುಲಭ ರೀತಿಯಲ್ಲಿ EMI ಆಯ್ಕೆ ನೀಡಿ ಕಾರು ಖರೀದಿಸುವ ಸೌಲಭ್ಯವನ್ನು ಹಲವು ಬ್ರಾಂಡ್‌ಗಳು ಮಾಡಿಕೊಟ್ಟಿವೆ. ಇಂದು ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಕಾರುಗಳನ್ನು ನೀಡುತ್ತಿದೆ. ಸಣ್ಣ ಕುಟುಂಬಕ್ಕೆ ಹಾಗೂ ಸಿಟಿಯಲ್ಲಿ ಓಡಾಡುವವರಿಗೆ ಬೆಸ್ಟ್ ಆಯ್ಕೆಯೆಂದು ಹೇಳಬಹುದು. ಸದ್ಯ ಟಾಟಾ, ಮಾರುತಿ, ಹ್ಯುಂಡೈ, ಎಂಜಿ ಬ್ರಾಂಡ್‌ಗಳಿಂದ ಭಾರತದಲ್ಲಿ ಹಬ್ಬದ ಸೀಸನ್‌ಗೆ ಬೆಸ್ಟ್‌ ಆಫರ್‌ಗಳ ಮೂಲಕ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ನೀಡುತ್ತಿದ್ದು, ಅವುಗಳ ಬಗ್ಗೆ ಇಲ್ಲಿ ನೋಡೋಣ.

ಟಾಟಾ ಪಂಚ್: ಟಾಟಾ ಪಂಚ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಪೆಟ್ರೋಲ್, ಪೆಟ್ರೋಲ್-ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಚಾಲಿತ ಟಾಟಾ ಪಂಚ್ ನೀವು ವೈಶಿಷ್ಟ್ಯಗಳಿಂದ ತುಂಬಿರುವ, ನಗರ ಮತ್ತು ಹೆದ್ದಾರಿಗಳಿಗೆ ಸೂಕ್ತವಾದ ಪವರ್‌ಫುಲ್ ಪರ್ಫಾಮೆನ್ಸ್ ನೀಡುವ ಕಾರಾಗಿದೆ. ಇದು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಹಣಕ್ಕೆ ತಕ್ಕ ಮೌಲ್ಯಯುತ ಕಾರಾಗಿದೆ.

best-cars-under-10-lakh-maruti-swift-alto-k10-tata-punch-hyundai-exter

ಮಾರುತಿ ಸುಜುಕಿ ಸ್ವಿಫ್ಟ್: ಮಾರುತಿ ಸುಜುಕಿ ಸ್ವಿಫ್ಟ್ ಭಾರತದ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಈಗ 4 ಸಿಲಿಂಡರ್ ಪೆಟ್ರೋಲ್ ಮೋಟರ್ ಬದಲಿಗೆ 3 ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ. ಹೌದು, ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಕೆಲವು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಯಿತು.

ಇದು ಹೊಸ ವಿನ್ಯಾಸ, ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳು ಮತ್ತು ಸಂಪೂರ್ಣವಾಗಿ ನವೀಕರಿಸಿದ ಎಂಜಿನ್‌ನೊಂದಿಗೆ ಬರುತ್ತದೆ. ಹಾಗೇಯೇ ಇದು ಕೂಡ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಪವರ್‌ಫುಲ್ ಕಾರಾಗಿದೆ. ಸ್ವಿಫ್ಟ್ ಸಿಎನ್‌ಜಿ ಪವರ್ ಟ್ರೇನ್ ಅನ್ನು ಸಹ ಪಡೆದಿದೆ. ಈ ಕಾರಿಗೆ ಸದ್ಯ ಭಾರೀ ಬೇಡಿಕೆಯಿದ್ದು, ಶೀಘ್ರದಲ್ಲೇ ಇದರ ಸಹೋದರ ಹೊಸ ಸ್ವಿಫ್ಟ್ ಡಿಜೈರ್ ಕೂಡ ಬಿಡುಗಡೆಯಾಗಲಿದೆ.

best-cars-under-10-lakh-maruti-swift-alto-k10-tata-punch-hyundai-exter

ಹ್ಯುಂಡೈ ಎಕ್ಸ್ಟರ್: ಹ್ಯುಂಡೈ ಎಕ್ಸ್ಟರ್ ಎಸ್‌ಯುವಿ ಭಾರತದಲ್ಲಿ ಅತೀ ಹೆಚ್ಚು ಫೀಚರ್‌ಗಳೊಂದಿಗೆ ಬಿಡುಗಡೆಯಾದ ಮೈಕ್ರೋ ಎಸ್‌ಯುವಿಯಾಗಿದೆ. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದ್ದು, ಇದು ದೇಶದ ಹಣಕ್ಕೆ ಮೌಲ್ಯಯುತ ಕಾರುಗಳಲ್ಲಿ ಒಂದಾಗಿದೆ. ಈ ಎಸ್‌ಯುವಿ ಸಾಕಷ್ಟು ವೈಶಿಷ್ಟ್ಯಗಳು ಮತ್ತು ಬಹು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.

ಮಾರುತಿ ಸುಜುಕಿ ಆಲ್ಟೋ ಕೆ10: ಈ ಪಟ್ಟಿಯಲ್ಲಿ ಆಲ್ಟೋ ಕೆ10 ನೋಡಿ ಅನೇಕರಿಗೆ ಆಶ್ಚರ್ಯವಾಗಬಹುದು, ಇದು ಸಿಟಿ ಡ್ರೈವ್‌ಗಳಿಗೆ ಉತ್ತಮವಾಗಿದೆ. ಆಲ್ಟೋ ಕೆ 10 ವೈಶಿಷ್ಟ್ಯಗಳಿಂದ ತುಂಬಿದ ಮತ್ತು ಹೆಚ್ಚು ಕಾರ್ಯಕ್ಷಮತೆಯ ಕಾರು ಅಲ್ಲದಿರಬಹುದು, ಆದರೆ ಸಣ್ಣ 1.0-ಲೀಟರ್ ಎಂಜಿನ್ ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತದೆ. ಅಲ್ಲದೆ, ಮೊದಲ ಬಾರಿಗೆ ಕಾರು ಖರೀದಿಸುವವರಿಗೆ, ಇದು ಉತ್ತಮ ಕಾರಾಗಿದೆ.

best-cars-under-10-lakh-maruti-swift-alto-k10-tata-punch-hyundai-exter

MG ಕಾಮೆಟ್ EV: ಎಂಜಿ ಕಾಮೆಟ್ ಇವಿ ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಾಗಿದೆ. ನೀವು ನಗರದಲ್ಲಿ ಮತ್ತು ಸುತ್ತಮುತ್ತಲಿನ ನಿಯಮಿತ ಪ್ರಯಾಣಕ್ಕೆ ಸೂಕ್ತವಾದ ಕಾರನ್ನು ಹುಡುಕುತ್ತಿದ್ದರೆ, ಎಂಜಿ ಕಾಮೆಟ್ ಇವಿ ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ. ಇದು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಎಂಜಿ ಕಾಮೆಟ್ ಇವಿ ಈ ಪಟ್ಟಿಯಲ್ಲಿ ಕಾರ್ಯಸಾಧ್ಯವಾದ ಆಯ್ಕೆಯನ್ನಾಗಿ ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 27, 2024, 13:00 [IST]
English summary
Best cars under 10 lakh maruti swift alto k10 tata punch hyundai exter
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+