10 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಡೀಸೆಲ್ ಕಾರುಗಳು: ಭರ್ಜರಿ ಮೈಲೇಜ್, ಉತ್ತಮ ಪರ್ಫಾಮೆನ್ಸ್!
Best Diesel Cars: ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಕಂಪನಿಗಳು ನಿಧಾನವಾಗಿ ತಮ್ಮ ಡೀಸೆಲ್ ಕಾರುಗಳನ್ನು ಸ್ಥಗಿತಗೊಳುಸುತ್ತಿವೆ. ಆದ್ರೂ ಜನರಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪ್ರಸ್ತುತ ಭಾರತದಲ್ಲಿ ಕೈಗೆಟುಕುವ ಬೆಲೆ, ಉತ್ತಮ ಮೈಲೇಜ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಕಾರನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಆಕರ್ಷಕ ಮೈಲೇಜ್‌ನೊಂದಿಗೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕೆಲವು ಡೀಸೆಲ್ ಕಾರುಗಳು ಇಲ್ಲಿವೆ. ಇವು ಭಾರತದ ಅತ್ಯಂತ ಕೈಗೆಟುಕುವ ಬೆಲೆಯ ಡೀಸೆಲ್ ಕಾರುಗಳಾಗಿವೆ. ಬನ್ನಿ ಹಾಗಾದ್ರೆ ಟಾಪ್-5 ಡೀಸೆಲ್ ಕಾರುಗಳನ್ನು ನೋಡೋಣ.
ಟಾಟಾ ಆಲ್ಟ್ರೋಜ್: ಟಾಟಾ ಆಲ್ಟ್ರೋಜ್ ಡೀಸೆಲ್ (Tata Altroz Diesel) ಕಾರಿನ ಬೆಲೆಯು 9.90 ಲಕ್ಷ ರೂ. (ಎಕ್ಸ್ ಶೋರೂಂ)ನಿಂದ ಪ್ರಾರಂಭವಾಗುತ್ತದೆ. ಇದು ಪ್ರತಿ ಲೀಟರ್ ಡೀಸೆಲ್‌ಗೆ 23.64 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಈ ಕಾರಿನಲ್ಲಿ 1497 ಸಿಸಿ ಎಂಜಿನ್ ಅಳವಡಿಸಲಾಗಿದ್ದು, ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಬರುತ್ತದೆ. ಇದರ ಎಂಜಿನ್ 88.76bh ಪವರ್ ಮತ್ತು 200Nm ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಎಕ್ಸ್ ಯುವಿ 3XO: ಎಕ್ಸ್‌ಯುವಿ 3XO ಡೀಸೆಲ್ (Mahindra XUV 3XO Diesel) ಬೆಲೆಯು ರೂ.9.99 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಇದರ 1.5-ಲೀಟರ್ ಡೀಸೆಲ್ ಎಂಜಿನ್ 117 ಪಿಎಸ್ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ರಿಯಲ್ ವರ್ಲ್ಡ್ ಮೈಲೇಜ್ 13 ರಿಂದ 16 ಕಿ.ಮೀ ನಡುವೆ ಇದೆ.
ಮಹೀಂದ್ರಾ ಬೊಲೆರೊ (Mahindra Bolero): ಇದು 7 ಸೀಟರ್ ಎಸ್‌ಯುವಿ ಆಗಿದ್ದು, ಬೆಲೆಯು ರೂ.9.79 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. 3 ವೆರಿಯೆಂಟ್‌ಗಳಲ್ಲಿ ಡೀಸೆಲ್ ಮ್ಯಾನುವಲ್‌ನಲ್ಲಿ ಲಭ್ಯವಿದೆ. ಈ ಕಾರಿನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಪ್ರತಿ ಲೀಟರ್‌ಗೆ 16 ಕಿ.ಮೀ ಮೈಲೇಜ್ ನೀಡುತ್ತದೆ. ಬೊಲೆರೊಗೆ ಮಾರುತಿ ಎರ್ಟಿಗಾ ಕಠಿಣ ಪ್ರತಿಸ್ಪರ್ಧಿಯಾಗಿದೆ.

ಕಿಯಾ ಸೊನೆಟ್: ಕಿಯಾ ಸೋನೆಟ್ ಡೀಸೆಲ್ (Kia Sonet Diesel) ಬೆಲೆಯು 10.50 ಲಕ್ಷ ರೂ. (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 1493 ಸಿಸಿ ಎಂಜಿನ್ ಅಳವಡಿಸಲಾಗಿದ್ದು, ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 114bh ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 24.1 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಡೀಸೆಲ್ (Tata Nexon Diesel) ಬೆಲೆಯು 11 ಲಕ್ಷ ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 1497 ಸಿಸಿ ಎಂಜಿನ್ ಅಳವಡಿಸಲಾಗಿದ್ದು, ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಬರುತ್ತದೆ. 113.31bh ಪವರ್ ಮತ್ತು 260Nm ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಪ್ರತಿ ಲೀಟರ್‌ಗೆ 23.23 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಇವು ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಡೀಸೆಲ್ ಕಾರುಗಳಾಗಿದ್ದು, ಟಾಟಾ, ಕಿಯಾ, ಮಹೀಂದ್ರಾ ಕಂಪನಿಗಳಿಂದ ನಮಗೆ ಸಿಗುವ ಬೆಸ್ಟ್ ಡೀಸೆಲ್ ಕಾರುಗಳಾಗಿವೆ. ಇನ್ನೂ ಅತ್ಯುತ್ತಮ ಡೀಸೆಲ್ ಕಾರುಗಳು ಇವೆಯಾದರೂ, 11 ಲಕ್ಷ ರೂ. ಬೆಲೆಯನ್ನು ದಾಟುತ್ತವೆ. ನಿಮಗೆ ಈ ಕಾರುಗಳಲ್ಲಿ ಯಾವುದು ಬೆಸ್ಟ್ ಎನಿಸಿದೆಯೋ ಅನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications