ಬೈಕ್‌ನಷ್ಟೆ ಬೆಲೆ, ಬೈಕ್‌ನಷ್ಟೆ ಮೈಲೇಜ್: ಕಡಿಮೆ ಬೆಲೆಯ 5 ಬೆಸ್ಟ್‌ ಕಾರುಗಳು!

Best mileage cars: ಭಾರತದಲ್ಲಿ ಸದ್ಯ ರಾಯಲ್‌ ಎನ್‌ಫೀಲ್ಡ್‌ನ ಸೂಪರ್ ಮಿಟಿಯೋರ್ 650 ಬೆಲೆಯು 3,49,008 ರೂ. (ಎಕ್ಸ್‌ ಶೋರೂಂ) ಇದೆ. ಇದರ ಆನ್‌ರೋಡ್‌ ಬೆಲೆ 4.5 ಲಕ್ಷವಾಗುತ್ತದೆ. ಇದೇ ಬೆಲೆಯ ಆಸುಪಾಸಿನಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇದ್ದು, ಇದರ ಬೆಲೆಗಳು 4.26 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಮೈಲೇಜ್ ಕೂಡ ಅದೇ ಬೈಕ್‌ನಷ್ಟು ನೀಡುತ್ತದೆ. ಅಂತೆಯೇ 6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಹಾಗೂ ಅಧಿಕ ಮೈಲೇಜ್ ನಿಡುವ ಕಾರುಗಳನ್ನು ಮಾರುತಿ ಸುಜುಕಿ ನೀಡುತ್ತಿದೆ. ಹಾಗಾದ್ರೆ 6 ಲಕ್ಷ ರೂ.ಗಿಂತ ಕಡಿಮೆ ಬಜೆಟ್ ಹೊಂದಿರುವ ಕಾರುಗಳನ್ನು ಇಲ್ಲಿ ನೋಡೋಣ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ: ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕಂಪನಿ ನೀಡುವ ಅತ್ಯುತ್ತಮ ಅಗ್ಗದ ಬೆಲೆಯ ಕಾರಾಗಿದೆ. ಇದರ ಬೆಲೆಗಳು 4.26 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಈ ಕಾರು ಪ್ರತಿ ಲೀಟರ್‌ಗೆ ಬರೋಬ್ಬರಿ 24.12 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು 1.0-ಲೀಟರ್, ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

best-mileage-cars-under-6-lakhs-in-india

ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಸಹ ಅದೇ 1.0-ಲೀಟರ್, ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸೆಲೆರಿಯೊ ಕೂಡ 24.97 ಕಿ.ಮೀ / ಲೀಟರ್ ಮೈಲೇಜ್ ನೀಡುತ್ತದೆ. ಹೊಸ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್ ಬ್ಯಾಕ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.36 ಲಕ್ಷಗಳಾಗಿದೆ.

ಮಾರುತಿ ಸುಜುಕಿ ವ್ಯಾಗನ್ಆರ್: ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ವ್ಯಾಗನ್ ಆರ್ ಶ್ರೇಣಿಯ ಬೆಲೆಗಳು 5.45 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಈ ಮಾದರಿಯು ಸಿಎನ್‌ಜಿ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಪ್ರತಿ ಲೀಟರ್‌ಗೆ 25.29 ಕಿ.ಮೀ ಮೈಲೇಜ್ ನೀಡುತ್ತದೆ.

best-mileage-cars-under-6-lakhs-in-india

ರೆನಾಲ್ಟ್ ಕ್ವಿಡ್: ರೆನಾಲ್ಟ್ ಕ್ವಿಡ್ (Renault KWID) ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.69 ಲಕ್ಷಗಳಾಗಿದೆ. ವಾಹನ ತಯಾರಕರ ಪ್ರಕಾರ, ಕ್ವಿಡ್ ಪ್ರತಿ ಲೀಟರ್‌ಗೆ 22.30 ಕಿ.ಮೀ ಮೈಲೇಜ್ ನೀಡುತ್ತದೆ. ಈ ಮಾದರಿಯು 1.0-ಲೀಟರ್, 3-ಸಿಲಿಂಡರ್, ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್: ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) 1.2-ಲೀಟರ್, ನ್ಯಾಚುರಲ್ಲಿ ಆಸ್ಪಿರೇಟೆಡ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷಗಳಾಗಿದೆ. ಈ ಮಾದರಿಯು 22.56 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

best-mileage-cars-under-6-lakhs-in-india

ಭಾರತದಲ್ಲಿ ಮೋಟಾರ್‌ಸೈಕಲ್‌ಗಳ ಬೆಲೆಗಳು ಹೆಚ್ಚುಕಡಿಮೆ ಹ್ಯಾಚ್‌ಬ್ಯಾಕ್‌ ಕಾರುಗಳ ಆಸುಪಾಸಿನಲ್ಲಿವೆ. ಇನ್ನು ಮೈಲೇಜ್ ವಿಷಯಕ್ಕೆ ಬಂದರೆ ಮೇಲೆ ತಿಳಿಸಲಾದ ರಾಯಲ್‌ ಎನ್‌ಫೀಲ್ಡ್ ಸೂಪರ್ ಮೀಟಿಯೋರ್ ಪ್ರತಿ ಲೀಟರ್‌ಗೆ 25 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಹಾಗಾದ್ರೆ ಬೈಕ್ ಬೆಲೆಯಲ್ಲಿ ಅತ್ಯತ್ತಮ ಮೈಲೇಜ್ ಹೊಂದಿರುವ ಕಾರುಗಳನ್ನೇ ಖರೀದಿಸಬಹುದಲ್ಲವೇ?

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 19, 2024, 10:00 [IST]
English summary
Best mileage cars under 6 lakhs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+