10 ಲಕ್ಷಕ್ಕಿಂತ ಕಡಿಮೆ ಬೆಲೆಯ ಸನ್‌ರೂಫ್ ಕಾರುಗಳು: ಭಾರತದ ಬೆಸ್ಟ್‌ ಹ್ಯಾಚ್‌ಬ್ಯಾಕ್‌ಗಳು!

ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕಾರು ಖರೀದಿಸುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ತಂತ್ರಜ್ಞಾನ ಬೆಳೆದಂತೆ ಹೊಸ ಫೀಚರ್ಸ್ ಕೊಡುತ್ತಾ ಗ್ರಾಹಕರನ್ನು ಸೆಳೆಯುವಲ್ಲಿ ಬಹುತೇಕ ಎಲ್ಲಾ ಕಂಪನಿಗಳು ಯಶಸ್ವಿಯಾಗಿವೆ. ಇದೀಗ ಹೊಸ ಟ್ರೆಂಡ್ ಆಗಿ ಸನ್‌ರೂಫ್ ಹೊಂದಿರುವ ಕಾರುಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತೀಯ ವಾಹನ ತಯಾರಕರು ಎಂಟ್ರಿ ಲೆವೆಲ್ ಕಾರುಗಳನ್ನು ಕೂಡ ಸನ್‌ರೂಫ್‌ಗಳೊಂದಿಗೆ ಸಜ್ಜುಗೊಳಿಸಲು ಪ್ರಾರಂಭಿಸಿದ್ದಾರೆ. ಸನ್‌ರೂಲ್‌ಗಳನ್ನು ಈಗ ಬೇಸ್ ಅಥವಾ ಮಿಡ್-ಸ್ಪೆಕ್ ಮಾದರಿಗಳಲ್ಲಿಯೂ ನೀಡಲಾಗುತ್ತದೆ. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಸನ್‌ರೂಫ್ ಹೊಂದಿರುವ ಕಾರುಗಳನ್ನು ಇಲ್ಲಿ ನೋಡೋಣ.

ಟಾಟಾ ಪಂಚ್: ಟಾಟಾ ಮೋಟಾರ್ಸ್ ನೀಡುವ ಅಗ್ಗದ ಬೆಲೆಯ ಅತ್ಯುತ್ತಮ ಕಾರಾಗಿ ಗುರ್ತಿಸಿಕೊಂಡಿರುವ 'ಪಂಚ್-ಎಸ್' ಆವೃತ್ತಿಯು ಸನ್‌ರೂಫ್‌ನೊಂದಿಗೆ ಬರುತ್ತದೆ. ಹೊಸ ಟಾಟಾ ಪಂಚ್-ಎಸ್ ಆವೃತ್ತಿಯ ಎಕ್ಸ್ ಶೋರೂಂ ಆರಂಭಿಕ ಬೆಲೆಯು ರೂ.8.80 ಲಕ್ಷಗಳಾಗಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಈ ಕಾರು ಲಭ್ಯವಿದೆ.

best-sunroof-cars-under-10-lakhs-in-india

ಕಿಯಾ ಸೊನೆಟ್: ಕಿಯಾ ಸೊನೆಟ್ ಎಚ್‌ಟಿಇ (ಒ) ವೇರಿಯೆಂಟ್‌ನಿಂದ ಪ್ರಾರಂಭಿಸಿ, ಸನ್‌ರೂಫ್ ಅನ್ನು ‌ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಕಿಯಾ ಸೊನೆಟ್ ಎಚ್ ಟಿಇ (ಒ) ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.32 ಲಕ್ಷಗಳಾಗಿದೆ. 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಈ ಕಾರು ಲಭ್ಯವಿದೆ.

ಟಾಟಾ ಆಲ್ಟ್ರೋಜ್: ಸ್ಟ್ಯಾಂಡರ್ಡ್ ಸನ್‌ರೂಫ್ ನೊಂದಿಗೆ ಬರುವ ಟಾಟಾ ಆಲ್ಟ್ರೋಜ್ ಅಗ್ಗದ ಹೈ ಎಂಡ್ ಹ್ಯಾಚ್ ಬ್ಯಾಕ್ ಆಗಿದೆ. ಇದರಲ್ಲಿ ಎಕ್ಸ್‌ಎಂ (ಎಸ್) ಆವೃತ್ತಿಯಲ್ಲಿ ಸನ್‌ರೂಫ್ ಲಭ್ಯವಿದ್ದು, ಈ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.00 ಲಕ್ಷಗಳಾಗಿದೆ. ಇದು 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೊಂದಿದೆ.

best-sunroof-cars-under-10-lakhs-in-india

ಹ್ಯುಂಡೈ ಎಕ್ಸ್ಟರ್: ಹ್ಯುಂಡೈ ಎಕ್ಸ್‌ಟರ್ ಸ್ಟ್ಯಾಂಡರ್ಡ್ ಸನ್‌ರೂಫ್ ಹೊಂದಿರುವ ಬೆಸ್ಟ್‌ ಹ್ಯಾಚ್‌ಬ್ಯಾಕ್ ಆಗಿದೆ. ಎಸ್ಎಕ್ಸ್ ಮಾದರಿಯಿಂದ ಪ್ರಾರಂಭಿಸಿ, ಸನ್‌ರೂಫ್ ಅನ್ನು ಸೇರಿಸಲಾಗಿದ್ದು, ಈ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.12 ಲಕ್ಷಗಳಾಗಿದೆ. ಸಿಎನ್‌ಜಿ ಹಾಗೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಎರಡೂ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಪನೋರಮಿಕ್ ಸನ್‌ರೂಫ್ ಲಭ್ಯವಿದೆ. ನೆಕ್ಸಾನ್‌ನ ಸ್ಮಾರ್ಟ್ ಪ್ಲಸ್ ಎಸ್ ಮಾದರಿಯಿಂದ ಸನ್‌ರೂಫ್ ಲಭ್ಯವಿದ್ದು, ಈ ಮಾದರಿಯ ಬೆಲೆಯು ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.00 ಲಕ್ಷಗಳಾಗಿದೆ. ಇದು 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯೊಂದಿಗೆ ಬರುತ್ತದೆ.

best-sunroof-cars-under-10-lakhs-in-india

ಈ ಕಾರುಗಳು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಸನ್‌ರೂಫ್‌ನೊಂದಿಗೆ ಸಿಗುವ ಬೆಸ್ಟ್‌ ಕಾರುಗಳಾಗಿವೆ. ಕೇವಲ ಸನ್‌ರೂಫ್ ಮಾತ್ರವಲ್ಲದೇ ಉತ್ತಮ ಪೀಚರ್ಸ್, ಪರ್ಫಾಮೆನ್ಸ್ ಕೂಡ ನೀಡುತ್ತವೆ. ಈ ಎಲ್ಲಾ ಕಾರುಗಳು ಪ್ರಸ್ತುತ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಭಾರೀ ಪೈಪೋಟಿ ಹೊಂದಿರುವ ಸಣ್ಣ ಫ್ಯಾಮಿಲಿ ಕಾರುಗಳಾಗಿವೆ. ಇವುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 11, 2024, 13:12 [IST]
English summary
Best sunroof cars under 10 lakhs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+