Bharat NCAP: ಮತ್ತೆ ನಂಬಿಕೆ ಗಟ್ಟಿಯಾಯಿತು.. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್

ದೇಶದ ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ - Bharat NCAP) ನಡೆಸುವ ಕ್ರ್ಯಾಶ್ ಟೆಸ್ಟ್‌ನಲ್ಲಿ ಟಾಟಾ ಹ್ಯಾರಿಯರ್ (Tata Harrier) ಮತ್ತು ಸಫಾರಿ (Safari) ಕಾರುಗಳಂತೆ ಟಾಟಾ ಪಂಚ್ ಇವಿ (Tata Punch EV) ಕೂಡ 5-ಸ್ಟಾರ್ ರೇಟಿಂಗ್ ಪಡೆದಿದೆ. ಈ ಮೂಲಕ 'ಟಾಟಾ ಮೋಟಾರ್ಸ್' ಮತ್ತೊಮ್ಮೆ ವಿಶ್ವಾಸಾರ್ಹ ಕಾರು ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಪಂಚ್ ಇವಿಯು ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ಅದಕ್ಕೆ ತಕ್ಕಂತೆ ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಟಾಟಾ ಪಂಚ್ ಇವಿಯ 'ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್' ರೂಪಾಂತರ (ವೇರಿಯೆಂಟ್)ವನ್ನು ಒಳಪಡಿಸಲಾಗಿತ್ತು. ಆದಾಗ್ಯೂ ಈ ಫಲಿತಾಂಶವು ಎಲ್ಲ ಮಾದರಿಗಳಿಗೆ ಅನ್ವಯಿಸುತ್ತದೆ. ಈ ಕಾರು ವಯಸ್ಕರ ರಕ್ಷಣೆ ವಿಭಾಗ (Adult Occupant Protection)ದಲ್ಲಿ 32ಕ್ಕೆ 31.46 ಅಂಕಗಳನ್ನು ಪಡೆದಿದ್ದರೆ, ಮಕ್ಕಳ ರಕ್ಷಣೆ ವಿಭಾಗ (Child Occupant Protection)ದಲ್ಲಿ 49ಕ್ಕೆ 45 ಅಂಕಗಳನ್ನು ಗಳಿಸಿದೆ.

Bharat NCAP Tata Punch EV Get 5 Star Rating Details

ಅದೇ ರೀತಿಯಲ್ಲಿ ಮುಂಭಾಗವನ್ನು ತಡೆಗೋಡೆಗೆ ಗುದ್ದಿಸಿ ಮಾಡಿದ ಪರೀಕ್ಷೆ (Frontal Offset Deformable Barrier Test)ಯಲ್ಲಿ 16ಕ್ಕೆ 15.71 ಮತ್ತು ಬದಿಗಳಿಗೆ ಡಿಕ್ಕಿಯೊಡೆಸಿ ನಡೆಸುವ ಪರೀಕ್ಷೆ (Side Movable Deformable Barrier Test)ಯಲ್ಲಿ 16ಕ್ಕೆ 15.74 ಅಂಕಗಳನ್ನು ಪಡೆದಿದೆ. ಈ ಮೂಲಕ 5-ಸ್ಟಾರ್ ರೇಟಿಂಗ್ ಅನ್ನು ತನ್ನದಾಗಿಸಿಕೊಂಡಿದೆ.

ಹೊಸ ಟಾಟಾ ಪಂಚ್ ಇವಿಯು ಗರಿಷ್ಠ ಸಂಖ್ಯೆಯ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್‌ಬೆಲ್ಟ್ ರಿಮೈಂಡರ್ ಸಿಸ್ಟಮ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

Bharat NCAP Tata Punch EV Get 5 Star Rating Details

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್ ಇವಿ ರೂ.10.99 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಎಂಪವರ್ಡ್ ಪ್ಲಸ್ ಎಂಬ ರೂಪಾಂತರಗಳು ಹಾಗೂ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಓಡಾಟವನ್ನು ನಡೆಸಬಹುದು.

ಈ ಕಾರು 25 ಕೆಡಬ್ಲ್ಯೂಹೆಚ್ ಮತ್ತು 35 ಕೆಡಬ್ಲ್ಯೂಹೆಚ್ ಬ್ಯಾಟರಿ ಆಯ್ಕೆಯನ್ನು ಹೊಂದಿದೆ. ಕ್ರಮವಾಗಿ ಸಂಪೂರ್ಣ ಚಾರ್ಜ್‌ನಲ್ಲಿ 315 ರಿಂದ 421 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಏರ್ ಪ್ಯೂರಿಫೈಯರ್, ಸನ್‌ರೂಫ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Bharat NCAP Tata Punch EV Get 5 Star Rating Details

ಟಾಟಾ ಪಂಚ್ ಇವಿಯಂತೆ ನೆಕ್ಸಾನ್ ಇವಿ (Nexon EV) ಸಹ ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 29.86 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.95 ಅಂಕಗಳನ್ನು ಪಡೆದಿದೆ. ನೆಕ್ಸಾನ್ ಇವಿಯು 6 ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಒಳಗೊಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 13, 2024, 14:05 [IST]
English summary
Bharat ncap tata punch ev get 5 star rating details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+