ಎಲೆಕ್ಟ್ರಿಕ್ ವಾಹನ ಮಾಲೀಕರೇ ಚಿಂತೆ ಬೇಡ... ನಿಮ್ಮ ಬೆನ್ನಿಗೆ ನಿಂತಿದೆ 'ಭಾರತ್ ಪೆಟ್ರೋಲಿಯಂ'

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), 'ಮಹಾರತ್ನ' ಮತ್ತು ಫಾರ್ಚೂನ್ ಗ್ಲೋಬಲ್ 500 ಕಂಪನಿಯು ಬೆಂಗಳೂರಿನಲ್ಲಿ ನೆಲೆಗೊಂಡಿರುವ ಪ್ರಮುಖ ಇ-ಮೊಬಿಲಿಟಿ ಸೇವಾ ಪೂರೈಕೆದಾರರಾದ ಅಯೊನೇಜ್ (IONAGE)ನೊಂದಿಗೆ ಪಾಲುದಾರಿಕೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಈ ಕಾರ್ಯತಂತ್ರದ ಸಹಯೋಗವು ಭಾರತದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಅಯೊನೇಜ್ ವಿವಿಧ ಚಾರ್ಜ್ ಪಾಯಿಂಟ್ ಆಪರೇಟರ್‌ಗಳಿಂದ ಚಾರ್ಜಿಂಗ್ ಸ್ಟೇಷನ್‌ಗಳನ್ನು ಒಟ್ಟುಗೂಡಿಸಿ, ಗ್ರಾಹಕರಿಗೆ ಒಂದೇ ವೇದಿಕೆಯ ಮೂಲಕ EV ಚಾರ್ಜರ್‌ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.

ಎಲೆಕ್ಟ್ರಿಕ್ ಚಲನಶೀಲತೆಯತ್ತ ಭಾರತದ ಪರಿವರ್ತನೆಯು ಸರ್ಕಾರದ ಬೆಂಬಲ ಮತ್ತು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯಿಂದ ವೇಗವಾಗಿ ಮುನ್ನಡೆಯುತ್ತಿದೆ. 2030ರ ವೇಳೆಗೆ ದೇಶವು ತನ್ನ ಮಹತ್ವಾಕಾಂಕ್ಷೆಯ EV ಅಳವಡಿಕೆ ಗುರಿಗಳನ್ನು ಸಾಧಿಸಲು ಈ ಒಪ್ಪಂದ ಸಹಾಯ ಮಾಡುತ್ತದೆ. ಭಾರತ್ ಪೆಟ್ರೋಲಿಯಂ ಮತ್ತು ಅಯೊನೇಜ್ ನಡುವಿನ ಈ ಪಾಲುದಾರಿಕೆಯು EV ಮೂಲಸೌಕರ್ಯವನ್ನು ವೇಗಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.

bharat-petroleum-and-ionage-extended-their-partnership

ಇನ್ನು 2028ರ ವೇಳೆಗೆ 1,00,000 EV ಚಾರ್ಜರ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸುವ ಗುರಿಯನ್ನು ಅಯೊನೇಜ್ ಹೊಂದಿದೆ. ಇತ್ತ ಪ್ರಮುಖ ಪಾಲುದಾರರೊಂದಿಗೆ ಭಾರತ್‌ ಪೆಟ್ರೋಲಿಯಂನ ನಿರಂತರ ಸಹಯೋಗವು ಭಾರತದ EV ಮೂಲಸೌಕರ್ಯವನ್ನು ಹೆಚ್ಚು ಸುಲಭವಾಗಿಸಲು ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಕಡೆಗೆ ದೇಶದ ಪರಿವರ್ತನೆಗೆ ತನ್ನ ಬದ್ಧತೆಯನ್ನು ತೋರುತ್ತಿದೆ.

ಅಯೊನೇಜ್ ತನ್ನ ಪ್ಲಾಟ್‌ಫಾರ್ಮ್‌ಗೆ EV ಚಾರ್ಜರ್‌ಗಳನ್ನು ಸಂಯೋಜಿಸುವ ಮೂಲಕ, BPCL ಗ್ರಾಹಕರ ಅನುಕೂಲತೆ ಮತ್ತು ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2030ರ ಭಾರತದ ಮಹತ್ವಾಕಾಂಕ್ಷೆಯ EV ಅಳವಡಿಕೆ ಗುರಿಗಳನ್ನು ಬೆಂಬಲಿಸುತ್ತದೆ. ಈ ಪಾಲುದಾರಿಕೆಯು ಸುಸ್ಥಿರ, ಭವಿಷ್ಯ-ಸಿದ್ಧ ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ BPCL ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ.

bharat-petroleum-and-ionage-extended-their-partnership

BPCL ವ್ಯಾಪಾರ ಮುಖ್ಯಸ್ಥ ಪರ್ದೀಪ್ ಗೋಯಲ್ ಮಾತನಾಡಿ, "BPCL ನಲ್ಲಿ, ಅಯೊನೇಜ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ವಿಸ್ತರಿಸಲು ಖುಷಿಯಾಗಿದೆ. ಗ್ರಾಹಕರ ಚಾರ್ಜಿಂಗ್ ಇನ್ಫ್ರಾ ಬಳಕೆಯ ಅನುಕೂಲತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಯೊನೇಜ್‌ನೊಂದಿಗೆ ನಮ್ಮ ಸಹಯೋಗವು ಗ್ರಾಹಕರಿಗೆ BPC ಚಾರ್ಜರ್‌ಗಳನ್ನು Ionage ನ ಒಟ್ಟುಗೂಡಿಸುವಿಕೆ ಪ್ಲಾಟ್‌ಫಾರ್ಮ್‌ನಿಂದ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

ಅಯೊನೇಜ್ ಸಿಇಒ ವಿಮಲ್ ಕುಮಾರ್ ಮಾತನಾಡಿ, ಅಯೊನೇಜ್‌ನಲ್ಲಿ ಎಲ್ಲಾ ಎಲೆಕ್ಟ್ರಿಕ್ ವಾಹನ ಮಾಲೀಕರು ಮತ್ತು ನಿರ್ವಾಹಕರ ಅಗತ್ಯಗಳನ್ನು ಬೆಂಬಲಿಸುವ ಒಂದು ಸುಸಂಬದ್ಧ ಮತ್ತು ಸಮಗ್ರ ಪರಿಸರ ವ್ಯವಸ್ಥೆಯನ್ನು ರಚಿಸುವುದು ನಮ್ಮ ದೃಷ್ಟಿಯಾಗಿದೆ. BPCL ನಂತಹ ದೃಢವಾದ ಮತ್ತು ಗೌರವಾನ್ವಿತ ಬ್ರ್ಯಾಂಡ್‌ನೊಂದಿಗೆ ಪಾಲುದಾರಿಕೆಯು ಹೆದ್ದಾರಿಗಳಲ್ಲಿ ವೇಗದ EV ಚಾರ್ಜಿಂಗ್ ಸೌಲಭ್ಯಗಳನ್ನು ನೀಡುತ್ತದೆ ಎಂದರು.

ಫಾರ್ಚೂನ್ ಗ್ಲೋಬಲ್ 500 ಕಂಪನಿ, ಭಾರತ್ ಪೆಟ್ರೋಲಿಯಂ ಎರಡನೇ ಅತಿದೊಡ್ಡ ಭಾರತೀಯ ತೈಲ ಕಂಪನಿಯಾಗಿದೆ. ತೈಲ ಮತ್ತು ಅನಿಲದ ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ವಲಯಗಳಲ್ಲಿ ಉಪಸ್ಥಿತಿಯೊಂದಿಗೆ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರ್ಕೆಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಭಾರತ್ ಪೆಟ್ರೋಲಿಯಂ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 20, 2024, 18:19 [IST]
English summary
Bharat petroleum and ionage extended their partnership
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+