BMW 5 Series: ಇಂದು ಬಹುನಿರೀಕ್ಷಿತ ಬಿಎಂಡಬ್ಲ್ಯೂ 5 ಸೀರೀಸ್ ಬಿಡುಗಡೆ.. ಹೇಗಿರಲಿದೆ?
ಜರ್ಮನಿ ಮೂಲದ ಬಿಎಂಡಬ್ಲ್ಯೂ (BMW) ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯ ಹೊಂದಿರುವ ಹಲವು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಪ್ರಮುಖ ಕ್ರೀಡಾ ತಾರೆಯರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಬಿಎಂಡಬ್ಲ್ಯೂ ಇಂಡಿಯಾ ಮುಂದಿನ ತಲೆಮಾರಿನ (Next-Generation) '5 ಸೀರೀಸ್' ಕಾರನ್ನು ಇಂದು (ಬುಧವಾರ) ಅದ್ದೂರಿಯಾಗಿ ಬಿಡುಗಡೆ ಮಾಡಲಿದೆ. ಇದು ಲಾಂಗ್ ವೀಲ್‌ಬೇಸ್ (Long Wheelbase - LWB) ರೂಪಾಂತರ (Variant) ಆಯ್ಕೆಯಲ್ಲಿ ಲಭ್ಯವಾಗಲಿದೆ. ನೂತನ ಕಾರಿನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ.
ವಿನ್ಯಾಸ: ತಿಂಗಳ ಹಿಂದೆಯೇ ಹೊಚ್ಚ ಹೊಸ ಬಿಎಂಡಬ್ಲ್ಯೂ 5 ಸೀರೀಸ್ (BMW 5 Series) ಸೆಡಾನ್‌ನ್ನು ದೇಶೀಯವಾಗಿ ಪ್ರದರ್ಶಿಸಲಾಗಿತ್ತು. ಆ ವೇಳೆ ವಿನ್ಯಾಸ (Disign)ದ ಬಗ್ಗೆ ಒಂದಷ್ಟು ವಿವರಗಳನ್ನು ಬಹಿರಂಗಪಡಿಸಲಾದರೂ ಸಾಕಷ್ಟು ಅಂಶಗಳನ್ನು ಮರೆಮಾಚಲಾಗಿತ್ತು. ಈ ಕಾರು ಹೊರಭಾಗದಲ್ಲಿ ಅತ್ಯಾಧುನಿಕ ಹೆಡ್‌ಲೈಟ್‌ಗಳು, ಟೈಲ್-ಲ್ಯಾಂಪ್‌ಗಳು ದೊಡ್ಡದಾದ ಸಿಗ್ನೇಚರ್ ಕಿಡ್ನಿ ಗ್ರಿಲ್ ಹಾಗೂ ನವೀನ ಶೈಲಿಯ ಬಂಪರ್‌ನ್ನು ಪಡೆದಿರಲಿದೆ ಎನ್ನಲಾಗಿದೆ.

ಸುತ್ತಳತೆ & ಆಸನ ಆಯ್ಕೆ: ಬಿಎಂಡಬ್ಲ್ಯೂ 5 ಸೀರೀಸ್ 5,175 ಎಂಎಂ ಉದ್ದ, 1,900 ಎಂಎಂ ಅಗಲ, 1,520 ಎಂಎಂ ಹಾಗೂ 3,105 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿರಲಿದೆ. ಜೊತೆಗೆ ಸ್ವಲ್ಪ ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿರುವ ಸಾಧ್ಯತೆಯಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
ಕಾರ್ಯಕ್ಷಮತೆ: ಮೊದಲಿಗೆ ಈ ಕಾರು 2.0-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ 48ವಿ ಮೈಲ್ಡ್-ಹೈಬ್ರಿಡ್ ಎಂಜಿನ್‌ನೊಂದಿಗೆ ಬರುವುದು ಖಚಿತವಾಗಿದ್ದು, 205 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 330 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ಬಿಡುಗಡೆಯಾಗಬಹುದು.
ವೈಶಿಷ್ಟ್ಯಗಳು: ಬಿಎಂಡಬ್ಲ್ಯೂ 5 ಸೀರೀಸ್ ಸೆಡಾನ್ 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 18-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಸರೌಂಡ್ ಸೌಂಡ್ ಸಿಸ್ಟಮ್, ಟೈಪ್-ಸಿ ಯುಎಸ್‌ಬಿ ಚಾರ್ಜಿಂಗ್ ಫೊರ್ಟ್ಸ್, 4-ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ.
ಸುರಕ್ಷತಾ ವೈಶಿಷ್ಟ್ಯಗಳು: ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಇದಕ್ಕಾಗಿ ಅನೇಕ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಕಾರ್ನೆರಿಂಗ್ ಬ್ರೇಕ್ ಅಸಿಸ್ಟ್, ಟ್ರೈಲರ್ ಸ್ಟೈಬಿಲಿಟಿ ಕಂಟ್ರೋಲ್ ಒಳಗೊಂಡಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳಿರಲಿವೆ ಎಂದು ಅಂದಾಜಿಸಲಾಗಿದೆ.
ಬೆಲೆ: ನೂತನ ಬಿಎಂಡಬ್ಲ್ಯೂ 5 ಸೀರೀಸ್ ಸೆಡಾನ್ ರೂ.75 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ. ಈ ಕಾರಿಗೆ ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ (Mercedes-Benz E-Class), ಆಡಿ ಎ6 (Audi A6) ಮತ್ತು ವೋಲ್ವೋ ಎಸ್90 (Volvo S90)ನಂತಹ ಐಷಾರಾಮಿ ಸೆಡಾನ್‌ಗಳು ಪ್ರಬಲವಾಗಿ ಸ್ಪರ್ಧೆಯೊಡ್ಡಲಿವೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








