BMW 620d M Sport: ಐಷಾರಾಮಿ ಬಿಎಂಡಬ್ಲ್ಯು 620ಡಿ ಎಂ ಸ್ಪೋರ್ಟ್ ಸಿಗ್ನೇಚರ್ ಬಿಡುಗಡೆ
ಬಿಎಂಡಬ್ಲ್ಯು 620ಡಿ ಎಂ (BMW 620d M)ಸ್ಪೋರ್ಟ್ ಸಿಗ್ನೇಚರ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಸ್ಥಳೀಯವಾಗಿ ಬಿಎಂಡಬ್ಲ್ಯು ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದಿಸಲಾಗಿದ್ದು, ಈ ಕಾರು ಈಗ ಡೀಸೆಲ್ ರೂಪಾಂತರದಲ್ಲಿ ಲಭ್ಯವಿದೆ. ಇಂದಿನಿಂದ ಎಲ್ಲಾ ಬಿಎಂಡಬ್ಲ್ಯು ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
BMW 620d M ಸ್ಪೋರ್ಟ್ ಸಿಗ್ನೇಚರ್ ರೂ. 78,90,000 ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ನಿಮಗೆ ಮಿನರಲ್ ವೈಟ್, ಟಾಂಜಾನೈಟ್ ಬ್ಲೂ, ಸ್ಕೈಸ್ಕ್ರಾಪರ್ ಗ್ರೇ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದ್ದು, ನ್ಯಾಚುರಲ್ ಲೆದರ್‌ನೊಂದಿಗೆ 'ಡಕೋಟಾ' ಕಾಗ್ನ್ಯಾಕ್‌ನಲ್ಲಿ ವಿಶೇಷವಾದ ಹೊಲಿಗೆ ಮತ್ತು ಪೈಪಿಂಗ್ ಜೊತೆಗೆ ಕಾಂಟ್ರಾಸ್ಟ್ ಮತ್ತು ಬ್ಲ್ಯಾಕ್ ಸಂಯೋಜನೆಯಲ್ಲಿ ಅಪ್ಹೋಲ್ಸ್ಟರ್ ಮಾಡಲಾಗಿದೆ.

BMW 620d M ಸ್ಪೋರ್ಟ್ ಸಿಗ್ನೇಚರ್ ವಿನ್ಯಾಸ: ಬಾಹ್ಯ ವಿನ್ಯಾಸವು ನೋಡಲು ತೀಕ್ಷ್ಣವಾಗಿ ಕಾಣುತ್ತದೆ. BMW ಕಿಡ್ನಿ ಗ್ರಿಲ್‌ನ ಬಾಹ್ಯರೇಖೆಗಳು ಮತ್ತು ಹೆಡ್‌ಲೈಟ್‌ಗಳು ಆಕರ್ಷಕವಾಗಿವೆ. ವಿಶಿಷ್ಟವಾದ BMW ಲೇಸರ್‌ಲೈಟ್, ಅಡಾಪ್ಟಿವ್ ಕಾರ್ಯನಿರ್ವಹಣೆಯೊಂದಿಗೆ 650 ಮೀಟರ್‌ಗಳವರೆಗೆ ಲೈಟ್ ಅನ್ನು ವಿತರಿಸುತ್ತದೆ. ಆಧುನಿಕವಾಗಿ ಕಾಣುವ ಮಸಲ್ ಲೈನ್‌ಗಳು, ಆಕರ್ಷಕ LED ಹಿಂಬದಿಯ ವಿನ್ಯಾಸ ಮತ್ತು ಕ್ರೋಮ್‌ನಲ್ಲಿ ಲೇಪಿತ ಫ್ರೀಫಾರ್ಮ್ ಟೈಲ್‌ಪೈಪ್‌ಗಳೊಂದಿಗೆ ಹಿಂಭಾಗವು ಆಕರ್ಷಣೆಯನ್ನು ಹೆಚ್ಚಿಸಿದೆ.
ಇಂಟೀರಿಯರ್: ಐಷಾರಾಮಿ ಸೌಕರ್ಯ ಮತ್ತು ಹೇಳಿಮಾಡಿಸಿದ ವಸ್ತು ಆಯ್ಕೆಯೊಂದಿಗೆ ವಿಶಾಲವಾಗಿದೆ. ಸೀಟ್‌ಗಳು ಸಂಪೂರ್ಣ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆಯೊಂದಿಗೆ ಮೆಮೊರಿ ಫಂಕ್ಷನ್ ಮತ್ತು ಚಾಲಕ ಮತ್ತು ಪ್ರಯಾಣಿಕರ ಬದಿಯಲ್ಲಿ ಸೊಂಟಕ್ಕೆ ಉತ್ತಮ ಸೌಕರ್ಯ ನೀಡುತ್ತವೆ. ಕಂಫರ್ಟ್ ಸೀಟ್‌ಗಳನ್ನು ಲೆದರ್ 'ಡಕೋಟಾ'ದಲ್ಲಿ ವಿಶೇಷವಾದ ಹೊಲಿಗೆ ಮತ್ತು ಕಾಂಟ್ರಾಸ್ಟ್ ಪೈಪಿಂಗ್‌ನೊಂದಿಗೆ ಕಪ್ಪು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ.

ಕಂಫರ್ಟ್ ಆಕ್ಸೆಸ್ ಸಿಸ್ಟಮ್ ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಲಾಕಿಂಗ್, ಟೈಲ್‌ಗೇಟ್‌ನ ಕಾಂಟ್ಯಾಕ್ಟ್‌ಲೆಸ್ ಓಪನಿಂಗ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ವಾಹನದಿಂದ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಹೋಗಲು ಅನುವು ಮಾಡಿಕೊಡುತ್ತದೆ. ಎರಡು ಭಾಗಗಳ ಪನಾರಮಿಕ್ ಗಾಜಿನ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ, ವೂಫರ್‌ಗಳೊಂದಿಗೆ ಹೈ-ಎಂಡ್ 16 ಸ್ಪೀಕರ್ ಸಿಸ್ಟಂ ಎಲ್ಲಾ ಆಸನಗಳಲ್ಲಿ ಆಡಿಯೊವನ್ನು ಉತ್ಪಾದಿಸುತ್ತದೆ.
ಹಿಂದಿನ ಸೀಟ್ ಎಂಟರ್‌ಟೈನ್‌ಮೆಂಟ್ ಪ್ರೊಫೆಷನಲ್ ಫುಲ್-ಎಚ್‌ಡಿ ತಂತ್ರಜ್ಞಾನದೊಂದಿಗೆ ಎರಡು 10.25" ಟಚ್‌ಸ್ಕ್ರೀನ್ ಮಾನಿಟರ್‌ಗಳು, ಬ್ಲೂ-ರೇ ಪ್ಲೇಯರ್, ಸ್ಕ್ರೀನ್ ಮಿರರಿಂಗ್ ಫಂಕ್ಷನ್ ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿದೆ. ಕಾರು ವಿಸ್ತೃತ ವೈಶಿಷ್ಟ್ಯಗಳೊಂದಿಗೆ 4-ಝೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹೊಂದಿದೆ. ಎಲೆಕ್ಟ್ರೋಪ್ಲೇಟೆಡ್ ಕಂಟ್ರೋಲ್‌ಗಳು, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ರೋಲರ್ ಸನ್‌ಬ್ಲೈಂಡ್‌ಗಳಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಪವರ್‌ಟ್ರೇನ್: BMW ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನವನ್ನು ಹೊಂದಿದೆ. BMW 620d ನ 2 - ಲೀಟರ್ 4 - ಸಿಲಿಂಡರ್ ಡೀಸೆಲ್ ಎಂಜಿನ್ 140 kW / 190 hp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು 1,750 - 2,500 ನಲ್ಲಿ ಉತ್ಪಾದಿಸುತ್ತದೆ. ಕಾರು ಕೇವಲ 7.9 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ಪಡೆಯುತ್ತದೆ.
8 -ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಯವಾದ, ಗೇರ್‌ಶಿಫ್ಟ್‌ಗಳನ್ನು ನಿರ್ವಹಿಸುತ್ತದೆ. ಸ್ಟೀರಿಂಗ್ ವೀಲ್ ಪ್ಯಾಡಲ್ ಶಿಫ್ಟರ್‌ಗಳು ಮತ್ತು ಬ್ರೇಕಿಂಗ್ ಕಾರ್ಯ ಸೇರಿದಂತೆ ಕ್ರೂಸ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಸ್ಟ್ಯಾಂಡರ್ಡ್ ಅಡಾಪ್ಟಿವ್ 2 - ಆಕ್ಸಲ್ ಏರ್ ಸಸ್ಪೆನ್ಷನ್ ಅದರ ಆಟೋ - ಲೆವೆಲಿಂಗ್ ವೈಶಿಷ್ಟ್ಯದೊಂದಿಗೆ ಲೋಡ್ ಲೆಕ್ಕಿಸದೆ ನಿರಂತರ ಎತ್ತರವನ್ನು ನಿರ್ವಹಿಸುತ್ತದೆ.
ಡ್ರೈವಿಂಗ್ ಎಕ್ಸ್‌ಪೀರಿಯನ್ಸ್ ಕಂಟ್ರೋಲ್ ಸ್ವಿಚ್‌ನೊಂದಿಗೆ ಆಯ್ಕೆ ಮಾಡಿದ ಮೋಡ್‌ಗೆ ಅನುಗುಣವಾಗಿ ಡ್ಯಾಂಪರ್ ಪ್ರತಿಕ್ರಿಯೆ ಸೆಟ್ಟಿಂಗ್‌ಗಳು ಬದಲಾಗುತ್ತವೆ. ಇದು ಡ್ರೈವಿಂಗ್ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ಡ್ರೈವರ್‌ಗೆ ವಿವಿಧ ಮೋಡ್‌ಗಳ ನಡುವೆ ಆಯ್ಕೆ ಮಾಡಲು ಅನುಮತಿಸುತ್ತದೆ. ಕಂಫರ್ಟ್, ಕಂಫರ್ಟ್+, ಸ್ಪೋರ್ಟ್, ಇಕೋ ಪ್ರೊ ಮತ್ತು ಅಡಾಪ್ಟಿವ್ ಮೋಡ್‌ಗಳಿವೆ.


Click it and Unblock the Notifications








