1.33 ಕೋಟಿ ರೂ. ಬೆಲೆಯ ಶ್ರೀಮಂತರ ಬಹುಬೇಡಿಕೆಯ ಕಾರಿದು... ವಿಶೇಷತೆಗಳೇನು?
ಭಾರತದಲ್ಲಿ BMW ತನ್ನ ಐಷಾರಾಮಿ ಎಸ್‌ಯುವಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು BMW X7 ಸಿಗ್ನೇಚರ್ ಆವೃತ್ತಿಯಾಗಿದ್ದು, ಕಾರು ಪ್ರತ್ಯೇಕವಾಗಿ ಪೆಟ್ರೋಲ್ xDrive40i ರೂಪಾಂತರದಲ್ಲಿ ಲಭ್ಯವಿರುತ್ತದೆ. ಇದರ ಬೆಲೆಯು ರೂ. 1,33,00,000 (ಎಕ್ಸ್ ಶೋರೂಂ) ಇದೆ. ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸೆಂಟರ್ ಆಂಬಿಯೆಂಟ್ ಲೈಟ್ ಬಾರ್‌ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದನ್ನು ಚೆನ್ನೈನಲ್ಲಿರುವ BMW ಗ್ರೂಪ್ ಪ್ಲಾಂಟ್‌ನಲ್ಲಿ ಈ ಕಾರನ್ನು ಪ್ರತ್ಯೇಕವಾಗಿ ಉತ್ಪಾದಿಸಲಾಗುತ್ತದೆ. ಎಂಜಿನ್, ಡಿಸೈನ್, ಫೀಚರ್‌ಗಳ ಬಗ್ಗೆ ಇಲ್ಲಿ ತಿಳಿಯೋಣ.
ಎಂಜಿನ್: BMW X7 ಸಿಗ್ನೇಚರ್ ಆವೃತ್ತಿಯಲ್ಲಿ 3-ಲೀಟರ್ 6-ಸಿಲಿಂಡರ್ ಇನ್-ಲೈನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. 8-ಸ್ಪೀಡ್ ಸ್ಟೆಪ್ಟ್ರಾನಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 381 hp ಪವರ್ ಮತ್ತು 520 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ, ಎಂಜಿನ್ 48V ಎಲೆಕ್ಟ್ರಿಕಲ್ ಮೋಟರ್ ಅನ್ನು ಹೊಂದಿದೆ.

ಇದು 12hp ಪವರ್ ಮತ್ತು 200Nm ಟಾರ್ಕ್ ಉತ್ಪಾದನೆಯೊಂದಿಗೆ ಇನ್ನೂ ಉತ್ತಮ ಪವರ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕಾರು ಕೇವಲ 5.8 ಸೆಕೆಂಡುಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆಯುತ್ತದೆ. ಹಾಗೆಯೇ ಕಂಫರ್ಟ್, ಎಫಿಷಿಯೆಂಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಎಂಬ ವಿಭಿನ್ನ ಡ್ರೈವಿಂಗ್ ಸೆಟಪ್‌ಗಳನ್ನು ನೀಡಲಾಗಿದೆ.
ಡಿಸೈನ್: ಹೊಸ BMW X7 ಮುಂಭಾಗದಲ್ಲಿ Swarovski ಗಾಜಿನ ಕಟ್ ಕ್ರಿಸ್ಟಲ್ ಹೆಡ್ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ದೊಡ್ಡ ಕಿಡ್ನಿ ಗ್ರಿಲ್ ಕ್ರೋಮ್ ಹೈಲೈಟ್‌ನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಡಬಲ್ ಬಾರ್‌ಗಳೊಂದಿಗೆ ಬರುತ್ತದೆ. ಅಲ್ಯೂಮಿನಿಯಂ ಸ್ಯಾಟಿನೇಟೆಡ್ ರೂಫ್ ರೈಲ್ಸ್ ಮತ್ತು ಅಲ್ಯೂಮಿನಿಯಂ ಸ್ಯಾಟಿನೇಟೆಡ್ ಬಾಹ್ಯ ಅಂಶಗಳು ವಾಹನದ ಐಷಾರಾಮಿ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ಇಂಟೀರಿಯರ್: ಹೊಸ ಡಿಜಿಟಲ್ BMW ಕರ್ವ್ಡ್ ಡಿಸ್ಪ್ಲೇ, ವಿಶಿಷ್ಟವಾದ BMW ಡ್ರೈವರ್-ಓರಿಯೆಂಟೇಶನ್, ಕಣ್ಣಿಗೆ ಕಟ್ಟುವ ಗ್ರಾಫಿಕ್ಸ್, ಆಧುನಿಕ ಬಣ್ಣಗಳು ಮತ್ತು ಫ್ಯೂಚರಿಸ್ಟಿಕ್ ಟೆಕ್ಶ್ಚರ್‌ಗಳ ಇಂಟರ್‌ಪ್ಲೇ ಜೊತೆಗೆ ಸ್ಪಷ್ಟವಾದ ವಿನ್ಯಾಸವು ತಲ್ಲೀನಗೊಳಿಸುವ ನೋಟವನ್ನು ಸೃಷ್ಟಿಸುತ್ತದೆ. ಒಟ್ಟಾರೆ BMW X7 M ಸ್ಪೋರ್ಟ್ ಸಿಗ್ನೇಚರ್‌ನ ಒಳಭಾಗವು ನವೀನ ಮತ್ತು ವಿಶೇಷವಾದ ವಾತಾವರಣವನ್ನು ಹೊಂದಿದೆ.
ವೈಶಿಷ್ಟ್ಯಗಳು: ಹೊಸ BMW X7 M ನಲ್ಲಿ ನೀಡಲಾದ ಕ್ರಿಸ್ಟಲ್ ಡೋರ್ ಪಿನ್‌ಗಳು ಕಾರಿನೊಳಗೆ ಒಟ್ಟಾರೆ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಸ್ಪೋರ್ಟ್ ಸಿಗ್ನೇಚರ್‌ನಲ್ಲಿ ದೊಡ್ಡದಾದ ಸ್ಕೈ ಲೌಂಜ್ ಪನಾರಮಿಕ್ ಗ್ಲಾಸ್ ಸನ್‌ರೂಫ್ ಮೂರನೇ ಸಾಲಿನವರೆಗೆ ವಿಸ್ತರಿಸಿದೆ. ಸ್ಕೈ ಲೌಂಜ್ 15,000 ಕ್ಕೂ ಹೆಚ್ಚು ಪ್ರತ್ಯೇಕ ಲೈಟ್ ಪಾಯಿಂಟ್‌ಗಳೊಂದಿಗೆ ಬರುತ್ತದೆ.

ನಿಜವಾದ ಲೆದರ್ ಮೆರಿನೊದಲ್ಲಿ ಲೇಪಿತ ಕ್ಯಾಪ್ಟನ್ ಸೀಟ್‌ಗಳು ಹಿಂದಿನ ಸೀಟಿನ ಪ್ರಯಾಣಿಕರಿಗೆ ಪರಿಪೂರ್ಣ ವೈಯಕ್ತಿಕ ಐಷಾರಾಮಿ ಅನುಭವವನ್ನು ನೀಡುತ್ತವೆ. ಹಿಂಭಾಗದ ಸೀಟಿನ ಪ್ರಯಾಣಿಕರಿಗೆ ಅಲ್ಕಾಂಟರಾದಲ್ಲಿ ಬ್ಯಾಕ್‌ರೆಸ್ಟ್ ಕುಶನ್‌ಗಳು ಪ್ರಮಾಣಿತವಾಗಿ ಲಭ್ಯವಿದೆ. 16 ಸ್ಪೀಕರ್‌ಗಳೊಂದಿಗೆ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್ ನೀಡಲಾಗಿದೆ.
ಇದಲ್ಲದೆ, ಪ್ರಿಸ್ಮಾಟಿಕ್ ರಚನೆಯ ಗೇರ್ ಸೆಲೆಕ್ಟರ್, ಐಡ್ರೈವ್ ಕಂಟ್ರೋಲ್ ವೀಲ್, ಆಡಿಯೊ ಕಂಟ್ರೋಲ್ ಬಟನ್ ಮತ್ತು ಸ್ಟಾರ್ಟ್/ಸ್ಟಾಪ್ ಬಟನ್ ನೀಡಲಾಗಿದೆ. ಹಾಗಯೇ BMW X7 M ಸ್ಪೋರ್ಟ್ ಸಿಗ್ನೇಚರ್‌ನ ಪ್ರೀಮಿಯಂ ವೈಶಿಷ್ಟ್ಯವೆಂದರೆ ಸೆಂಟರ್ ಆಂಬಿಯೆಂಟ್ ಲೈಟ್ ಬಾರ್, ಇದು 14 ಬಣ್ಣಗಳಲ್ಲಿ ಲಭ್ಯವಿರುವ ಒಟ್ಟಾರೆ ಆಂಬಿಯೆಂಟ್ ಲೈಟಿಂಗ್ ಆಗಿದೆ.


Click it and Unblock the Notifications








