ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ 25 ಲಕ್ಷ ರೂ ಖರ್ಚು ಮಾಡಿದ ಭೂಪ: ದುಡ್ಡಿನ ಮತ್ತಿದು ಎಂದು ದೂರಿದ ನೆಟ್ಟಿಗರು!
ಸಾಧಾರಣವಾಗಿ ಕಾರು ಕೊಳ್ಳುವವರ ಅತೀ ದೊಡ್ಡ ಗುರಿಗಳಲ್ಲಿ ಒಂದು ತನ್ನ ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕು ಎಂದುಕೊಳ್ಳುವುದು. ವಾಹನಗಳನ್ನು ರಿಜಿಸ್ಟರ್ ಮಾಡುವಾಗ ಒಮ್ಮೊಮ್ಮೆ ನಮ್ಮ ಅದೃಷ್ಟವಿದ್ದಂತೆ ಫ್ಯಾನ್ಸಿ ನಂಬರ್‌ಗಳು ಸಿಗುತ್ತವೆ. ಒಮ್ಮೊಮ್ಮೆ ಸಾಕಷ್ಟು ಹಣ ಖರ್ಚು ಮಾಡಿ ತಮ್ಮ ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸುತ್ತಾರೆ.
ಇದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ತನ್ನ ದುಬಾರಿ ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸಲು ಒಂದು ಕಾರಿನ ದುಡ್ಡನ್ನೇ ಖರ್ಚು ಮಾಡಿರುವ ಘಟನೆ ನಡೆದಿದೆ. ಹೌದು, ಈ ರೀತಿಯ ಘಟನೆ ನಾವು ಈ ಹಿಂದೆ ನೋಡಿದರೂ, ಇದು ಮಾತ್ರ ವಿಶಿಷ್ಟವಾಗಿದೆ. ಇದಕ್ಕೆ ಕಾರಣವೆಂದರೆ ಆ ವ್ಯಕ್ತಿ ಈ ನಂಬರ್ ಪ್ಲೇಟ್‌ಗೆ ಖರ್ಚು ಮಾಡಿದ ಒಟ್ಟು ಮೊತ್ತ ಸುಮಾರು 25.5 ಲಕ್ಷ ರೂಪಾಯಿಗಳು ಮತ್ತು ಆತ ಪಡೆದುಕೊಂಡ ನಂಬರ್ 9999.

ತೆಲಂಗಾಣದ ಆಂಧ್ರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಸೋನಿ ಟ್ರಾನ್ಸ್‌ಪೋರ್ಟ್ ಸೊಲ್ಯೂಷನ್‌ನ ಮಾಲೀಕ ಈ ನಂಬರ್ ಪ್ಲೇಟ್ ಅನ್ನು ತನ್ನ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರಿಗಾಗಿ ಖರಿದಿಸಿದ್ದಾನೆ ಎಂದು ತಿಳಿದು ಬಂದಿದೆ. ಸುಮಾರು 2.1 ಕೋಟಿಯ ಟೊಯೋಟಾ ಲ್ಯಾಂಡ್ ಕ್ರೂಸರ್ ಎಲ್‌ಎಕ್ಸ್ ಲಕ್ಷುರಿ ಎಸ್‌ಯುವಿ ಕಾರಿನ ನಂಬರ್ ಈಗ TG-09 9999.
ಈ ಹೊಸ ನಂಬರ್ ಪ್ಲೇಟ್ ಅನ್ನು ಖರೀದಿಸುವ ಮೂಲಕ ಸೋನಿ ಟ್ರಾನ್ಸ್‌ಪೋರ್ಟ್ ಸೊಲ್ಯೂಷನ್ ತೆಮಂಗಾಣದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಈ ಹಿಂದೆಂದೂ ಇಷ್ಟು ದೊಡ್ಡ ಮೊತ್ತದಲ್ಲಿ ನಂಬರ್ ಪ್ಲೇಟ್ ಬಿಕರಿಯಾಗಿರಲಿಲ್ಲ. ಇದಕ್ಕಿಂತ ಮುಂಚೆ ಅತೀ ಹೆಚ್ಚು ದರಕ್ಕೆ ಅಂದರೆ ನಂಬರ್ ಎಂದರೆ 21.6 ಲಕ್ಷ ರೂ.ಗೆ 9999 ನಂಬರ್ ಮಾರಾಟವಾಗಿತ್ತು.

ಇನ್ನು ಈ ನಂಬರ್ ಅನ್ನು ಅಳವಡಿಸಲಾಗಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಬಗ್ಗೆ ನೋಡುವುದಾದರೆ, ಈ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ನೇರವಾದ ಬಾಡಿ ಪ್ಯಾನೆಲ್‌ಗಳು ಮತ್ತು ಎತ್ತರದ ಕಂಬಗಳನ್ನು ಸ್ಕ್ವೇರ್-ಆಫ್ ವೀಲ್ ಆರ್ಚ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಉಳಿಸಿಕೊಂಡಿದೆ. ಈ ಎಸ್‍ಯುವಿಯ ಕ್ಯಾಬಿನ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ ಮತ್ತು ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ.
ಹೆಚ್ಚು ಜನಪ್ರಿಯವಾಗಿರುವ ಆಫ್-ರೋಡರ್‌ನ ಸಲಕರಣೆಗಳ ಪಟ್ಟಿಯು ಎಲ್ಲಾ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಹಲವಾರು ಸೌಕರ್ಯ, ಅನುಕೂಲತೆ, ಮನರಂಜನೆ, ಸಹಾಯಕ ಮತ್ತು ಸುರಕ್ಷತೆ ಆಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇನ್ನು ಬಹಿರಂಗವಾದ ಮಾಹಿತಿಗಳ ಪ್ರಕಾರ, ಮೂರು ಇಂಟಿರಿಯರ್ ಬಣ್ಣದ ಥೀಮ್‌ಗಳನ್ನು ಒಳಗೊಂಡಿದೆ.

ಐದು ಬಾಹ್ಯ ಬಣ್ಣಗಳನ್ನು ಹೊಂದಿರುವ ಈ ಕಾರು ಪ್ರೆಶಿಯಸ್ ವೈಟ್ ಪರ್ಲ್, ಸೂಪರ್ ವೈಟ್, ಡಾರ್ಕ್ ರೆಡ್ ಮೈಕಾ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂ ಮೈಕಾ ಎಂಬ ಬಣ್ಣಗಳಲ್ಲಿ ಲಭ್ಯವಿದೆ. ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ.
ಇದರಲ್ಲಿ 3.3 ಎಲ್ ವಿ6 ಟರ್ಬೊ-ಡೀಸೆಲ್ ಎಂಜಿನ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದೆ. ಇನ್ನು 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸತ್ತದೆ.


Click it and Unblock the Notifications