ಅತ್ಯಂತ ಕೈಗೆಟುಕುವ ಬೆಲೆಗೆ ಪ್ರೀಮಿಯಂ ವೈರ್‌ಲೆಸ್ ಚಾರ್ಜರ್ ಹೊಂದಿರುವ ಕಾರುಗಳಿವು!
ಚಾರ್ಜರ್ ಇಲ್ಲದೆಯೇ ಸ್ಮಾರ್ಟ್ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಹೊಸ ತಂತ್ರಜ್ಞಾನವು ಅಭಿವೃದ್ಧಿಗೊಂಡಿದೆ. ಇದನ್ನೇ ವೈರ್‌ಲೆಸ್ ಚಾರ್ಜಿಂಗ್ ಎಂದು ಸಹ ಕರೆಯಲಾಗುತ್ತದೆ, ಹೊಸ ತಂತ್ರಜ್ಞಾನವನ್ನು ಅಷ್ಟೇ ವೇಗವಾಗಿ ಅಳವಡಿಸಿಕೊಳ್ಳುವ ಉದ್ಯಮಗಳಲ್ಲಿ ಆಟೋಮೊಬೈಲ್ಸ್ ಕೂಡ ಒಂದು. ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯನ್ನು ಸದ್ಯ ಹಲವು ಕಾರುಗಳಲ್ಲಿ ಪ್ರೀಮಿಯಂ ಫೀಚರ್ ಆಗಿ ನೀಡಲಾಗುತ್ತಿದೆ. ಕೈಗೆಟುಕುವ ಶ್ರೇಣಿಯ ಕಾರುಗಳಲ್ಲಿ ವೈರ್‌ಲೆಸ್ ಚಾರ್ಜರ್‌ಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ವೈರ್‌ಲೆಸ್ ಚಾರ್ಜರ್ ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳನ್ನು ಇಲ್ಲಿ ನೋಡೋಣ.
ರೆನಾಲ್ಟ್ ಟ್ರೈಬರ್: ಎಂಪಿವಿ ವಿಭಾಗದಲ್ಲಿ ರೆನಾಲ್ಟ್ ಟ್ರೈಬರ್ ಭಾರತದ ಅತ್ಯಂತ ಕೈಗೆಟುಕುವ ಎಂಪಿವಿಯಾಗಿದೆ. ಇದರ ಟಾಪ್-ಸ್ಪೆಕ್ RXZ ಟ್ರಿಮ್‌ನಲ್ಲಿ ವೈರ್‌ಲೆಸ್ ಚಾರ್ಜರ್ ಪಡೆಯಬಹುದು. ರೆನಾಲ್ಟ್ ಟ್ರೈಬರ್ ಆರ್‌ಎಕ್ಸ್‌ಝಡ್ ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.22 ಲಕ್ಷಗಳಾಗಿದೆ. ರೆನಾಲ್ಟ್ ಟ್ರೈಬರ್ 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್: ಇತ್ತೀಚೆಗಷ್ಟೆ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ಸ್ವಿಫ್ಟ್ ತನ್ನ ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ + ವೇರಿಯೆಂಟ್‌ಗಳಲ್ಲಿ ವೈರ್‌ಲೆಸ್ ಚಾರ್ಜರ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಝಡ್ಎಕ್ಸ್ಐ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.29 ಲಕ್ಷಗಳಾಗಿದೆ. ಸ್ವಿಫ್ಟ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯೊಂದಿಗೆ ಬರುತ್ತದೆ.
ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್: ಖರೀದಿದಾರರು ವೈರ್‌ಲೆಸ್ ಚಾರ್ಜರ್ ಹೊಂದಿರುವ ಅತ್ಯಂತ ಕೈಗೆಟುಕುವ ಕಾರನ್ನು ಹುಡುಕುತ್ತಿದ್ದರೇ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಪರಿಶೀಲಿಸಬಹುದು. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಸ್ಪೋರ್ಟ್ಜ್ ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.36 ಲಕ್ಷಗಳಾಗಿದೆ.

ಸ್ಪೋರ್ಟ್ಜ್ ವೇರಿಯೆಂಟ್ ಬೆಲೆಯನ್ನು ಇಲ್ಲಿ ಏಕೆ ಹೇಳುತ್ತಿದ್ದೇವೆ ಎಂದರೆ ವೈರ್‌ಲೆಸ್ ಚಾರ್ಜರ್ ಫೀಚರ್ ಕೇವಲ ಸ್ಪೋರ್ಟ್ಜ್ ರೂಪಾಂತರದಲ್ಲಿ ಮಾತ್ರ ನೀಡಲಾಗುತ್ತದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ 1.2 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಟಾಟಾ ಪಂಚ್: ಟಾಟಾ ಪಂಚ್ ತನ್ನ ಟಾಪ್-ಸ್ಪೆಕ್ ಟ್ರಿಮ್ ಕ್ರಿಯೇಟಿವ್ + ನಲ್ಲಿ ವೈರ್‌ಲೆಸ್ ಚಾರ್ಜರ್ ಅನ್ನು ನೀಡುತ್ತದೆ. ಹೊಸ ಟಾಟಾ ಪಂಚ್ ಕ್ರಿಯೇಟಿವ್ + ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.99 ಲಕ್ಷಗಳಾಗಿದೆ. ಟಾಟಾ ಪಂಚ್ ಅನ್ನು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಖರೀದಿಸಬಹುದು.

ರೆನಾಲ್ಟ್ ಕಿಗರ್: ರೆನಾಲ್ಟ್ ಕಿಗರ್ ತನ್ನ ಆರ್‌ಎಕ್ಸ್ ಝಡ್ ರೂಪಾಂತರದಲ್ಲಿ ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿದೆ. ರೆನಾಲ್ಟ್ ಕಿಗರ್ RXZ ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.79 ಲಕ್ಷಗಳಾಗಿದೆ. ಕಿಗರ್ 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications