ಸನ್‌ರೂಫ್ ಎಸ್‌ಯುವಿಗಳನ್ನು ಖರೀದಿಸುವ ಪ್ಲಾನ್ ಇದೆಯೇ? ಬಜೆಟ್ ಬೆಲೆಯ ಬೆಸ್ಟ್ ಕಾರುಗಳು!

ಇತ್ತೀಚೆಗೆ ಭಾರತೀಯ ಕಾರು ಖರೀದಿದಾರರಲ್ಲಿ ಸನ್‌ರೂಫ್ ಇರುವ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಾರು ತಯಾರಕರು ಸಣ್ಣ ಎಸ್‌ಯುವಿ, ಸೆನಾಡ್‌ಗಳಲ್ಲಿ ಈಗ ಸನ್‌ರೂಫ್ ನೀಡುತ್ತಿದ್ದಾರೆ. ಒಟ್ಟಾರೆ ಈಗ ಸನ್‌ರೂಫ್ ಎಂಬುದು ಸಾಮಾನ್ಯ ವಿಷಯವಾಗಿಬಿಟ್ಟಿದೆ, ಕ್ಯಾಬಿನ್‌ಗೆ ಪ್ರೀಮಿಯಂ ಅನುಭವವನ್ನು ಹೆಚ್ಚಿಸುವ ಈ ಸನ್‌ರೂಫ್ ಕಾರುಗಳು ಕೈಗೆಟುಕುವ ಬೆಲೆಗೆ ಸಿಗುತ್ತಿವೆ. ಮಹೀಂದ್ರಾ, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್‌ನಂತಹ ಸನ್‌ರೂಫ್ ಹೊಂದಿರುವ ಟಾಪ್ ಕಾರುಗಳ ಬಗ್ಗೆ ಇಲ್ಲಿ ಇಲ್ಲಿ ನೋಡೋಣ.

ಮಹೀಂದ್ರಾ XUV 3XO: ಮಹೀಂದ್ರಾ XUV 3XO ಪ್ರಸ್ತುತ ಪನಾರಮಿಕ್ ಸನ್‌ರೂಫ್ ಜೊತೆಗೆ ಸೆಗ್ಮೆಂಟಿನಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಕಾರಾಗಿದೆ. ಇದರ ಬೆಲೆಗಳು 12.49 ಲಕ್ಷ ರೂ. (ಎಕ್ಸ್‌ ಶೋರೂಂ) ಗಳಿಂದ ಪ್ರಾರಂಭವಾಗುತ್ತವೆ. ಇದು ಪ್ರಸ್ತುತ ಭಾರತದ ಅತ್ಯಂತ ಕೈಗೆಟುಕುವ ಸನ್‌ರೂಪ್ ಹೊಂದಿರುವ ಎಸ್‌ಯುವಿಯಾಗಿದೆ. ಇದರ ಟಾಪ್ ಎಂಡ್ ಎಎಕ್ಸ್ 7 ಟ್ರಿಮ್‌ನಲ್ಲಿ ಪನೋರಮಿಕ್ ಸನ್‌ರೂಫ್ ನೀಡಲಾಗುತ್ತದೆ.

cheap-and-best-sunroof-cars-in-india-mahindra-xuv-3xo-tata-nexon

ಹ್ಯುಂಡೈ ಕ್ರೆಟಾ ಎನ್ ಲೈನ್: ಕ್ರೆಟಾ ಎನ್ 8 ಮತ್ತು ಎನ್ 10 ಟ್ರಿಮ್ ಮಟ್ಟಗಳಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಇದರ ಬೆಲೆಗಳು ರೂ.16.82 (ಎಕ್ಸ್‌ ಶೋರೂಂ) ಲಕ್ಷಗಳಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ರಿಟ್ಯೂನ್ಡ್ ಸಸ್ಪೆಂಷನ್ ಸೆಟಪ್ ಮತ್ತು ಸ್ಟೀರಿಂಗ್ ಡೈನಾಮಿಕ್ಸ್ ಅನ್ನು ಮರುನಿರ್ಮಾಣ ಮಾಡಲಾಗಿದೆ. ಸ್ಟ್ಯಾಂಡರ್ಡ್ ಕ್ರೆಟಾಕ್ಕಿಂತ ಸ್ಪೋರ್ಟಿಯರ್-ಸೌಂಡಿಂಗ್ ಎಕ್ಸಾಸ್ಟ್ ಪಡೆದಿದೆ.

ಕಿಯಾ ಸೆಲ್ಟೋಸ್: ಗೇರ್ ಬಾಕ್ಸ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್, ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್, 6-ಸ್ಪೀಡ್ ಐಎಂಟಿ, 6-ಸ್ಪೀಡ್ ಸಿವಿಟಿನೊಂದಿಗೆ ಸಿಗುವ ಕಿಯಾ ಸೆಲ್ಟೋಸ್ ಬೆಲೆಯು 14.06 ಲಕ್ಷ ರೂ. (ಎಕ್ಸ್‌ ಶೋರೂಂ)ಗಳಿಂದ ಪ್ರಾರಂಭವಾಗುತ್ತದೆ. ಇದರ ಎಚ್‌ಟಿಕೆ + ವೇರಿಯೆಂಟ್‌ನಲ್ಲಿ ಪನೋರಮಿಕ್ ಸನ್‌ರೂಫ್ ನೀಡಲಾಗುತ್ತದೆ.

cheap-and-best-sunroof-cars-in-india-mahindra-xuv-3xo-tata-nexon

ಹ್ಯುಂಡೈ ಕ್ರೆಟಾ: ಹ್ಯುಂಡೈ ಕ್ರೆಟಾ ಇದು ಸೆಲ್ಟೋಸ್ ನಂತೆಯೇ ಮಿಡ್-ಸ್ಪೆಕ್ ಎಸ್ (ಒ) ರೂಪಾಂತರದಿಂದ ಪನೋರಮಿಕ್ ಸನ್‌ರೂಫ್ ನೀಡಲಾಗುತ್ತದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಬೆಲೆಗಳು 14.36 ಲಕ್ಷ ರೂ. (ಎಕ್ಸ್‌ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ.

ಎಂಜಿ ಆಸ್ಟರ್: 1.5-ಲೀಟರ್, ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿಗೆ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಸಿಗುವ ಎಂಜಿ ಆಸ್ಟರ್, ಸೆಲೆಕ್ಟ್ ಟ್ರಿಮ್‌ನಿಂದ ಪನೋರಮಿಕ್ ಸನ್‌ರೂಫ್ ಅನ್ನು ನೀಡಲಾಗುತ್ತದೆ. ಇದರ ಬೆಲೆಯು 13.11 ಲಕ್ಷ ರೂ. (ಎಕ್ಸ್‌ ಶೋರೂಂ) ಇದೆ. ಇದರ ಎಂಜಿನ್ 140 ಬಿಹೆಚ್ ಪವರ್ ಹಾಗೂ 220 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

cheap-and-best-sunroof-cars-in-india-mahindra-xuv-3xo-tata-nexon

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ತನ್ನ ಟಾಪ್-ಸ್ಪೆಕ್ ಟ್ರಿಮ್‌ಗಳಲ್ಲಿ ಪನೋರಮಿಕ್ ಸನ್‌ರೂಫ್ ನೀಡುವ ಎರಡನೇ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ನೆಕ್ಸಾನ್ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್‌ನ ಎಲ್ಲಾ ಆಯ್ಕೆಗಳನ್ನಿ ಪನೋರಮಿಕ್ ಸನ್‌ರೂಫ್ ನೊಂದಿಗೆ ಬರುತ್ತದೆ. ಇದರ ಬೆಲೆಗಳು 14.99 ಲಕ್ಷ ರೂ. (ಎಕ್ಸ್‌ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮೈಲ್ಡ್-ಹೈಬ್ರಿಡ್ ಆವೃತ್ತಿಯ ಆಲ್ಫಾ ರೂಪಾಂತರದಲ್ಲಿ ಪನೋರಮಿಕ್ ಸನ್ ರೂಫ್ ಬರುತ್ತದೆ. ಇದರ ಬೆಲೆಗಳು 15.51 ಲಕ್ಷ ರೂ. (ಎಕ್ಸ್‌ ಶೋರೂಂ)ಗಳಿಂದ ಪ್ರಾರಂಭವಾಗುತ್ತವೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ.

Article Published On: Monday, December 16, 2024, 10:07 [IST]
English summary
Cheap and best sunroof cars in india mahindra xuv 3xo tata nexon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+