Cheapest cars in india: 5 ಲಕ್ಷಕ್ಕಿಂತ ಕಡಿಮೆ ಬೆಲೆಯ ಬಜೆಟ್ ಕಾರುಗಳು: 33.85 ಕಿ.ಮೀ ಮೈಲೇಜ್!
Cheapest cars in india: ಪ್ರತಿಯೊಬ್ಬರಿಗೂ ಕಾರು ಖರೀದಿಸುವ ಕನಸಿರುತ್ತದೆ, ಆದ್ರೆ ಖರೀದಿಸಲು ಲಕ್ಷಾಂತರ ರೂ. ವೆಚ್ಚಿಸಬೇಕಾಗುತ್ತದೆ. ಆದ್ರೆ ಇತ್ತೀಚೆಗೆ ಕೆಲ ಕಂಪನಿಗಳು ಮಧ್ಯಮ ವರ್ಗದವರು ಕೂಡ ಖರೀದಿಸಬಹುದಾದ ಕೆಲವು ಅಗ್ಗದ ಕಾರುಗಳನ್ನು ಮಾರಾಟ ಮಾಡುತ್ತಿವೆ. ಈ ಕಾರುಗಳು 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗಲಿದ್ದು, ಹಲವರ ಕಾರು ಖರೀದಿಸುವ ಕನಸನ್ನು ನನಸು ಮಾಡುತ್ತಿವೆ. ನೀವು ಪೆಟ್ರೋಲ್ ಮತ್ತು ಡೀಸೆಲ್ ಖರ್ಚುಗಳನ್ನು ಕೂಡ ನಮಗೆ ವ್ಯಯಿಸಲು ಆಗುವುದಿಲ್ಲ ಎಂದುಕೊಳ್ಳುವವರಿಗೆ ಎಲೆಕ್ಟ್ರಿಕ್ ಆಯ್ಕೆ ಕೂಡ ಇದೆ. ಹಾಗಾದ್ರೆ 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಯಾವೆಲ್ಲಾ ಕಾರುಗಳನ್ನು ಖರೀದಿಸಬಹುದು ಎಂಬುದನ್ನು ಇಲ್ಲಿ ನೋಡೋಣ.
ಕಾರು ಖರೀದಿಸಲು ಯೋಜಿಸುತ್ತಿದ್ದವರಿಗೆ 5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹಲವಾರು ಅತ್ಯುತ್ತಮ ಆಯ್ಕೆಗಳಿವೆ. ಈ ಕಾರುಗಳು ಉತ್ತಮ ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿವೆ. ನೀವು ಇಂಧನ ಚಾಲಿತ ಅಥವಾ ಎಲೆಕ್ಟ್ರಿಕ್ ಕಾರನ್ನು ಹುಡುಕುತ್ತಿದ್ದರೆ, ನಿಮ್ಮ ಅಗತ್ಯಗಳಿಗೆ ತಕ್ಕ ಕಾರು ಇಲ್ಲಿ ಸಿಗಬಹುದು. ಸರಿಯಾದ ಕಾರನ್ನು ಖರೀದಿಸಲು ಈ ವಿವರಗಳು ನಿಮಗೆ ಸಹಾಯ ಮಾಡಬಹುದು.

ಮಾರುತಿ ಸುಜುಕಿ ಆಲ್ಟೋ ಕೆ 10: ತನ್ನ ಕೈಗೆಟುಕುವ ಬೆಲೆ ಮತ್ತು ಅಸಾಧಾರಣ ಮೈಲೇಜ್ ಕಾರಣದಿಂದಾಗಿ ಬಜೆಟ್ ಪ್ರಜ್ಞೆಯುಳ್ಳ ಖರೀದಿದಾರರಲ್ಲಿ ಅಚ್ಚುಮೆಚ್ಚಿನ ಕಾರಾಗಿ ಮಾರುತಿ ಸುಜುಕಿ ಆಲ್ಟೋ ಕೆ10 (Maruti Suzuki Alto K10) ಮುನ್ನುಗ್ಗುತ್ತಿದೆ. ಎಕ್ಸ್ ಶೋರೂಂ ಬೆಲೆಗಳು ರೂ.3.99 ಲಕ್ಷದಿಂದ ರೂ.5.96 ಲಕ್ಷಗಳವರೆಗೆ ಇವೆ.
ಮಾರುತಿ ಸುಜುಕಿ ಆಲ್ಟೋ ಕೆ10 ತನ್ನ ವಿಭಾಗದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಬೆಸ್ಟ್ ಕಾರಾಗಿದೆ. ಇದರ ಪೆಟ್ರೋಲ್ ಆಟೋಮ್ಯಾಟಿಕ್ ವೇರಿಯೆಂಟ್ 24.90 ಕಿ.ಮೀ ಹಾಗೂ ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್ 24.39 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಇದರಲ್ಲಿ ಸಿಎನ್‌ಜಿ ಆಯ್ಕೆ ಕೂಡ ಇದ್ದು, 33.85 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ರೆನಾಲ್ಟ್ ಕ್ವಿಡ್: ರೆನಾಲ್ಟ್ ಕಂಪನಿ ನೀಡುವ ಸ್ಟೈಲಿಶ್ ಹ್ಯಾಚ್‌ಬ್ಯಾಕ್ ಕ್ವಿಡ್ (Renault KWID) ಆಗಿದ್ದು, ಪ್ರತಿ ಲೀಟರ್‌ಗೆ 21.46 ಕಿ.ಮೀ ನಿಂದ 22.3 ಕಿ.ಮೀ ನಡುವೆ ಮೈಲೇಜ್ ನೀಡುತ್ತದೆ. ಇದು ದೈನಂದಿನ ಬಳಕೆಗೆ ಅತ್ಯುತ್ತಮ ಕಾರಾಗಿದ್ದು, ಬೇಸ್ ವೇರಿಯೆಂಟ್ ಬೆಲೆಯು ರೂ. 4.69 ಲಕ್ಷ (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತದೆ, ಹಾಗೆಯೇ ಟಾಪ್ ಎಂಡ್ ವೇರಿಯೆಂಟ್‌ಗೆ ರೂ.6.44 ಲಕ್ಷಗಳಾಗಿದೆ.
ಎಂಜಿ ಕಾಮೆಟ್ ಇವಿ: ಮಾರುಕಟ್ಟೆಯಲ್ಲಿನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳಲ್ಲಿ ಎಂಜಿ ಕಾಮೆಟ್ (MG Comet EV) ಕೂಡ ಒಂದಾಗಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ 230 ಕಿ.ಮೀ ಓಡಿಸಬಹುದಾಗಿದೆ. ಕೇವಲ 3.5 ಗಂಟೆಗಳಲ್ಲಿ 0 ಇಂದ ಶೇ100 ರಷ್ಟು ಚಾರ್ಜ್ ಆಗುತ್ತದೆ. ಕಾರನ್ನು ಖರೀದಿಸಲು ಕಂಪನಿಯು ಎರಡು ರೀತಿಯ ಆಯ್ಕೆಗಳನ್ನು ನೀಡುತ್ತಿದೆ.

ಎಂಜಿ ಮೋಟಾರ್ಸ್ BAAS (ಬ್ಯಾಟರಿ-ಆಸ್-ಎ-ಸರ್ವೀಸ್) ಯೋಜನೆಯಡಿ ಆರಂಭಿಕ ಎಕ್ಸ್ ಶೋರೂಂ ಬೆಲೆಯು 4.99 ಲಕ್ಷ ರೂ. ಇದ್ದು, ಬ್ಯಾಟರಿ ಚಂದಾದಾರಿಕೆ ಯೋಜನೆಯಡಿ ಬ್ಯಾಟರಿ ಬಳಕೆಗಾಗಿ ಪ್ರತಿ ಕಿ.ಮೀಗೆ ರೂ. 2.5 ಪಾವತಿಸಬೇಕು. ಇನ್ನೊಂದು ಆಯ್ಕೆಯಲ್ಲಿ ನೀವು ಚಂದಾದಾರಿಕೆ ಯೋಜನೆ ಇಲ್ಲದೆ ಕಾರನ್ನು ಖರೀದಿಸಲು ಬಯಸಿದರೆ, ಆರಂಭಿಕ ಎಕ್ಸ್ ಶೋರೂಂ ಬೆಲೆ 6.98 ಲಕ್ಷ ರೂ. ಆಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications