ಮುಂಬೈ ಕಂಪನಿಯ ಈ ಎಲೆಕ್ಟ್ರಿಕ್ ಕಾರಿನ ಬೆಲೆ ಬೈಕ್‌ಗಿಂತ ಅಗ್ಗ.. 200 Km ರೇಂಜ್, 2-ಸೀಟರ್.. ಬೆಸ್ಟ್ ಫೀಚರ್ಸ್!

ದೇಶದಲ್ಲಿ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ವಾಹನಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಟಾಟಾ ಮೋಟಾರ್ಸ್, ಮಹೀಂದ್ರಾ ಹಾಗೂ ಎಂಜಿ ಮೋಟಾರ್ ಸೇರಿದಂತೆ ಪ್ರಮುಖ ವಾಹನ ತಯಾರಕ ಕಂಪನಿಗಳು ಹತ್ತಾರು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಮುಂಬೈ ಮೂಲದ ಇವಿ ಸ್ಟಾರ್ಟ್-ಅಪ್ ಪಿಎಂವಿ ಎಲೆಕ್ಟ್ರಿಕ್ (PMV Electric), 2022ರಲ್ಲಿ ಅತಿಕಡಿಮೆ ಬೆಲೆ ಹೊಚ್ಚ ಹೊಸ ಈಸ್-ಇ (EaS-E) ಹೆಸರಿನ ಮೈಕ್ರೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಕಾರು ನೀರಿಕ್ಷೆಗೂ ಮೀರಿದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈಗಲೂ ನೂತನ ಪಿಎಂವಿ ಈಸ್-ಇ (PMV EaS-E) ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಓಪನ್ ಇದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.2,000 ಮುಂಗಡ ಹಣವನ್ನು ಪಾವತಿಸುವ ಮೂಲಕ ಹೊಸ 'ಪಿಎಂವಿ ಈಸ್-ಇ' ಇವಿಯನ್ನು ಕಾಯ್ದಿರಬಹುದು. ಈ ಕಾರನ್ನು ಪರಿಚಯಿಸಿ, ಸರಿ ಸುಮಾರು ಮೂರು ವರ್ಷಗಳು ಕಳೆದು ಬಿಟ್ಟಿದೆ. ಆದರೆ, ಕಂಪನಿಯು ನಾನಾ ಕಾರಣಗಳಿಗೆ ಇಲ್ಲಿಯವರೆಗೂ 'ಈಸ್-ಇ' ಇವಿಯ ವಿತರಣೆಗೆ ಚಾಲನೆ ನೀಡಿಲ್ಲ.

Cheapest Price Upto 200 KM Range PMV EaS-E Micro Electric Car Delivery Start Soon Expected

ಈ ಹಿಂದೆ, 2023ರ ಫೆಬ್ರವರಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಸಂದರ್ಶನವೊಂದರಲ್ಲಿ 'ಪಿಎಂವಿ ಎಲೆಕ್ಟ್ರಿಕ್' ಕಂಪನಿಯ ಮುಖ್ಯಸ್ಥರು ಮಾತನಾಡಿದ್ದರು. ಹೊಸ 'ಈಸ್-ಇ' ಮೈಕ್ರೋ ಕಾರಿನ ವಿತರಣೆಯನ್ನು ಈ ವರ್ಷದ (2023) ಮೂರನೇ ತ್ರೈಮಾಸಿಕದಲ್ಲಿ ಶುರು ಮಾಡುವಾಗಿ ತಿಳಿಸಿದ್ದರು. ಆದರೆ, ಆ ಸಮಯಕ್ಕೆ ಪ್ರಾರಂಭಿಸಿರಲಿಲ್ಲ. ಎಲ್ಲವು ಅಂದುಕೊಂಡರೆ ನಡೆದರೆ, ಮುಂದಿನ ವರ್ಷದಿಂದ (2025) ನೂತನ ಕಾರು ದೇಶೀಯ ಗ್ರಾಹಕರ ಮನೆ ಸೇರಲಿದೆ ಎಂದು ವರದಿಯಾಗಿದೆ.

ಸದ್ಯ, ಹೊಚ್ಚ ಹೊಸ ಪಿಎಂವಿ ಈಸ್-ಇ (PMV EaS-E) ಮೈಕ್ರೋ ಎಲೆಕ್ಟ್ರಿಕ್ ಕಾರು, ರೂ.4.79 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು ಪ್ರೀಮಿಯಂ ಬೈಕ್‌ಗಿಂತ ಕಡಿಮೆ ದರವಾಗಿದೆ. ಈ ಕಾರು ರಾಯಲ್ ಬೀಜ್, ಡೀಪ್ ಗ್ರೀನ್, ಸ್ಪಾರ್ಕಲ್ ಸಿಲ್ವರ್, ಬ್ರಿಲಿಯಂಟ್ ವೈಟ್, ಮೆಜೆಸ್ಟಿಕ್ ಬ್ಲೂ ಮತ್ತು ವಿಂಟೇಜ್ ಬ್ರೌನ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

Cheapest Price Upto 200 KM Range PMV EaS-E Micro Electric Car Delivery Start Soon Expected

ನೂತನ ಕಾರು 10 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 120, 160 ಹಾಗೂ 200 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಸಿಂಗಲ್-ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, 13.41 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 50 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ನೂತನ ಪಿಎಂವಿ ಈಸ್-ಇ ಮೈಕ್ರೋ ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ಪ್ಯಾಕ್, 15ಎ ಸಾಕೆಟ್ ಬಳಕೆಯಲ್ಲಿ 3 ರಿಂದ 4 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಬಿಡುತ್ತದೆ. ಕೇವಲ 5 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

Cheapest Price Upto 200 KM Range PMV EaS-E Micro Electric Car Delivery Start Soon Expected

ಈ ಕಾರು ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡೋರ್ ಲಾಕ್/ಅನ್‌ಲಾಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು (ಫೀಚರ್) ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡ್ರೈವರ್ ಏರ್‌ಬ್ಯಾಗ್, ಸೀಟ್‌ಬೆಲ್ಟ್‌ಗಳು, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಅಸಿಸ್ಟ್ ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, December 1, 2024, 13:58 [IST]
English summary
Cheapest price upto 200 km range pmv eas e micro electric car delivery start soon expected
Read more on electric car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+