5 ಆಸನ ಆಯ್ಕೆ.. ಹೊಸ ಸಿಟ್ರನ್ ಬಸಾಲ್ಟ್ ಕಾರು ಖರೀದಿಸಬೇಕೇ, ಎಷ್ಟಿರಲಿದೆ ಆನ್-ರೋಡ್ ಬೆಲೆ.. ತುಂಬಾ ಕಡಿಮೆ EMI?
ಫ್ರೆಂಚ್ ಮೂಲದ ಸಿಟ್ರನ್ (Citroen) ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಮನೆ ಮಾತಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಸಿ3, ಇಸಿ3, ಸಿ3 ಏರ್‌ಕ್ರಾಸ್ ಮತ್ತು ಸಿ5 ಏರ್‌ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇಂದು ಟಾಟಾ ಕರ್ವ್ (Tata Curvv) ಕೂಪೆ ಎಸ್‌ಯುವಿಗೆ ಪ್ರತಿಸ್ಪರ್ಧಿಯಾಗಿ ಬಸಾಲ್ಟ್ (Basalt) ಕಾರನ್ನು ಬಿಡುಗಡೆ ಮಾಡಿದೆ. ಈ ಕಾರು ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇಲ್ಲಿ ನೂತನ ಬಸಾಲ್ಟ್‌ನ ನಿರೀಕ್ಷಿತ ಆನ್-ರೋಡ್ ಬೆಲೆ (On Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ (Citroen Basalt) ಸಹ ಕೂಪೆ ಎಸ್‌ಯುವಿಯಾಗಿದ್ದು, ರೂ.7.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಪರಿಚಯಿಸಲಾಗಿದೆ. ಈ ಕಾರು ದೇಶದ ವಿವಿಧ ನಗರಗಳಲ್ಲಿ ರೂ.10.06 ಲಕ್ಷದವರೆಗೆ ಆನ್-ರೋಡ್ ದರವನ್ನು ಹೊಂದಿದೆ. ನೀವು ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಮನೆಗೆ ತಂದರೆ, ಉಳಿದ ರೂ.7.06 ಲಕ್ಷ ಸಾಲದ ಮೊತ್ತಕ್ಕೆ ಶೇಕಡ 8.5% ಬಡ್ಡಿದರದಲ್ಲಿ 5 ವರ್ಷದ ಅವಧಿಗೆ ತಿಂಗಳಿಗೆ ರೂ.14,500 ರವರೆಗೆ ಇಎಂಐ ಕಟ್ಟಬೇಕು.

ನೂತನ ಸಿಟ್ರನ್ ಬಸಾಲ್ಟ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಇದು ಬಹುತೇಕ ಸಿ3 ಏರ್‌ಕ್ರಾಸ್ ಕಾರಿಗೆ ಹೋಲಿಕೆಯಾಗುತ್ತದೆ. ನವೀನವಾಗಿರುವ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರದ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ರೂಫ್‌ಲೈನ್ ಇಳಿಜಾರಾಗಿದೆ. ಅತ್ಯುತ್ತಮ ಟೈಲ್‌ಲೈಟ್‌ಗಳು ಮತ್ತು ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಈ ಎಸ್‌ಯುವಿ ಎರಡು ಪವರ್‌ಟ್ರೇನ್‌ನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿಯೂ ಸಿಗುತ್ತದೆ. 18 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಸಿಟ್ರನ್ ಬಸಾಲ್ಟ್ ಕಾರಿನಲ್ಲಿ 5 ಮಂದಿ ಓಡಾಟ ನಡೆಸಬಹುದು. ಪೋಲಾರ್ ವೈಟ್, ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಪವರ್ ವಿಂಡೋನಂತಹ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. 6 ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಸಾಲ್ಟ್‌ಗೆ ಟಾಟಾ ಕರ್ವ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್ ಹಾಗೂ ಮಾರುತಿ ಗ್ರ್ಯಾಂಡ್ ವಿಟಾರಾ ಕಾರುಗಳು ದೊಡ್ಡ ಎದುರಾಳಿಯಾಗಿವೆ.
ಸಿಟ್ರನ್ ಬಸಾಲ್ಟ್ ಎಸ್‌ಯುವಿ ಬುಕ್ಕಿಂಗ್ ಆರಂಭವಾಗಿದ್ದು, ರೂ.11,001 ಮುಂಗಡ ಹಣವನ್ನು ಪಾವತಿಸಿ ಕಾಯ್ದಿರಬಹುದು. ಈ ಕಾರು ಯಾವೆಲ್ಲ ರೂಪಾಂತರಗಳನ್ನು ಪಡೆದಿರಲಿದೆ.. ಎಂದಿನಿಂದ ವಿತರಣೆ ಶುರುವಾಗಲಿವೆ ಎಂಬುದರ ಕುರಿತಂತೆ ಕಂಪನಿಯು ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ. ನಿಮ್ಮ ಗಮನಕ್ಕೆ.. ಈ ನಿರೀಕ್ಷಿತ ಆನ್-ರೋಡ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








