Citroen: ಟಾಟಾ ಕರ್ವ್ ಪ್ರತಿಸ್ಪರ್ಧಿ.. ಹೊಸ ಸಿಟ್ರನ್ ಬಸಾಲ್ಟ್ ಬುಕ್ಕಿಂಗ್ ಡೀಲರ್‌ಶಿಪ್‌ಗಳಲ್ಲಿ ಆರಂಭ?
ಫ್ರೆಂಚ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿ ಸಿಟ್ರನ್ (Citroen) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯ ಹೊಂದಿರುವ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಟಾಟಾ ಕರ್ವ್ (Tata Curvv) ಕೂಪೆ ಎಸ್‌ಯುವಿಗೆ ಪ್ರತಿಸ್ಪರ್ಧಿಯಾಗಿ, ಸಿಟ್ರನ್ ಕಂಪನಿಯು ಹೊಚ್ಚ ಹೊಸ ಬಸಾಲ್ಟ್ (Basalt) ಕಾರನ್ನು ಆಗಸ್ಟ್ 2ರಂದು ಅನಾವರಣಗೊಳಿಸಲಿದೆ. ಸದ್ಯ, ದೇಶಾದ್ಯಂತ ಈ ಕಾರಿಗಾಗಿ ಆಯ್ದ ಡೀಲರ್‌ಶಿಪ್‌ಗಳು ಬುಕ್ಕಿಂಗ್ ಪಡೆಯುವುದನ್ನು ಶುರು ಮಾಡಿವೆ ಎಂದು ವರದಿಯಾಗಿದೆ.
ನೂತನ ಸಿಟ್ರನ್ ಬಸಾಲ್ಟ್ (Citroen Basalt) ಕೂಪೆ ಎಸ್‌ಯುವಿಯನ್ನು ಖರೀದಿಸಬೇಕೆಂದು ಇಚ್ಚಿಸುವವರೂ ರೂ.25,000 ಮುಂಗಡ ಹಣವನ್ನು ಪಾವತಿಸಿ ಕಾಯ್ದಿರಿಸಬಹುದು ಎಂದು ಮೂಲಗಳು ಹೇಳಿವೆ. ಈ ಕಾರು ಬಿಡುಗಡೆಗೊಂಡ ನಂತರ, ಬೆಲೆ ಹಾಗೂ ವಿತರಣೆ ಸಂಬಂಧ ಅಧಿಕೃತ ವಿವರಗಳು ಲಭ್ಯವಾಗಲಿವೆ. ಹೊಸ ಬಸಾಲ್ಟ್ ರೂ.11 ರಿಂದ ರೂ.12 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎನ್ನಲಾಗಿದೆ.

ಸಿಟ್ರನ್ ಬಸಾಲ್ಟ್ ಕಾರಿನ ಬಹುತೇಕ ವಿನ್ಯಾಸ (ಡಿಸೈನ್), ಸಿ3 ಏರ್‌ಕ್ರಾಸ್ (C3 Aircross) ಎಸ್‌ಯುವಿಗೆ ಹೋಲಿಕೆಯಾಗುತ್ತದೆ. ಈ ಕಾರು ಆಕರ್ಷಕವಾದ ಸಿಟ್ರನ್ ಲೋಗೋ, ನವೀನವಾದ ಗ್ರಿಲ್, ಡುಯಲ್-ಟೋನ್ ಬಂಪರ್, ಫ್ಲಿಪ್-ಸ್ಟೈಲ್ ಡೋರ್ ಹ್ಯಾಂಡಲ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಹೊಸ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ 1.2-ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದ್ದು, 110 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 205 ಎನ್ಎಂ ಪೀಕ್ ಟಾರ್ಕ್ ಹೊರಹಾಕಬಹುದು. ಜೊತೆಗೆ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದ್ದು, ಫ್ರಂಟ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಈ ಕಾರು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿರುವ ನಿರೀಕ್ಷೆಯಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಹಾಗೂ ಎಲೆಕ್ಟ್ರಿಕಲ್ ಫೋಲ್ಡಿಂಗ್ ವಿಂಗ್ ಮಿರರ್‌ನಂತಹ ಹಲವು ವೈಶಿಷ್ಟ್ಯಗಳಿರಬಹುದು ಎನ್ನಲಾಗಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.
ನೂತನ ಸಿಟ್ರನ್ ಬಸಾಲ್ಟ್ ಕೂಪೆ (Citroen Basalt) ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ 6 ಏರ್‌ಬ್ಯಾಗ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಹೊಸ ಬಸಾಲ್ಟ್ ಎಸ್‌ಯುವಿ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯಬಹುದು ಎಂದು ಅಂದಾಜಿಸಿರುವುದರಿಂದ ಗ್ರಾಹಕರು ಸಹ ದೊಡ್ಡಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಿನ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯದ ಕುರಿತಂತೆ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಬಿಡುಗಡೆಯಾದ ಮೇಲೆ ಬಸಾಲ್ಟ್ ಎಸ್‌ಯುವಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications