ಕ್ರೆಟಾ, ಸೆಲ್ಟೋಸ್‌ಗೆ ಸವಾಲು... ಭಾರತದ ಅತ್ಯಂತ ಕೈಗೆಟುಕುವ ಎಸ್‌ಯುವಿ ಬಿಡುಗಡೆ!
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಸಿಟ್ರನ್ ಕಂಪನಿಯು ತನ್ನ ಬಸಾಲ್ಟ್ ಕೂಪೆ ಎಸ್‌ಯುವಿಯನ್ನು 7.99 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ ಇದು ಮಿಡ್‌ಸೈಜ್ ಎಸ್‌ಯುವಿ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಕಾರಾಗಿದೆ. ಹೊಸ ಸಿಟ್ರನ್ ಬಸಾಲ್ಟ್‌ನ ಬುಕಿಂಗ್ ಅನ್ನು ರೂ.11,001 ರ ಟೋಕನ್ ಮೊತ್ತಕ್ಕೆ ತೆರೆಯಲಾಗಿದ್ದು, ಎಸ್‌ಯುವಿಯ ಸಂಪೂರ್ಣ ಬೆಲೆ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಎಂಟ್ರಿ ಲೆವೆಲ್ ಮಾಡಲ್ ಬೆಲೆ 7.99 ಲಕ್ಷ ರೂ.ಗಳು (ಎಕ್ಸ್ ಶೋರೂಂ), ಅಕ್ಟೋಬರ್ 31 ರವರೆಗೆ ಈ ಬೆಲೆ ಮಾನ್ಯವಾಗಿರುತ್ತದೆ. ವಾಹನದ ವಿತರಣೆಯು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ.
ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ ಪ್ರಸ್ತುತ ಭಾರತದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗನ್‌ಗೆ ಪೈಪೋಟಿ ನೀಡಲಿದೆ. ಈ ಎಲ್ಲಾ ಕಾರುಗಳಿಗಿಂತ ಸಿಟ್ರನ್ ಏನೆಲ್ಲಾ ವಿಶೇಷತೆಗಳನ್ನು ಪಡೆದಿದೆ ಇಲ್ಲಿ ತಿಳಿಯೋಣ.

ಡಿಸೈನ್: ಬಸಾಲ್ಟ್ ವಿನ್ಯಾಸದ ಬಗ್ಗೆ ಹೇಳುವುದಾದ್ರೆ, ಎಲ್ಇಡಿ ಡಿಆರ್ಎಲ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿವೆ. ಇಳಿಜಾರಿನ ರೂಫ್ ಎಲ್ಇಡಿ ಟೈಲ್ಯಾಂಪ್‌ಗಳೊಂದಿಗೆ ಪ್ರೀಮಿಯಂ ನೋಟವನ್ನು ನೀಡುತ್ತದೆ. 16 ಇಂಚಿನ ಅಲಾಯ್ ವೀಲ್‌ಗಳು ಸ್ಟೈಲಿಶ್ ಆಗಿ ಕಾಣುತ್ತವೆ. ಉಳಿದಂತೆ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಆಕರ್ಷಕವಾಗಿ ಕಾಣುತ್ತದೆ.
ವೈಶಿಷ್ಟ್ಯಗಳು: ಕ್ಯಾಬಿನ್ ಒಳಗೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಪರ್ಕದೊಂದಿಗೆ 10.24-ಇಂಚಿನ ಸ್ಟ್ಯಾಂಡಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನೀಡಲಾಗಿದೆ. ಇದರ ಜೊತೆಗೆ 7 ಇಂಚಿನ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಹಾಗೆಯೇ ಬಸಾಲ್ಟ್ ಹೊಸ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ.

ಅಲ್ಲದೆ, ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ 'ಸ್ಮಾರ್ಟ್ ಟಿಲ್ಟ್ ಕುಶನ್' ಇದೆ, ಇದು ಎರಡನೇ ಸಾಲಿನ ಪ್ರಯಾಣಿಕರಿಗೆ 87 ಎಂಎಂ ವರೆಗೆ ಹೊಂದಾಣಿಕೆಯೊಂದಿಗೆ ತುಲನಾತ್ಮಕವಾಗಿ ತೊಡೆಗೆ ಉತ್ತಮ ಸಫೋರ್ಟ್ ನೀಡುತ್ತದೆ. ಎರಡನೇ ಸಾಲಿನ ಪ್ರಯಾಣಿಕರು ಸೆಗ್ಮೆಂಟ್-ಫಸ್ಟ್ ಕಂಫರ್ಟ್ ಹೆಡ್‌ರೆಸ್ಟ್‌ಗಳನ್ನು ಸಹ ಪಡೆಯಬಹುದು, ಇದು ಲ್ಯಾಟರಲ್ ಹೆಡ್ ಸಪೋರ್ಟ್ ನೀಡುತ್ತದೆ.
ಈ ಎಸ್‌ಯುವಿಯು ಮೂರು ಯುಎಸ್‌ಬಿ ಪೋರ್ಟ್‌ಗಳು, ವೈರ್‌ಲೆಸ್ ಚಾರ್ಜರ್ ಮತ್ತು ಮೈ-ಸಿಟ್ರನ್ ಕನೆಕ್ಟ್ ಅನ್ನು ಹೊಂದಿದ್ದು, ರಿಮೋಟ್ ಸ್ಟಾರ್ಟ್ / ಸ್ಟಾಪ್, ಪ್ರಿ-ಕೂಲಿಂಗ್ ಮತ್ತು ಇನ್‌ಕಮಿಂಗ್ ಅಲರ್ಟ್ ಸೇರಿದಂತೆ 40 ಫೀಚರ್‌ಗಳನ್ನು ಹೊಂದಿದೆ. ಐದು ಮೊನೊ-ಟೋನ್ ಬಣ್ಣಗಳು ಸೇರಿದಂತೆ ಪೋಲಾರ್ ವೈಟ್ ಮತ್ತು ಗಾರ್ನೆಟ್ ರೆಡ್ ಬಣ್ಣಗಳು ಬ್ಲಾಕ್ ರೂಪ್‌ನೊಂದಿಗೆ ಡ್ಯುಯಲ್-ಟೋನ್ ಆಯ್ಕೆಯನ್ನು ಹೊಂದಿವೆ.

ಸುರಕ್ಷತೆ: ಸಿಟ್ರನ್ ಬಸಾಲ್ಟ್ 40 ಕ್ಕೂ ಹೆಚ್ಚು ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಸುಧಾರಿತ ಹೆಚ್ಚಿನ ಸಾಮರ್ಥ್ಯದ ಉಕ್ಕು ಮತ್ತು ಅಲ್ಟ್ರಾ-ಹೈ-ಸ್ಟ್ರೆಂತ್ ಸ್ಟೀಲ್‌ನಿಂದ ತಯಾರಿಸಲಾಗಿದೆ. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ಗಳಿವೆ.
ಎಂಜಿನ್: ಸಿಟ್ರನ್ ಬಸಾಲ್ಟ್ NA ಹಾಗೂ ಟರ್ಬೋ ಎಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 115 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಮಾತ್ರ ಬರುತ್ತದೆ.
ಉಳಿದಂತೆ 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಎರಡು ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಹೊಂದಿದ್ದು, ಮ್ಯಾನುವಲ್ ಗೇರ್‌ಬಾಕ್ಸ್ 190 ಎನ್‌ಎಂ ಹಾಗೂ ಆಟೋಮ್ಯಾಟಿಕ್ ವೇರಿಯಂಟ್ 205 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications








