ಭಾರತದ ಅತ್ಯಂತ ಕೈಗೆಟುಕುವ ಮಿಡ್‌ಸೈಜ್ ಎಸ್‌ಯುವಿ... ವಿಶೇಷತೆಗಳೇನು?

ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ ಪ್ರಸ್ತುತ ಭಾರತದಲ್ಲಿ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗನ್‌ಗೆ ಪೈಪೋಟಿ ನೀಡಲಿದೆ. ಎಂಟ್ರಿ ಲೆವೆಲ್ ಸಿಟ್ರನ್ ಬಸಾಲ್ಟ್ ಮಾಡಲ್ ಬೆಲೆಯು 7.99 ಲಕ್ಷ ರೂ.ಗಳು (ಎಕ್ಸ್ ಶೋರೂಂ)ಇದೆ. ಅಕ್ಟೋಬರ್ 31 ರವರೆಗೆ ಈ ಬೆಲೆ ಮಾನ್ಯವಾಗಿರುತ್ತದೆ. ವಾಹನದ ವಿತರಣೆಯು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಕಾರು ಏನೆಲ್ಲಾ ವಿಶೇಷತೆಗಳನ್ನು ಪಡೆದಿದೆ ಇಲ್ಲಿ ತಿಳಿಯೋಣ.

ಹೊಸ ಸಿಟ್ರನ್ ಬಸಾಲ್ಟ್‌ನ ಬುಕಿಂಗ್ ಅನ್ನು ರೂ.11,001 ರ ಟೋಕನ್ ಮೊತ್ತಕ್ಕೆ ತೆರೆಯಲಾಗಿದ್ದು, ಎಸ್‌ಯುವಿಯ ಸಂಪೂರ್ಣ ಬೆಲೆ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದ್ರೆ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ ಪ್ರಸ್ತುತ ಮಿಡ್‌ಸೈಜ್ ಎಸ್‌ಯುವಿ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಕಾರಾಗಿ ಜನಪ್ರಿಯತೆ ಪಡೆಯುತ್ತಿದೆ.

citroen-basalt-price-features-engine-specs-details

ಸುರಕ್ಷತೆ: ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ಗಳಿವೆ. ಒಟ್ಟಾರೆ ಸಿಟ್ರನ್ ಬಸಾಲ್ಟ್ 40 ಕ್ಕೂ ಹೆಚ್ಚು ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದೆ. ಜೊತೆಗೆ ಸುಧಾರಿತ ಹೆಚ್ಚಿನ ಸಾಮರ್ಥ್ಯದ ಉಕ್ಕು ಮತ್ತು ಅಲ್ಟ್ರಾ-ಹೈ-ಸ್ಟ್ರೆಂತ್ ಸ್ಟೀಲ್‌ನಿಂದ ಕಾರನ್ನು ನಿರ್ಮಿಸಲಾಗಿದೆ.

ಎಂಜಿನ್: ಸಿಟ್ರನ್ ಬಸಾಲ್ಟ್ NA ಹಾಗೂ ಟರ್ಬೋ ಎಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 115 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಮಾತ್ರ ಬರುತ್ತದೆ.

citroen-basalt-price-features-engine-specs-details

ಉಳಿದಂತೆ 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಎರಡು ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಹೊಂದಿದ್ದು, ಮ್ಯಾನುವಲ್ ಗೇರ್‌ಬಾಕ್ಸ್ 190 ಎನ್‌ಎಂ ಹಾಗೂ ಆಟೋಮ್ಯಾಟಿಕ್ ವೇರಿಯಂಟ್ 205 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇಂಟೀರಿಯರ್: ಕ್ಯಾಬಿನ್ ಒಳಗೆ, ಎರಡನೇ ಸಾಲಿನ ಪ್ರಯಾಣಿಕರು ಸೆಗ್ಮೆಂಟ್-ಫಸ್ಟ್ ಕಂಫರ್ಟ್ ಹೆಡ್‌ರೆಸ್ಟ್‌ಗಳನ್ನು ಸಹ ಪಡೆಯಬಹುದು, ಇದು ಲ್ಯಾಟರಲ್ ಹೆಡ್ ಸಪೋರ್ಟ್ ನೀಡುತ್ತದೆ. ಹಾಗೆಯೇ ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ 'ಸ್ಮಾರ್ಟ್ ಟಿಲ್ಟ್ ಕುಶನ್' ಇದೆ, ಇದು ಎರಡನೇ ಸಾಲಿನ ಪ್ರಯಾಣಿಕರಿಗೆ 87 ಎಂಎಂವರೆಗೆ ಹೊಂದಾಣಿಕೆಯೊಂದಿಗೆ ತುಲನಾತ್ಮಕವಾಗಿ ತೊಡೆಗೆ ಉತ್ತಮ ಸಫೋರ್ಟ್ ನೀಡುತ್ತದೆ.

citroen-basalt-price-features-engine-specs-details

ಫೀಚರ್‌ಗಳ ವಿಷಯಕ್ಕೆ ಬಂದರೆ, 7 ಇಂಚಿನ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಹಾಗೆಯೇ ಬಸಾಲ್ಟ್ ಹೊಸ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಪರ್ಕದೊಂದಿಗೆ 10.24-ಇಂಚಿನ ಸ್ಟ್ಯಾಂಡಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನೀಡಲಾಗಿದೆ.

ಈ ಎಸ್‌ಯುವಿಯು ಮೂರು ಯುಎಸ್‌ಬಿ ಪೋರ್ಟ್‌ಗಳು, ವೈರ್‌ಲೆಸ್ ಚಾರ್ಜರ್ ಮತ್ತು ಮೈ-ಸಿಟ್ರನ್ ಕನೆಕ್ಟ್ ಅನ್ನು ಹೊಂದಿದ್ದು, ರಿಮೋಟ್ ಸ್ಟಾರ್ಟ್ / ಸ್ಟಾಪ್, ಪ್ರಿ-ಕೂಲಿಂಗ್ ಮತ್ತು ಇನ್‌ಕಮಿಂಗ್ ಅಲರ್ಟ್ ಸೇರಿದಂತೆ 40 ಫೀಚರ್‌ಗಳನ್ನು ಹೊಂದಿದೆ. ಐದು ಮೊನೊ-ಟೋನ್ ಬಣ್ಣಗಳು ಸೇರಿದಂತೆ ಪೋಲಾರ್ ವೈಟ್ ಮತ್ತು ಗಾರ್ನೆಟ್ ರೆಡ್ ಬಣ್ಣಗಳು ಬ್ಲಾಕ್ ರೂಪ್‌ನೊಂದಿಗೆ ಡ್ಯುಯಲ್-ಟೋನ್ ಆಯ್ಕೆಯನ್ನು ಹೊಂದಿವೆ.

More from DriveSpark

Article Published On: Saturday, August 17, 2024, 4:00 [IST]
English summary
Citroen basalt price features engine specs details
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+