ಕೇವಲ 8 ಲಕ್ಷಕ್ಕೆ ಬಿಡುಗಡೆಯಾದ ಪ್ರೀಮಿಯಂ ಕಾರು... 20 ಕಿ.ಮೀ ಮೈಲೇಜ್... ವಿಶೇಷತೆಗಳೇನು?

ಭಾರತದಲ್ಲಿ ಎಸ್‌ಯುವಿ ಕೂಪೆ ವಿಭಾಗ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಟಾಟಾ ಕರ್ವ್ ಎಸ್‌ಯುವಿ ಕೂಪೆ ಮುನ್ನಲೆಗೆ ಬಂದಿದ್ದೇ ತಡ ಈಗ ಸಿಟ್ರನ್ ತನ್ನ ಹೊಸ ಬಸಾಲ್ಟ್ ಎಸ್‌ಯುವಿ ಕೂಪೆಯನ್ನು ಬಿಡುಗಡೆ ಮಾಡಿಬಿಟ್ಟಿದೆ. ಅದು ಕೂಡ ಕೇವಲ ರೂ.7.99 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಕಾರನ್ನು ಪರಿಚಯಿಸಿದೆ. ಈ ವಿಶೇಷ ಬೆಲೆಯು 31 ಅಕ್ಟೋಬರ್ 2024 ರವರೆಗೆ ಎಲ್ಲಾ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತದೆ. ಬಸಾಲ್ಟ್ ಬುಕಿಂಗ್ ಅನ್ನು ಎಲ್ಲಾ ಸಿಟ್ರನ್ ಡೀಲರ್ ಶಿಪ್‌ಗಳಲ್ಲಿ 11,000 ರೂ.ಗಳ ಟೋಕನ್ ಮೊತ್ತಕ್ಕೆ ತೆರೆಯಲಾಗಿದೆ. ಹೊಸ ಸಿಟ್ರನ್ ಬಸಾಲ್ಟ್ ಬೆಲೆ, ವೈಶಿಷ್ಟ್ಯಗಳು ಮತ್ತು ಮುಖ್ಯ ವಿವರಗಳನ್ನು ಇಲ್ಲಿ ನೋಡೋಣ.

ವೈಶಿಷ್ಟ್ಯಗಳು: ಈ ಹೊಸ ಕಾರಿನಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕವನ್ನು ಸಪೋರ್ಟ್ ಮಾಡುವ 10.2-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಡಿಜಿಟಲ್ ರೀಡ್ ಔಟ್‌ಗಳೊಂದಿಗೆ ಹೊಸ HVAC ಪ್ಯಾನಲ್ ಮತ್ತು ಹೊಸ ಟಾಗಲ್ ಸ್ವಿಚ್‌ಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ನೀಡಲಾಗಿದೆ.

citroen-basalt-price-features-mileage-details

ಹೊಸ ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆಯ ಇಂಟೀರಿಯರ್ ಮುಂಭಾಗದಲ್ಲಿ ದೊಡ್ಡ ಆರ್ಮ್‌ ರೆಸ್ಟ್, ಕನೆಕ್ಟೆಡ್ ಕಾರ್‌ಟೆಕ್ ಮತ್ತು ಹಿಂಭಾಗದ ಎಸಿ ವೆಂಟ್‌ಗಳು, 15 ವ್ಯಾಟ್ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಅನ್ನು ನೀಡಲಾಗಿದೆ. ಹಿಂಭಾಗದ ವಿಷಯಕ್ಕೆ ಬಂದರೆ ತೊಡೆಗೆ ಉತ್ತಮ ಸಪೋರ್ಟ್ ನೀಡಲು ಸರಿಹೊಂದಿಸಬಹುದಾದ ಬೆಂಚ್ ಸೀಟ್ ಅನ್ನು ನೀಡಲಾಗಿದೆ.

ಸುರಕ್ಷತೆಯ ವಿಷಯಕ್ಕೆ ಬಂದರೆ, ಫ್ರೆಂಚ್ ಕಾರು ತಯಾರಕರು ಈ ಹಿಂದಿನಿಂದಲು ಉತ್ತಮ ಗುಣಮಟ್ಟದ ಕಾರುಗಳನ್ನು ನೀಡುತ್ತಾ ಬಂದಿದ್ದಾರೆ. ಈಗಲೂ ಸಿಟ್ರನ್ ಬಸಾಲ್ಟ್ ಅನ್ನು ಅದೇ ರೀತಿಯಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ. ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

citroen-basalt-price-features-mileage-details

ಎಂಜಿನ್: ಸಿಟ್ರನ್ ಬಸಾಲ್ಟ್ NA ಹಾಗೂ ಟರ್ಬೋ ಎಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 115 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಮಾತ್ರ ಬರುತ್ತದೆ.

ಉಳಿದಂತೆ 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಎರಡು ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಹೊಂದಿದ್ದು, ಮ್ಯಾನುವಲ್ ಗೇರ್‌ಬಾಕ್ಸ್ 190 ಎನ್‌ಎಂ ಹಾಗೂ ಆಟೋಮ್ಯಾಟಿಕ್ ವೇರಿಯಂಟ್ 205 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

citroen-basalt-price-features-mileage-details

ಮೈಲೇಜ್: ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಬಸಾಲ್ಟ್ 18 ಕಿ.ಮೀ ಮೈಲೇಜ್ ನೀಡಿದರೆ, ಟರ್ಬೊ-ಪೆಟ್ರೋಲ್ ಎಂಜಿನ್ 19.5 ಕಿ.ಮೀ (MT) ಮತ್ತು 18.7 ಕಿ.ಮೀ (AT) ಮೈಲೇಜ್ ನೀಡುತ್ತದೆ. ಇನ್ನು ಡಿಸೈನ್ ಬಗ್ಗೆ ಹೇಳುವುದಾದ್ರೆ ಮುಭಾಗದಲ್ಲಿ ಸಿಟ್ರನ್ C5 ಏರ್‌ಕ್ರಾಸ್‌ ಅನ್ನು ಹೋಲುತ್ತದೆ. ಹಿಂಭಾಗದಲ್ಲಿ ಹೊಸ ಎಸ್‌ಯುವಿ ಕೂಪೆ ಡಿಸೈನ್ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, August 9, 2024, 13:59 [IST]
English summary
Citroen basalt price features mileage details
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+