Citroen: ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರನ್ನು ತೆಗೆದುಕೊಳ್ಳಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಫ್ರಾನ್ಸ್ ಮೂಲದ ಸಿಟ್ರನ್ (Citroen) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಖ್ಯಾತಿ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಪಡೆದಿರುವ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಮಾರಾಟಗೊಳಿಸುತ್ತಿದೆ. ಇವು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಸಿಟ್ರನ್ ಇಸಿ3 (Citroen eC3) ಎಲೆಕ್ಟ್ರಿಕ್ ಕಾರಿಗೂ ಉತ್ತಮ ಬೇಡಿಕೆಯಿದ್ದು, ಇಲ್ಲಿ ಹೊಸ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ನೂತನ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರು ವಿವಿಧ ರೂಪಾಂತರ (ವೇರಿಯೆಂಟ್)ಗಳೊಂದಿಗೆ ಗ್ರಾಹಕರಿಗೆ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಬೇಸ್ ಮಾಡೆಲ್ (ಆರಂಭಿಕ ಶ್ರೇಣಿ ಮಾದರಿ) ಆಗಿರುವ 'ಲೈವ್' ರೂ.12.65 ಲಕ್ಷ, 'ಫೀಲ್ ಡಿಟಿ' ರೂ.14.23 ಲಕ್ಷ ಹಾಗೂ ಟಾಪ್ ಎಂಡ್ ಮಾಡೆಲ್ (ಗರಿಷ್ಠ ಶ್ರೇಣಿ ಮಾದರಿ) ಸ್ಥಾನದಲ್ಲಿರುವ 'ಶೈನ್ ಡಿಟಿ' ರೂ.14.61 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ.

Citroen eC3 Electric Car On Road Price And Emi Details

ನೀವು ಈ ಹ್ಯಾಚ್‌ಬ್ಯಾಕ್‌ನ ಲೈವ್ ರೂಪಾಂತರವನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, ಐದು ವರ್ಷದ ಅವಧಿಗೆ ಶೇಕಡ 9.8% ಬಡ್ಡಿ ದರದಲ್ಲಿ ರೂ.22,531 ಇಎಂಐ ಕಟ್ಟಬೇಕು. ನೂತನ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರು ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಟೀಲ್ ಗ್ರೇ, ಕಾಸ್ಮೊ ಬ್ಲೂ, ಪ್ಲಾಟಿನಂ ಗ್ರೇ, ಪೋಲಾರ್ ವೈಟ್, ಕಾಸ್ಮೊ ಬ್ಲೂ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರಿನಲ್ಲಿ 29.2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 57 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 143 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 320 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

Citroen eC3 Electric Car On Road Price And Emi Details

ಹೊಸ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಪ್ರವಾಸದ ಸಂದರ್ಭದಲ್ಲಿ ದೂರದ ಊರುಗಳಿಗೆ ಹೆಚ್ಚಿನ ಲಗೇಜ್ ಸಾಗಿಲು ಸಾಧ್ಯವಾಗುವಂತೆ 315 ಲೀಟರ್‌ನ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಡಿಸಿ ಪಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಈ ಕಾರಿನ ಬ್ಯಾಟರಿಯು ಶೇಕಡ 10-80% ಚಾರ್ಜ್ ಆಗಲು 57 ನಿಮಿಷ ತೆಗೆದುಕೊಳ್ಳುತ್ತದೆ.

ಸಿಟ್ರನ್ ಇಸಿ3 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಮ್ಯಾನುವಲ್ ಎಸಿ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.

Citroen eC3 Electric Car On Road Price And Emi Details

ಈ ಕಾರಿಗೆ ಟಾಟಾ ಟಿಯಾಗೊ ಇವಿ (Tata Tiago EV) ಹಾಗೂ ಎಂಜಿ ಕಾಮೆಟ್ ಇವಿ (MG Comet EV)ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಸಿಟ್ರನ್ ಇಸಿ3 ಹ್ಯಾಚ್‌ಬ್ಯಾಕ್‌ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 28, 2024, 20:47 [IST]
English summary
Citroen ec3 electric car on road price and emi details
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+