ನಷ್ಟದ ಅಂಚಿಗೆ ಜಾರುತ್ತಿದ್ದ ಕಂಪನಿಗೆ ವರವಾದ 8 ಲಕ್ಷದ ಹೊಸ ಕಾರು.. ಮಾರಾಟ ಪ್ರಮಾಣ ಧಿಡೀರನೇ 4 ಪಟ್ಟು ಹೆಚ್ಚಳ!

ಫ್ರೆಂಚ್ ಮೂಲದ ಸಿಟ್ರನ್ (Citroen) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಆದಾಗ್ಯೂ ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಹಾಗೂ ಕಿಯಾ ಸೇರಿದಂತೆ ಇತರೆ ವಿದೇಶಿ ಕಂಪನಿಗಳಂತೆ ಹೆಚ್ಚು ಜನಪ್ರಿಯತೆ ಗಳಿಸಲು ವಿಫಲವಾಗಿದೆ. ಕಾರುಗಳ ಮಾರಾಟ ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದ್ದ ಹಿನ್ನೆಲೆ, ನಷ್ಟದ ಅಂಚಿಗೆ ಜಾರುತ್ತಿತ್ತು. ಒಂದರ್ಥದಲ್ಲಿ ಸಿಟ್ರನ್ ದೇಶ ತೊರೆಯುವ ಎಲ್ಲ ಸಾಧ್ಯತೆಗಳಿತ್ತು. ಇದಕ್ಕೆ ಆಗಸ್ಟ್‌ನಲ್ಲಿ ಕಂಪನಿ ಬಿಡುಗಡೆಗೊಳಿಸಿದ್ದ ಬಸಾಲ್ಟ್ (Basalt) ಕೂಪೆ ಎಸ್‌ಯುವಿ ತಡೆಗೋಡೆಯಾಗಿ ನಿಂತಿದ್ದು, ಮಾರಾಟ ಪ್ರಮಾಣ 4 ಪಟ್ಟು ಹೆಚ್ಚಳಗೊಂಡಿದೆ.

ಸಿಟ್ರನ್ ಕಂಪನಿಯು ಕಳೆದ ತಿಂಗಳು (ಆಗಸ್ಟ್ 2024) ಒಟ್ಟು 1,275 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 576 ಯುನಿಟ್‌ಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 121% ಪ್ರಗತಿಯಾಗಿದೆ. ಜೊತೆಗೆ ಜುಲೈನಲ್ಲಿ (2024) ಮಾರಾಟ ಮಾಡಿದ 335 ಯುನಿಟ್‌ಗಳಿಗೆ ಹೋಲಿಸಿದರೆ ತಿಂಗಳಿಂದ ತಿಂಗಳಿಗೆ (MoM) ಶೇಕಡ 281% ಬೆಳವಣಿಗೆ ಸಾಧಿಸಲಾಗಿದೆ. ಇದರಲ್ಲಿ ನೂತನ ಬಸಾಲ್ಟ್ ಎಸ್‌ಯುವಿ (579 ಯುನಿಟ್) ಗರಿಷ್ಠ ಪಾಲನ್ನು ಹೊಂದಿದೆ.

Citroen Growth 121 In August 2024 New Basalt Car Super Hit Sales

ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್ ಕೂಡ 507 ಯುನಿಟ್‌ಗಳೊಂದಿಗೆ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ (150 ಯುನಿಟ್), ಸಿ3 ಏರ್‌ಕ್ರಾಸ್ (38 ಯುನಿಟ್) ಹಾಗೂ ಸಿ5 ಏರ್‌ಕ್ರಾಸ್ (1 ಯುನಿಟ್) ಎಸ್‌ಯುವಿಗಳ ಮಾರಾಟ ಮಾತ್ರ ತೀವ್ರತರವಾಗಿ ಕುಸಿತವಾಗಿದ್ದು, ಮುಂಬರುವ ದಿನಗಳಲ್ಲಿ ಈ ಮಾರಾಟದ ಅಂಕಿಸಂಖ್ಯೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಸದ್ಯ ದೇಶೀಯವಾಗಿ ಖರೀದಿಗೆ ದೊರೆಯುವ ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ (Citroen Basalt Coupe Suv), ರೂ.7.99 ಲಕ್ಷದಿಂದ ರೂ.13.83 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೋಲಾರ್ ವೈಟ್, ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಸೇರಿದಂತೆ 5-ಮೊನೊಟೋನ್ ಹಾಗೂ 2-ಡುಯಲ್ ಟೋನ್ ಬಣ್ಣಗಳೊಂದಿಗೂ ಸಿಗುತ್ತದೆ.

Citroen Growth 121 In August 2024 New Basalt Car Super Hit Sales

ಈ ಕಾರು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್/ 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ. 18 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಜನರು ಓಡಾಟ ನಡೆಸಬಹುದು.

ನೂತನ ಸಿಟ್ರನ್ ಬಸಾಲ್ಟ್ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ನವೀನವಾಗಿರುವ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರಕ್ಕೆ ಹೋಲುವ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಪುಶ್ ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Citroen Growth 121 In August 2024 New Basalt Car Super Hit Sales

ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಕರ್ವ್ ಕೂಪೆ ಎಸ್‌ಯುವಿ ನೇರ ಪ್ರತಿಸ್ಪರ್ಧಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 11, 2024, 12:32 [IST]
English summary
Citroen growth 121 percent in august 2024 new basalt car super hit sales
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+