ನಷ್ಟದ ಅಂಚಿಗೆ ಜಾರುತ್ತಿರುವ ಕಂಪನಿಗೆ ಕಾಮಧೇನು ಆಗುತ್ತಾ 8 ಲಕ್ಷದ ಈ ಸೇಫ್ಟಿ ಕಾರು!
ಫ್ರಾನ್ಸ್ ಮೂಲದ ಸಿಟ್ರನ್ (Citroen) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಆದರೂ ಹ್ಯುಂಡೈ ಹಾಗೂ ಕಿಯಾ ಸೇರಿದಂತೆ ಇತರೆ ವಿದೇಶಿ ಕಂಪನಿಗಳಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆ, ಕಂಪನಿ ಕಾರುಗಳ ಮಾರಾಟ ತಿಂಗಳಿಂದ ತಿಂಗಳಿಗೆ ಕುಸಿಯುತ್ತಲೇ ಇದೆ. ಅದನ್ನು ಪುಷ್ಠಿಕರಿಸುವಂತೆ ಕಳೆದ ತಿಂಗಳು (ಸೆಪ್ಟೆಂಬರ್ - 2024) ಕೇವಲ 711 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 748 ಯುನಿಟ್‌ಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 5% ಮಾರಾಟ ಪ್ರಮಾಣ ಕುಸಿತವಾಗಿದೆ.
ಆಗಸ್ಟ್‌ನಲ್ಲಿ (2024) ಸಿಟ್ರನ್ ಕಂಪನಿಯು ನೂತನ ಬಸಾಲ್ಟ್ ಕೂಪೆ ಎಸ್‌ಯುವಿ (Basalt Coupe Suv) ನೆರವಿನಿಂದ ಬರೋಬ್ಬರಿ 1,275 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿತ್ತು. ಈ ಮೂಲಕ 4 ಪಟ್ಟು ಹೆಚ್ಚು ಪ್ರಗತಿ ಸಾಧಿಸಿತ್ತು. ಆದರೀಗ ಸೆಪ್ಟೆಂಬರ್‌ನಲ್ಲಿ ತಿಂಗಳಿಂದ ತಿಂಗಳಿಗೆ (MoM) ಮಾರಾಟ ಪ್ರಮಾಣ 44% ಇಳಿಕೆಯಾಗಿದೆ.

ಸೆಪ್ಟೆಂಬರ್‌ನಲ್ಲಿ ಸಿಟ್ರನ್ ಕಂಪನಿಯು ಬಸಾಲ್ಟ್ ಕೂಪೆ ಎಸ್‌ಯುವಿಯ 341 ಯುನಿಟ್, ಸಿ3 ಹ್ಯಾಚ್‌ಬ್ಯಾಕ್‌ನ 300 ಯುನಿಟ್, ಸಿ3 ಏರ್‌ಕ್ರಾಸ್ ಎಸ್‌ಯುವಿಯ 41, ಇಸಿ3 ಎಲೆಕ್ಟ್ರಿಕ್ ಕಾರಿನ 28 ಹಾಗೂ ಸಿ5 ಏರ್‌ಕ್ರಾಸ್ ಎಸ್‌ಯುವಿಯ 1 ಯುನಿಟ್‌ನ್ನು ಮಾತ್ರ ಮಾರಾಟ ಮಾಡಿದೆ. ಕೆಲವೇ ದಿನಗಳ ಹಿಂದೆ, ಭಾರತ್ ಎನ್‌ಸಿಎಪಿ (Bharat NCAP) ಪರೀಕ್ಷೆಯಲ್ಲಿ 'ಬಸಾಲ್ಟ್' 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವುದರಿಂದ ಈ ಅಕ್ಟೋಬರ್‌ನಲ್ಲಿ ಮಾರಾಟ ಅಂಕಿಸಂಖ್ಯೆ ಸುಧಾರಿಸಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ ದೇಶೀಯವಾಗಿ ಖರೀದಿಗೆ ದೊರೆಯುವ ಸಿಟ್ರನ್ ಬಸಾಲ್ಟ್ ಬಗ್ಗೆ ಹೇಳುವುದಾದರೆ, ಈ ಕೂಪೆ ಎಸ್‌ಯುವಿ ರೂ.7.99 ಲಕ್ಷದಿಂದ ರೂ.13.83 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸಿಟ್ರನ್ ಸಿ3 (Citroen C3) ಹ್ಯಾಚ್‌ಬ್ಯಾಕ್ ಕುರಿತಂತೆ ಮಾತನಾಡುವುದಾದರೆ, ಈ ಕಾರು ರೂ.6.16 ರಿಂದ ರೂ.10.15 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1.2-ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.2-ಇಂಚು) ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಸಿಟ್ರನ್ ಇಸಿ3 (Citroen eC3) ಬಗ್ಗೆ ತಿಳಿಯುವುದಾದರೆ, ಇದೊಂದು ಎಲೆಕ್ಟ್ರಿಕ್ ಕಾರಾಗಿದೆ. ರೂ.11.61 ರಿಂದ ರೂ.13.41 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 29.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 320 ಕಿಲೋಮೀಟರ್ ಕ್ರಮಿಸುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.2-ಇಂಚು), ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸಿಟ್ರನ್ ಸಿ3 ಏರ್‌ಕ್ರಾಸ್ (Citroen C3 Aircross) ಕುರಿತಂತೆ ಹೇಳುವುದಾದರೆ, ಈ ಕಾರು ರೂ.8.49 ರಿಂದ ರೂ.14.55 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 17.6 ರಿಂದ 18.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ( 10.2-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಆಟೋ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








