ಕಾರುಗಳು ಅತ್ಯುತ್ತಮವಾದರೂ ಭಾರತದಲ್ಲೇಕೆ ಹೆಚ್ಚು ಮಾರಾಟವಾಗುತ್ತಿಲ್ಲ!: ಫ್ರೆಂಚರಿಂದ ಮಾಸ್ಟರ್‌ ಪ್ಲಾನ್

ಫ್ರೆಂಚ್ ಕಾರು ನಿರ್ಮಾಣ ಕಂಪನಿ ಸಿಟ್ರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯರಿಗೆ ಇದು ಹೊಸದಾದರೂ, ಜಾಗತಿಕ ಕಾರು ನಿರ್ಮಾಣ ಕ್ಷೇತ್ರದಲ್ಲಿ ಸಿಟ್ರನ್‌ ಮಾಡಿರುವ ಹೆಸರು ಮಾತ್ರ ಅವಿಸ್ಮರಣೀಯ. ಭಾರತದಲ್ಲಿ ಈ ಕಂಪನಿ ನಾಲ್ಕು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೊಸ ಕಾರೊಂದನ್ನು ನಾಳೆ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದ್ದು ಇದು ನಾವು ಈ ಕಂಪನಿಯ ಬಗ್ಗೆ ಅತೀ ಮೂಖ್ಯವಾದ ಮತ್ತು ಚಿಂತಾಜನಕ ವಿಷಯದ ಬಗ್ಗೆ ಮಾತನಾಡಲಿದ್ದು, ಈ ಕುರಿತಾಗಿ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಕೊನೆಯವರೆಗೆ ಓದಿ.

ಕಂಪನಿಯ ಮಾರಾಟದ ಸಂಖ್ಯೆಯನ್ನು ಗಮನಿಸುವುದಾದರೆ, ತೀರಾ ಕಮ್ಮಿಯಿದೆ ಎನ್ನಬಹುದು. ಜೂನ್ 2024 ರಲ್ಲಿ, ಸಿಟ್ರನ್ 4 ಕಾರುಗಳ ಸಹಯಾದಿಂದ ಒಟ್ಟು 339 ಘಟಕಗಳನ್ನು ಮಾರಾಟ ಮಾಡಿತು. ಇದು ಕಂಪನಿಯ ಸಾರ್ವಕಾಲಿಕ ಕಡಿಮೆ ಮಾರಾಟದ ದಾಖಲೆಗಳಲ್ಲಿ ಒಂದಾಗಿದೆ, ಇದು ಫೆಬ್ರವರಿ 2023 ರಲ್ಲಿ ಮಾರಾಟವಾದ 328 ಯುನಿಟ್‌ಗಳಿಗೆ (C3 ಬಿಡುಗಡೆಯ ನಂತರ) ಎರಡನೆಯದು.

Declining Citroen sales Can Citroen Basalt reverse the trend

ಕಂಪನಿ ಭಾರತದಲ್ಲಿ 2021 ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದಾಗಿನಿಂದ, ಸಿಟ್ರನ್ ಇಂಡಿಯಾ ಭಾರತದಲ್ಲಿ ಹೆಚ್ಚೇನು ಸದ್ದು ಮಾಡಿಲ್ಲ ಎಂದೇ ಹೇಳಬಹುದು. ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುವ ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳ ನಡುವೆ ತನ್ನದೇ ಆದ ಜಾಗವನ್ನು ಗುರುತಿಸಲು ಕಂಪನಿ ಕೊಂಚ ಎಡವಿದೆ. ಆದರೆ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಬಹುದಾದ ಕಾರೊಂದನ್ನು ಮಾರುಕಟ್ಟೆಗೆ ತರಲಿದೆ.

ಹೌದು ನಾವು ಮಾತನಾಡುತ್ತಿರುವುದು ಸಿಟ್ರನ್‌ ಬಸಾಲ್ಟ್‌ (Citroen Basalt) ಬಗ್ಗೆ. ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಎಸ್‍ಯುವಿ ಕೂಪ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ವೇಳೆ ಸಿಟ್ರನ್ ಎದುರಾಳಿಯಾಗಿ ತನ್ನ ಹೊಸ ಕೂಪೆ ಎಸ್‌ಯುವಿಯನ್ನು ತರುತ್ತಿದೆ. ಈ ಎರಡೂ ಮಾದರಿಗಳು ಭಾರತೀಯ ಮಾರುಕಟ್ಟೆಗಳಲ್ಲಿ ಪರಸ್ಪರ ಸ್ಪರ್ಧಿಸಲಿದೆ.

Declining Citroen sales Can Citroen Basalt reverse the trend

ಹೊಸ ಸಿಟ್ರನ್ ಬಸಾಲ್ಟ್ (Citroen Basalt) ಎಸ್‌ಯುವಿಯು ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿದೆ. ಬಹುತೇಕ ಸಿ3 ಏರ್‌ಕ್ರಾಸ್‌ (C3 Aircross) ಎಸ್‌ಯುವಿಗೆ ಹೋಲುತ್ತದೆ. ಈ ಹೊಸ ಎಸ್‍ಯುವಿಯಲ್ಲಿ ನವೀನ ಶೈಲಿಯ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರದ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆದಿದೆ. ರೂಫ್‌ಲೈನ್ ಇಳಿಜಾರಿನ ರೂಪದಲ್ಲಿದೆ. ಉತ್ತಮವಾದ ಟೈಲ್‌ಲೈಟ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಸಿಟ್ರನ್ ಬಸಾಲ್ಟ್ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಹೆಚ್‌ಪಿ ಗರಿಷ್ಠ ಪವರ್ ಹಾಗೂ 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ಪಡೆದಿದೆ. ಈ ಎಂಜಿನ್ 18 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಮತ್ತೊಂದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಹೆಚ್‌ಪಿ ಗರಿಷ್ಠ ಶಕ್ತಿ ಹೊರಹಾಕುತ್ತದೆ. ಆದಾಗ್ಯೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ರೂಪಾಂತರ (ವೇರಿಯೆಂಟ್) 190 ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 19.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಪಡೆದಿರುವ ರೂಪಾಂತರ 205 ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 18.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, August 6, 2024, 14:42 [IST]
English summary
Declining citroen sales can citroen basalt reverse the trend
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+