ಕೇವಲ 2 ಕಾರು ಮಾದರಿಯನ್ನು ಬಳಸಿಕೊಂಡು ಮಾರುತಿ, ಟಾಟಾ, ಮಹೀಂದ್ರಾ ಬುಡವನ್ನೇ ಅಲ್ಲಾಡಿಸುತ್ತಿದೆ ಈ ಕಂಪನಿ!

ಭಾರತದಲ್ಲಿ ಪ್ರಸಿದ್ದ ಕಾರು ನಿರ್ಮಾಣ ಕಂಪನಿ ಯಾವುದೆಂದು ಯಾರಾದರೂ ಕೇಳಿದರೆ ಎಲ್ಲರೂ ಕಣ್ಣು ಮುಚ್ಚಿಕೊಂಡು ಹೇಳುವ ಹೆಸರು ಒಂದೋ ಮಾರುತಿ ಸುಜುಕಿ ಅಥವಾ ಟಾಟಾ ಮೋಟಾರ್ಸ್‌. ಯಾಕೆಂದರೆ ಭಾರತದಲ್ಲಿ ಮಾರಾಟವಾಗುವ ಅತೀ ಹೆಚ್ಚು ಕಾರುಗಳನ್ನು ನೋಡಿದರೆ ಅದರಲ್ಲಿ ಟಾಟಾ ಮತ್ತು ಮಾರುತಿಯದ್ದೇ ಸಿಂಹಪಾಲು. ಹಾಗಾಗಿ ಈ ಹೆಸರುಗಳನ್ನು ಹೇಳುವುದು ಸಹಜವಾದ ವಿಷಯ ಎಂದೇ ಹೇಳಬಹುದು. ಆದರೆ ಇಲ್ಲೊಂದು ಕಾರು ನಿರ್ಮಾಣ ಕಂಪನಿ ಭಾರತದಲ್ಲಿ ಸದ್ದಿಲ್ಲದೇ ಸದ್ದು ಮಾಡುತ್ತಿದೆ. ನಾವು ಹೀಗೆನ್ನಲು ಅದರದ್ದೇ ಆದ ಕಾರಣಗಳೂ ಇದೆ ಎನ್ನಬಹುದು.

ಭಾರತದಲ್ಲಿ ಕಾರ್ಯ ನಿರ್ವಹಿಸುವ ಕಾರು ಕಂಪನಿಯೊಂದು ಕೇವಲ ಎರಡು ಕಾರು ಮಾದರಿಗಳನ್ನು ಇಟ್ಟುಕೊಂಡು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌, ಮಹೀಂದ್ರಾ ರೀತಿಯ ದೈತ್ಯ ಕಂಪನಿಗಳನ್ನು ಹಿಂದಿಕ್ಕುತ್ತಿದೆ. ಹೌದು, ನಿಸ್ಸಾನ್‌ ಎಂಬ ಕಾರು ನಿರ್ಮಾಣ ಕಂಪನಿ ನಮಗೆಲ್ಲರಿಗೂ ತಿಳಿದಿದೆ. ಹಿಂದೆ ಭಾರತದಲ್ಲಿ ಸಾಕಷ್ಟು ಚಟುವಟಿಕೆಯಿಂದ ಕೂಡಿದ್ದ ಈ ಕಾರು ಕಂಪನಿ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಮಂಕಾಗಿದೆ ಎಂದರೆ ತಪ್ಪಾಗಲಾರದು.

Despite only two models Nissan company exports more than others

ಸದ್ಯಕ್ಕೆ ಭಾರತದಲ್ಲಿ ನಿಸ್ಸಾನ್‌ (Nissan), ಮ್ಯಾಗ್ನೈಟ್‌ ಎಂಬ ಕಾರು ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ. ಇದರ ಫೇಸ್‌ಲಿಫ್ಟ್ ಮಾದರಿಯನ್ನು ಭಾರತೀಯ ಹೆದ್ದಾರಿಯಲ್ಲಿ ಪರೀಕ್ಷಾರ್ಥ ಓಡಾಟದಲ್ಲಿಯೂ ಒಳಪಡಿಸುತ್ತಿದೆ. ಅಂದರೆ ಸದ್ಯದಲ್ಲೇ ಈ ಕಾರಿನ ಫೇಸ್‌ಲಿಫ್ಟ್‌ ಅನ್ನು ಸಹ ನಿಸ್ಸಾನ್‌ ಭಾರತೀಯ ಮಾರುಕಟ್ಟೆಗೆ ತರಲಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಸ್ಸಾನ್‌ ಸದ್ಯಕ್ಕೆ ಸುದ್ದಿಯಾಗುತ್ತಿರುವುದು ಇದಕ್ಕಲ್ಲ.

ಭಾರತದಲ್ಲಿ ನಿಸ್ಸಾನ್‌ ಕಪನಿ ಕೇವಲ ಮ್ಯಾಗ್ನೈಟ್‌ ಕಾರನ್ನು ಮಾರಾಟ ಮಾಡುತ್ತಿದೆಯಾದರೂ, ಮ್ಯಾಗ್ನೈಟ್‌ ಮತ್ತು ಸನ್ನಿ ಈ ಎರಡೂ ಕಾರನ್ನು ಉತ್ಪಾದಿಸಿ ವಿದೇಶಕ್ಕೆ ಎಕ್ಸ್‌ಪೋರ್ಟ್‌ ಮಾಡುತ್ತಿದೆ. ಹೋಗೆ ಬರೀ ಎರಡು ಕಾರುಗಳನ್ನು ಎಕ್ಸ್‌ಪೋರ್ಟ್ ಮಾಡುತ್ತಿದ್ದರೂ ದೇಶದ ಇತರ ಕಾರು ನಿರ್ಮಾಣ ಕಂಪನಿಗಳಾದ ಮಾರುತಿ, ಟಾಟಾ, ಮಹೀಂದ್ರಾ ಕಾರು ಕಂಪನಿಗಳನ್ನು ಹಿಂದಿಕ್ಕಿದೆ.

Despite only two models Nissan company exports more than others

ಎಪ್ರಿಲ್‌ ಮತ್ತು ಮೇ ತಿಂಗಳ ವರದಿಯ ಪ್ರಕಾರ, ನಿಸ್ಸಾನ್‌ ಸುಮಾರು 4,632 ಯೂನಿಟ್‌ ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಮಹೀಂದ್ರಾ ಕಂಪನಿ 1,639, ಟಾಟಾ 478, ರೆನಾಲ್ಟ್‌ 478 ಮತ್ತು ಸ್ಕೋಡಾ ಕಂಪನಿ ಸುಮಾರು 175 ಯೂನಿಟ್‌ ಕಾರುಗಳನ್ನು ರಫ್ತು ಮಾಡಿದೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಭಾರತದಲ್ಲಿ ಮಾರಾಟದಲ್ಲಿರುವ ನಿಸ್ಸಾನ್‌ ಮ್ಯಾಗ್ನೈಟ್‌ (Nissan Magnite Facelift) ಕುರಿತಾಗಿ ನೊಡುವುದಾದರೆ, ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಶ್ಚರ್ಯ ಸಂಗತಿಯೊಂದು ಇಲ್ಲಿದೆ. ಇದು, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಜೊತೆಯಲ್ಲಿ ಎಎಂಟಿ ಗೇರ್‌ಬಾಕ್ಸ್ ಹೊಂದಿರುವ ಏಕೈಕ ಆವೃತ್ತಿಯಾಗಿದೆ. ಟರ್ಬೋಚಾರ್ಜ್ಡ್ ಎಂಜಿನ್ ನಿಸ್ಸಾನ್ ಮ್ಯಾಗ್ನೈಟ್ ಆವೃತ್ತಿಯು ಇನ್ನೂ ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.

ಹೊಸ ಗೇರ್‌ಬಾಕ್ಸ್ ಹೊಂದಿರುವ ಈ ಕಾರಿನ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್, 71 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಫ್ರಂಟ್ ವೀಲ್ ಗಳಿಗೆ ಪವರ್ ವರ್ಗಾಯಿಸುತ್ತದೆ. ಈ ಮೂಲಕ ಇದರ ಎಂಜಿನ್ ಹೆಚ್ಚು ಶಕ್ತಿಯುತವಾಗಿದೆ ಎಂದು ಹೇಳಬಹುದು.

ಹಿಂದಿನ ಮಾದರಿಯಂತೆಯೇ ಈ ಮ್ಯಾಗ್ನೈಟ್‌ ರೂಪಾಂತರದಲ್ಲಿಯೂ ಸಸ್ಪೆನ್ಷನ್ ಸೆಟಪ್ ಉತ್ತಮವಾಗಿದೆ. ಕಾರು ಹೆಚ್ಚಿನ ವೇಗದಲ್ಲಿ ಇದ್ದಾಗ, ಉಬ್ಬು - ತಗ್ಗು, ಹಳ್ಳ - ದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿ ಸುಲಭವಾಗಿ ಚಲಾಯಿಸುತ್ತದೆ. ತಿರುವುಗಳಲ್ಲಿಯೂ ಉತ್ತಮವಾಗಿ ಡ್ರೈವ್ ಮಾಡಬಹುದು. ಬಾಡಿ ರೋಲ್ ಸಮಸ್ಯೆಯೂ ಅಷ್ಟಾಗಿ ಕಾಡುವುದಿಲ್ಲ. ಬ್ರೇಕ್ ಕೂಡ ಅತ್ಯುತ್ತಮವಾಗಿವೆ. ಇವೆಲ್ಲ ಕಾರಣಗಳಿಂದ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಉತ್ತಮವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 19, 2024, 11:20 [IST]
English summary
Despite only two models nissan company exports more than others
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+