ಗ್ರಾಹಕರಿಗೆ ಭರ್ಜರಿ ರಿಯಾಯಿತಿ: 4.5 ಲಕ್ಷ ವಾಹನಗಳ ಮಾರಾಟ: ದಸರಾ, ದೀಪಾವಳಿ ಎಫೆಕ್ಟ್‌!

ಭಾರತೀಯ ಆಟೋ ಉದ್ಯಮದಲ್ಲಿ ಕಳೆದೆರಡು ತಿಂಗಳುಗಳಲ್ಲಿ (ಆಗಸ್ಟ್-ಸೆಪ್ಟೆಂಬರ್) ಹೇಳಿಕೊಳ್ಳುವ ಮಟ್ಟಕ್ಕೆ ವಾಹನ ಮಾರಾಟದಲ್ಲಿ ಬೆಳವಣಿಗೆ ಕಂಡಿರಲಿಲ್ಲ. ಈ ಕಾರಣದಿಂದ ಹಾಗೂ ಸಾಲು ಸಾಲು ಹಬ್ಬಗಳು ಬಂದಿರುವ ಕಾರಣ ವಾಹನ ತಯಾರಕರು ಭರ್ಜರಿ ಆಫರ್‌ಗಳು ಹಾಗೂ ರಿಯಾಯಿತಿಗಳು ನೀಡುವ ಮೂಲಕ ಈ ಅಕ್ಟೋಬರ್ ತಿಂಗಳು ಭಾರೀ ಮಾರಾಟವನ್ನು ಕಂಡಿದೆ. ದಸರಾ, ಧಂತೇರಸ್ ಹಾಗೂ ದೀಪಾವಳಿ ಹಬ್ಬಗಳು ವಾಹನ ತಯಾರಕರಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ಒಟ್ಟಾರೆ ಈ ಮಾರಾಟವು ಈ ವರ್ಷದ ಅಕ್ಟೋಬರ್‌ನಲ್ಲಿ 4.5 ಲಕ್ಷ ವಾಹನಗಳನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಕಳೆದೆರಡು ತಿಂಗಳಿಗೆ ಹೋಲಿಸಿದರೆ ಈ ಹಬ್ಬದ ಸೀಸನ್‌ನಲ್ಲಿ ಕಾರು ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ, ದಾಖಲೆಯ ಬುಕಿಂಗ್ಸ್ ಬರುತ್ತಿವೆ. ಡೆಲಿವರಿಗಳನ್ನು ಸಹ ಹೆಚ್ಚಾಗಿ ನೀಡಲಾಗಿದೆ. ಸಹಜವಾಗಿ, ಮಳೆಯಿಂದಾಗಿ ಸ್ವಲ್ಪ ಅಡಚಣೆ ಇತ್ತು, ಆದರೆ ಅದನ್ನು ಸುಲಭವಾಗಿ ನಿವಾರಿಸಬಹುದು ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್ಎಡಿಎ) ಅಧ್ಯಕ್ಷ ವಿಘ್ನೇಶ್ವರ್ ಹೇಳಿದ್ದಾರೆ.

dusshera-diwali-dhanteras-brings-mega-car-sales-in-october

ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಮಾತನಾಡಿ, ಈ ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿಯ ಇತಿಹಾಸದಲ್ಲೇ ಅತಿ ಹೆಚ್ಚು ಮಾರಾಟವನ್ನು ಕಂಡಿದೆ. ಬರೋಬ್ಬರಿ ಎರಡು ಲಕ್ಷ ವಾಹನಗಳು ಮಾರಾಟವಾಗಿವೆ. ಈ ಹಿಂದೆ ಅಂದರೆ 2020-21ರ ಅಕ್ಟೋಬರ್‌ನಲ್ಲಿ 1,91,476 ಯುನಿಟ್ ವಾಹನಗಳು ಮಾರಾಟವಾಗಿದ್ದವು.

ಹಾಗೆಯೇ ಈ ಬಾರಿ ಧಂತೇರಸ್ (ಮಂಗಳವಾರ) ದಂದು ನಾವು 32,000 ಯುನಿಟ್ ವಾಹನಗಳನ್ನು ಡೆಲಿವರಿ ನೀಡಿದ್ದೇವೆ. ಈ ಧಂತೇರಸ್ ಬುಧವಾರವೂ ಮುಂದುವರಿದಿದ್ದರಿಂದ, ನಾವು ಸುಮಾರು 10,000 ಯುನಿಟ್‌ ವಾಹನಗಳನ್ನು ವಿತರಿಸಿದ್ದೇವೆ, ಒಟ್ಟು ಧಂತೇರಸ್ ನಲ್ಲಿ ಮಾರಾಟವಾದ ವಾಹನಗಳ ಸಂಖ್ಯೆಯು 42,000 ಕ್ಕೂ ಹೆಚ್ಚು ದಾಖಲಾಗಿದೆ.

dusshera-diwali-dhanteras-brings-mega-car-sales-in-october

ಉದ್ಯಮದ ಮೂಲಗಳ ಪ್ರಕಾರ, ಕೇವಲ ಮಾರುತಿ ಮಾತ್ರವೇ ಈ ಹಬ್ಬದ ಸೀಸನ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಡೆಲಿವರಿ ನೀಡಿರುವುದರಿಂದ, ಒಟ್ಟಾರೆ ಪ್ಯಾಸಿಂಜರ್ ವಾಹನ ಮಾರಾಟವು 4.5 ಲಕ್ಷ ಯುನಿಟ್‌ಗಳನ್ನು ದಾಟಬಹುದು. ರಿಯಾಯಿತಿಗಳು ಹಾಗೂ ಆಫರ್‌ಗಳು ಇನ್ನೂ ಮುಂದುವರಿಯುವುದರಿಂದ ಮುಂದಿನ 20 ದಿನಗಳವರೆಗೆ ಇದೇ ರೀತಿಯ ಮಾರಾಟವನ್ನು ನಿರೀಕ್ಷಿಸಲಾಗಿದೆ ಪಾರ್ಥೋ ಬ್ಯಾನರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಾಟಾ ಮೋಟಾರ್ಸ್ ಸಹ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇಕಡಾ 30 ರಷ್ಟು ಹೆಚ್ಚಳದೊಂದಿಗೆ ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ. "ಧಂತೇರಸ್ ದಿನದಂದು ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ನಾವು 15,000 ಕ್ಕೂ ಹೆಚ್ಚು ವಾಹನಗಳನ್ನು ತಲುಪಿಸಿದ್ದೇವೆ" ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.

dusshera-diwali-dhanteras-brings-mega-car-sales-in-october

ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಳ: ಎಂಜಿ ಮೋಟಾರ್ ಇಂಡಿಯಾ ಧಂತೇರಸ್‌ನಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಒಂದೇ ದಿನದಲ್ಲಿ 101 ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಿರುವುದಾಗಿ ಹೇಳಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಇತ್ತೀಚಿನ ಎಲೆಕ್ಟ್ರಿಕ್ ಕ್ರಾಸ್ಒವರ್ ಯುಟಿಲಿಟಿ ವಾಹನ (ಸಿಯುವಿ) - ವಿಂಡ್ಸರ್, ಝಡ್ಎಸ್ ಇವಿ ಮತ್ತು ಕಾಮೆಟ್ ವಾಹನಗಳ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 1, 2024, 14:09 [IST]
English summary
Dusshera diwali dhanteras brings mega car sales in october
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+