ಮೊದಲ ಬಾರಿಗೆ ಅಚ್ಚರಿ! ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಎಲೆಕ್ಟ್ರಿಕ್ ಹ್ಯುಂಡೈ ಕ್ರೆಟಾ

ಕೆಲವು ತಿಂಗಳುಗಳ ಹಿಂದೆ ಹ್ಯುಂಡೈ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಎಲೆಕ್ಟ್ರಿಕ್ ಕ್ರೆಟಾ ಮಾದರಿಯನ್ನು ಟೆಸ್ಟಿಂಗ್ ಮಾಡುತ್ತಾ ಕಾಣಿಸಿಕೊಂಡಿದೆ. ಆದರೆ ಇದು ಇತ್ತೀಚೆಗೆ ಬಿಡುಗಡೆಯಾದ ಫೇಸ್‌ಲಿಫ್ಟ್‌ ಕ್ರೆಟಾದಂತೆ ಅಲ್ಲದೇ ಹಳೆಯ ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಕಾಣಿಸಿಕೊಂಡ ಟೆಸ್ಟಿಂಗ್ ಮಾದರಿ ಅಚ್ಚರಿಗೊಳಿಸಿದೆ.

ಏಕೆಂದರೆ' ಇದೇ ಮೊದಲ ಬಾರಿಗೆ ಇತ್ತೀಚೆಗೆ ಬಿಡುಗಡೆಯಾದ ಇಂಧನ ಚಾಲತ ಕ್ರೆಟಾ ಫೆಸ್‌ಲಿಫ್ಟ್‌ ಆವೃತ್ತಿಯಲ್ಲಿ ಎಲೆಕ್ಟ್ರಿಕ್ ಕ್ರೆಟಾ ಕಾಣಿಸಿಕೊಂಡಿದೆ. 2024 ಕ್ರೆಟಾ ICE ನಿಂದ ಸ್ಫೂರ್ತಿ ಪಡೆದ ಮುಂಭಾಗದ ವಿನ್ಯಾಸವನ್ನು ಹೊಂದಿದೆ. ಹಿಂಭಾಗದಲ್ಲಿ LED ಟೈಲ್ ಲ್ಯಾಂಪ್‌ಗಳು IC-ಎಂಜಿನ್‌ನ ಕ್ರೆಟಾವನ್ನು ನೆನಪಿಸುತ್ತವೆ. ಕೋನಾ ಎಲೆಕ್ಟ್ರಿಕ್‌ನಲ್ಲಿರುವಂತೆ ಚಾರ್ಜಿಂಗ್ ಪೋರ್ಟ್ ಅನ್ನು ಮುಂಭಾಗದಲ್ಲಿ ನೀಡಲಾಗಿದೆ.

electric-hyundai-creta-caught-on-camera-during-testing

ಹೊಸ ಅಲಾಯ್ ವೀಲ್‌ಗಳನ್ನು ಎಲೆಕ್ಟ್ರಿಕ್ ಆವೃತ್ತಿಗೆ ನೀಡಬಹುದು ಎನ್ನಲಾಗಿದೆ. ಇಂಟೀರಿಯರ್‌ನಲ್ಲಿ ICE ಕ್ರೆಟಾದೊಂದಿಗೆ ಬಹಳಷ್ಟು ಸಾಮ್ಯತೆಯನ್ನು ಹೊಂದಿರಲಿದೆ. ಹಾಗೆಯೇ Ioniq 5 ನಿಂದ ಕೆಲವು ಪ್ರೀಮಿಯಂ ಫೀಚರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಹೊಸ ಕ್ರೆಟಾ ಎಲೆಕ್ಟ್ರಿಕ್ ಆವೃತ್ತಿಗೆ 45 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಬಹುದೆಂದು ವರದಿಗಳು ಸೂಚಿಸುತ್ತಿವೆ.

ಆದರೆ ಎಲೆಕ್ಟ್ರಿಕ್ ಮೋಟರ್ ಬೇಸ್-ಸ್ಪೆಕ್ ಕೋನಾ ಎಲೆಕ್ಟ್ರಿಕ್‌ನಲ್ಲಿ ಕಂಡುಬರುವ ಅದೇ ಘಟಕವಾಗಿದ್ದು 138 hp ಪವರ್ ಮತ್ತು 255 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ 450 ಕಿಮೀಗಿಂತ ಹೆಚ್ಚು ರೇಂಜ್ ನೀಡಬಹುದು ಎನ್ನಲಾಗಿದೆ. ಉಳಿದಂತೆ ಹುಂಡೈ ಕ್ರೆಟಾ EV 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಆಗಮಿಸುವ ನಿರೀಕ್ಷೆಯಿದೆ. ನಮ್ಮ ಪ್ರಕಾರ ಬೆಲೆಯು ರೂ. 20 ಲಕ್ಷ (ಎಕ್ಸ್ ಶೋ ರೂಂ) ಇರಬಹುದು.

electric-hyundai-creta-caught-on-camera-during-testing

ಸರಿಯಾದ ಪ್ರತಿಸ್ಪರ್ಧಿಗಳಿದ್ದಾರೆ: ಈಗಾಗಲೇ ಎಲೆಕ್ಟ್ರಿಕ್ ಮಿಡ್‌ ಸೈಜ್ ಎಸ್‌ಯುವಿ ವಿಭಾಗಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ಈ ವಿಭಾಗದಲ್ಲಿ ತಮಗಿರುವ ಇಂಧನ ಚಾಲಿತ ಕಾರುಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಲು ತುದಿಗಾಲಲ್ಲಿ ನಿಂತಿವೆ. ಇದೇ ವರ್ಷದ ಕೊನೆಯಲ್ಲಿ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಮಾದರಿಯಾದ eVX ಅನಾವರಣಗೊಳಲ್ಲಿದೆ.

ಮುಂಬರುವ ತಿಂಗಳುಗಳಲ್ಲಿ ಟಾಟಾ ಕರ್ವ್ ಬಿಡುಗಡೆಯಾಗುವುದರಿಂದ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗವು ಹೊಸ ಮಾದರಿಗಳಿಂದ ತುಂಬಿತುಳುಕಲಿದೆ. ಇದಲ್ಲದೆ, INGLO ಪ್ಲಾಟ್‌ಫಾರ್ಮ್ ಆಧಾರಿತ ಮಹೀಂದ್ರಾ XUV.e8 ಅನ್ನು 2024 ರ ಅಂತ್ಯದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಉಳಿದಂತೆ ಟೊಯೋಟಾ ಇವಿ 2025 ರ ಆರಂಭದಲ್ಲಿ ಆಗಮಿಸಲಿದೆ. ಇವಿಷ್ಟೇ ಅಲ್ಲದೇ, Citroen eC3 ಏರ್‌ಕ್ರಾಸ್ ಸಹ ಅಭಿವೃದ್ಧಿ ಹಂತದಲ್ಲಿದೆ.

electric-hyundai-creta-caught-on-camera-during-testing

ಒಟ್ಟಾರೆ 2024 ರ ವರ್ಷವು ಅನೇಕ ಮಿಡ್‌ಸೈಜ್ ಇವಿ ಎಸ್‌ಯುವಿಗಳಿಗೆ ಸಾಕ್ಷಿಯಾಗಲಿದೆ. ಈಗಿರುವ ಬಹುತೇಕ ಎಲೆಕ್ಟ್ರಿಕ್ ಎಸ್‌ಯುವಿಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹಾಗಾಗಿಯೇ ಎಲ್ಲಾ ಬ್ರಾಂಡ್‌ಗಳು ಇವಿ ವಿಭಾಗವನ್ನು ಆಳಲು ಸಜ್ಜಾಗುತ್ತಿವೆ. 2024 ರಲ್ಲಿ ಯಾವೆಲ್ಲಾ ಬ್ರಾಂಡ್‌ಗಳು ತಮ್ಮ ಅಧಿಪತ್ಯವನ್ನು ಸಾಧಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 25, 2024, 15:18 [IST]
English summary
Electric hyundai creta caught on camera during testing know more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+