ಎಲೆಕ್ಟ್ರಿಕ್ ಲೋಕಕ್ಕೆ ಎಂಟ್ರಿ ನೀಡಲಿದೆ ಹೋಂಡಾ: ಗುಟ್ಟಾಗಿಟ್ಟಿದ್ದ ಮಾಹಿತಿ ರಟ್ಟಾಗಿದೆ, ಎದುರಾಳಿಗಳಿಗೆ ನಡುಕ
ಜಪಾನಿನ ಬೃಹತ್ ಆಟೋಮೊಬೈಲ್ ದಿಗ್ಗಜನಾದ ಹೋಂಡಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದಕ್ಕಾಗಿ ಬಹುದೊಡ್ಡ ನಡೆಯನ್ನು ಇರಿಸಿದೆ. ಇದೀಗ ಮಾಧ್ಯಮಗಳೊಂದಿಗೆ ತನ್ನ ನಡೆಯನ್ನು ಹಂಚಿಕೊಂಡಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಮೂಲಗಳ ಪ್ರಕಾರ ಹೋಂಡಾ ಒಂದು ಎಲೆಕ್ಟ್ರಿಕ್ ಮಾಡೆಲ್ ಅನ್ನು ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಹೋಂಡಾ ಎಲಿವೇಟ್ ಎಂಬ ಎಸ್‌ಯುವಿಯನ್ನು ಕಂಪನಿ ಮಾರುಕಟ್ಟೆಗೆ ತಂದಿತ್ತು. ಹಲವು ಕಾರಣಗಳಿಂದ ಗ್ರಾಹಕರ ಗಮನವನ್ನೂ ಸಹ ಈ ಕಾರು ಸೆಳೆದಿತ್ತು. ಕೆಲವು ವಾರಗಳ ಹಿಂದಿನವರೆಗೂ ಹೋಂಡಾ ಹೊಸ ಸೆಡಾನ್ ಕಾರನ್ನು ಮಾರುಕಟ್ಟೆಗೆ ತರುವ ತಯಾರಿಯಲ್ಲಿದೆ ಎಂಬ ಸುದ್ದಿಗಳು ಸಹ ಅಲ್ಲಲ್ಲಿ ಕಂಡು ಬಂದಿತ್ತು. ಆದರೆ ಈಗ ಹೋಂಡಾ ಈ ಎಲ್ಲಾ ಗಾಸಿಪ್‌ಗೂ ತೆರೆ ಎಳೆದಿದ್ದು ಹೊಸ ಮಾಹಿತಿಯನ್ನು ಹೊರಬಿಟ್ಟಿದೆ.

ಮಾಹಿತಿಗಳ ಪ್ರಕಾರ ಹೋಂಡಾ, ತನ್ನ ಎಲಿವೇಟ್ ಎಸ್‌ಯುವಿಯ ಎಲೆಕ್ಟ್ರಿಕ್ ಮಾದರಿಯನ್ನು ಅಭಿವೃದ್ದಿ ಪಡಿಸುತ್ತಿದ್ದು, ಇದನ್ನು ಇನ್ನು ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದೆ. ಮಾರುಕಟ್ಟೆಗೆ ಕಾಲಿಡಲಿರುವ ಹ್ಯುಂಡೈ ಕ್ರೆಟಾ ಇವಿ ಹಾಗೂ ಮಾರುತಿ ಸುಜುಕಿ ಇವಿಎಕ್ಸ್ ಕಾರುಗಳಿಗೆ ಪೈಪೋಟಿಯಾಗಿ ಹೋಂಡಾ ಈ ಎಲಿವೇಟ್ ಎಸ್‌ಯುವಿಯನ್ನು ಅಭಿವೃದ್ದಿಪಡಿಸುತ್ತಿದೆ ಎಂದು ತಿಳಿದು ಬಂದಿದೆ.
ಹೋಂಡಾ ಎಲಿವೇಟ್ ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಬಂದರೆ ಅದೊಂಡು ಕಠಿಣ ಎದುರಾಳಿಯಾಗಿರಲಿದೆ ಎಂಬುದು ಕಾರು ಪಂಡಿತರ ಅಭಿಪ್ರಾಯ. ಇದಕ್ಕೆ ಹಲವರು ಕಾರಣಗಳೂ ಸಹ ಇದೆ. ಆದರೆ ಕಳೆದ ಬಾರಿಯ ಆಟೋ ಎಕ್ಸ್ಪೋದಲ್ಲಿ ಮಾರುತಿ ಸುಜುಕಿ ಅನಾವರಣಗೊಳಿಸಿದ್ದ ಇವಿಎಕ್ಸ್ ಎಂಬ ಎಲೆಕ್ಟ್ರಿಕ್ ಎಸ್‌ಯುವಿಯೂ ಉತ್ತಮ ಸ್ಪರ್ಧಿಯಾಗಿದ್ದು ಇದರಲ್ಲಿ ಯಾವ ಫೀಚರ್‌ಗಳೆಲ್ಲಾ ಇರಲಿವೆ ಎಂಬುದು ಎಲ್ಲರ ಕುತೂಹಲವಾಗಿದೆ.

ಇನ್ನು ಈಗ ಸದ್ಯ ಮಾರುಕಟ್ಟೆಯಲ್ಲಿರುವ ಹೋಂಡಾ ಎಲಿವೇಟ್ ಕುರಿತಾಗಿ ನೋಡುವುದಾದರೆ, ಹೋಂಡಾ ಎಲಿವೇಟ್ ಸರಿಯಾದ ಬಾಕ್ಸ್ ಲುಕ್‌ನೊಂದಿಗೆ ಬರುತ್ತದೆ. ಎಲಿವೇಟ್‌ನ ಮಸ್ಕ್ಯುಲರ್ ಬಾನೆಟ್ ಮತ್ತು ನೇರವಾದ ಮುಂಭಾಗದ ತುದಿಯು ಹೋಂಡಾ ಬ್ಯಾಡ್ಜ್‌ನೊಂದಿಗೆ ಎಂಥವರನ್ನು ತನ್ನತ್ತ ಸೆಳೆಯುವ ನೋಟವನ್ನು ಪಡೆದುಕೊಂಡಿದೆ. ಜೊತೆಗೆ ಮುಂಭಾಗದ ದೊಡ್ಡ ಗ್ರಿಲ್ ನೋಡುಗರ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಪ್ಲಶ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಕನೆಕ್ಟೆಡ್ ಕಾರ್ ಫೀಚರ್‌ಗಳ ಹೋಂಡಾ ಕನೆಕ್ಟ್ ಸೂಟ್ ಅನ್ನು ಒಳಗೊಂಡಿದೆ. ಇದು ನಿಮಗೆ ಅಡ್ಜಸ್ಟಬಲ್ ಫೋನ್ ಅಥವಾ ಸ್ಮಾರ್ಟ್‌ವಾಚ್ ಮೂಲಕ SUV ನ ಕಾರ್ಯಗಳನ್ನು ಸಂಪರ್ಕಿಸಲು ಮತ್ತು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದು ಹೋಂಡಾ ಎಲಿವೇಟ್‌ನ ಪ್ರಮುಖ ಫೀಚರ್‌ಗಳು ಎಂದರೆ ತಪ್ಪಾಗಲಾರದು.
ಪ್ರತಿ ಹೊಸ ಎಲಿವೇಟ್ ಐದು ವರ್ಷಗಳ ಹೋಂಡಾ ಕನೆಕ್ಟ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಇದಿಷ್ಟೇ ಅಲ್ಲದೇ ಹೋಂಡಾ ಎಲಿವೇಟ್ ಹಲವಾರು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಎಲಿವೇಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಅಗೈಲ್ ಹ್ಯಾಂಡ್ಲಿಂಗ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.
ಮಾರುಕಟ್ಟೆಯಲ್ಲಿರುವ ಎಲಿವೇಟ್‌ನ ಇಂಜಿನ್ ಬಗ್ಗೆ ನೊಡುವುದಾದರೆ, ಎಲಿವೇಟ್ ನ್ಯಾಚುರಲ್ಲಿ ಆಸ್ಪಿರೇಟೆಡ್ DOHC, 1.5-ಲೀಟರ್, 4 ಸಿಲಿಂಡರ್, i-VTEC ಪೆಟ್ರೋಲ್ ಎಂಜಿನ್ ಹೊಂದಿದೆ. ಹೊಸ ಹೋಂಡಾ ಎಲಿವೇಟ್‌ನಲ್ಲಿ, ಎಂಜಿನ್ 6,600 ಆರ್‌ಪಿಎಂ ನಲ್ಲಿ 119.35 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂ ನಲ್ಲಿ 145 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








