ದಸರಾ ಹಬ್ಬಕ್ಕೆ ಅಗ್ಗದ ಬೆಲೆ, ಭರ್ಜರಿ ಮೈಲೇಜ್‌ನ ಸಿಎನ್‌ಜಿ ಕಾರುಗಳ ಆಯ್ಕೆ ಇಲ್ಲಿದೆ ನೋಡಿ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಸಿಎನ್‌ಜಿ (CNG) ಚಾಲಿತ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಇವುಗಳನ್ನು ಕೊಂಡುಕೊಳ್ಳಲು ಗ್ರಾಹಕರು ಕೂಡ ಮನಸ್ಸು ಮಾಡುತ್ತಿದ್ದಾರೆ. ಖರೀದಿದಾರರ ಆಶೋತ್ತರಗಳನ್ನು ಪೂರೈಸಲು ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಸಿಎನ್‌ಜಿ ಕಾರುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಮಾರುಕಟ್ಟೆಯಲ್ಲಿ ಹಲವು ಸಿಎನ್‌ಜಿ ಕಾರುಗಳ ಆಯ್ಕೆಗಳಿವೆ. ದಸರಾ ಹಬ್ಬಕ್ಕೆ ಹಲವಾರು ಹೊಸ ಕಾರು ಖರೀದಿಸಲು ಪ್ಲಾನ್ ಮಾಡುತ್ತಾರೆ. ಅಂತವರಿಗೆ ಇಲ್ಲಿ ವರ್ಷಗಟ್ಟಲೇ ಬಾಳಿಕೆ ಬರುವ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಜನಪ್ರಿಯ ಸಿಎನ್‌ಜಿ ಕಾರುಗಳ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ.

ಟಾಟಾ ಪಂಚ್ ಸಿಎನ್‌ಜಿ: ಟಾಟಾ ಪಂಚ್ ಸಿಎನ್‌ಜಿ ಮಾದರಿಯು ಭಾರತದ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‍ಯುವಿ ಆಗಿದೆ. ಇದು ಅದರ ಸಿಎನ್‌ಜಿ ಟ್ಯಾಂಕ್‌ಗಳಿಗಾಗಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ, ಇದು ಬಳಸಬಹುದಾದ ಬೂಟ್ ಸ್ಪೇಸ್‌ ಅನ್ನು ಹೊಂದಿದೆ. ಈ ಟಾಟಾ ಪಂಚ್ ಸಿಎನ್‌ಜಿ ಎಸ್‍ಯುವಿಯಲ್ಲಿ 1.2-ಲೀಟರ್, 3-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ.

CNG SUVs

ಈ ಟಾಟಾ ಪಂಚ್ ಸಿಎನ್‌ಜಿ ಮಾದರಿಯಲ್ಲಿ 5-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಪಂಚ್ ಸಿಎನ್‌ಜಿ ಮಾದರಿಯು 26.99 ಕಿ.ಮೀ ರೇಂಜ್ ಅನ್ನು ಹೊಂದಿದೆ. ಈ ಟಾಟಾ ಪಂಚ್ ಸಿಎನ್‌ಜಿ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.23 ಲಕ್ಷವಾಗಿದೆ. ಈ ಪಂಚ್ ಸಿಎನ್‌ಜಿ ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ.

ಟಾಟಾ ನೆಕ್ಸಾನ್ ಸಿಎನ್‌ಜಿ: ಹೊಸ ಟಾಟಾ ನೆಕ್ಸಾನ್ ಸಿಎನ್‌ಜಿ (Tata Nexon CNG) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9 ಲಕ್ಷದಿಂದ ರೂ.14.50 ಲಕ್ಷವಾಗಿದೆ.ಈ ಟಾಟಾ ನೆಕ್ಸಾನ್ ಐಸಿಎನ್‌ಜಿ ಕಾರು ಐದು ಗೇಮ್-ಚೇಂಜಿಂಗ್ ಫೀಚರ್ಸ್‌ಗಳನ್ನು ಹೊಂದಿವೆ. ಟಾಟಾ ನೆಕ್ಸಾನ್ ಸಿಎನ್‌ಜಿ ಮಾದರಿಯಲ್ಲಿ 1.2-ಲೀಟರ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

CNG SUVs

ಈ ಎಂಜಿನ್ 100 hp ಮತ್ತು 170 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನೆಕ್ಸಾನ್ ಪೆಟ್ರೋಲ್ ಮಾದರಿಗಿಂತ 20 hp ಪವರ್ ಕಡಿಮೆ ಆದರೆ ಟಾರ್ಕ್‌ನಲ್ಲಿ ಹೊಂದಾಣಿಕೆಯಾಗುತ್ತದೆ. ಈ ಎಂಜಿನ್ ನೊಂದಿಗೆ ಪ್ರಸ್ತುತ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಿದೆ. ಈ ಮಾದರ್ಯು 24 ಕಿ.ಮೀ ಮೈಲೇಜ್ ನೀಡುತ್ತದೆ.

ಟಾಟಾ ನೆಕ್ಸಾನ್ ಬಣ್ಣದ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಮೊದಲ CNG ವಾಹನವಾಗಿದೆ. ಬಹು ವೀಕ್ಷಣಾ ವಿಧಾನಗಳು ಮತ್ತು ಗ್ರಾಹಕೀಕರಣ ಆಯ್ಕೆಗಳನ್ನು ನೀಡುವುದರಿಂದ, Apple CarPlay ಮತ್ತು Android Auto ಬಳಸುವಾಗ ಡಿಸ್ ಪ್ಲೇ ಯಲ್ಲಿ ನ್ಯಾವಿಗೇಶನ್ ಅನ್ನು ಪ್ರದರ್ಶಿಸುತ್ತದೆ. ಮತ್ತೊಂದು ಉತ್ತಮ ವೈಶಿಷ್ಟ್ಯವೆಂದರೆ ಈ ಕಾರಿನಲ್ಲಿ ವೆಂಟಿಲೆಟಡ್ ಫ್ರಂಟ್ ಸೀಟುಗಳನ್ನು ಹೊಂದಿವೆ.

CNG SUVs

ಮಾರುತಿ ಸುಜುಕಿ ಬ್ರೆಝಾ: ಈ ಮಾರುತಿ ಸುಜುಕಿ ಬ್ರೆಝಾ ಬಗ್ಗೆ ಹೇಳುವುದಾದರೆ, ಇದು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಕಾರಿನ ಆರಂಭಿಕ ಸಿಎನ್‌ಜಿ ಮಾದರಿಯು ರೂ.9.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5-ಲೀಟರ್ ಎಂಜಿನ್ ಹಾಗೂ 5-ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 25.51 ಕಿ.ಮೀ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 3, 2024, 16:38 [IST]
English summary
Festive season top 3 most affordable cng suvs in india details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+