Swift: ಎಲೆಕ್ಟ್ರಿಕ್-ಸಿಎನ್‌ಜಿ ಕಾರುಗಳ ಅಬ್ಬರಕ್ಕೆ ತೆರೆ.. ನಾಳೆ ಹೊಸ ಮಾರುತಿ ಸ್ವಿಫ್ಟ್ ಬಿಡುಗಡೆ.. ಹೇಗಿದೆ?
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ನಾಳೆ (ಮೇ.9) ತನ್ನ ಬಜೆಟ್ ಬೆಲೆಯ ನಾಲ್ಕನೇ ತಲೆಮಾರಿನ 'ಸ್ವಿಫ್ಟ್' ಹ್ಯಾಚ್‌ಬ್ಯಾಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಈಗಾಗಲೇ ನೂತನ ಕಾರು ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳನ್ನು ತಲುಪಲು ಶುರುವಾಗಿದೆ.
ಹೊಚ್ಚ ಹೊಸ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ (Fourth Generation Maruti Suzuki Swift) ಆಕರ್ಷಕವಾದ ವಿನ್ಯಾಸ (ಡಿಸೈನ್)ವನ್ನು ಪಡೆದುಕೊಂಡಿದೆ. ಇತ್ತೀಚೆಗೆ ಶೋರೂಂಗಳಿಗೆ ಬಂದಿರುವ ಈ ಕಾರು, ಮುಂಭಾಗ (ಫ್ರಂಟ್) ನವೀಕೃತ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಇಂಡಿಕೇಟರ್‌ಗಳಲ್ಲಿ ಬಲ್ಬ್‌ಗಳನ್ನು ಹೊಂದಿದೆ. ಗ್ರಿಲ್ ಮೇಲ್ಭಾಗದಲ್ಲಿ 'ಸುಜುಕಿ' ಲೋಗೋವನ್ನು ಒಳಗೊಂಡಿದೆ.

ಈ ಕಾರಿನ ಸೈಡ್ (ಬದಿ) ಭಾಗದ ವಿನ್ಯಾಸವು ಹೆಚ್ಚು ಅತ್ಯಾಧುನಿಕವಾಗಿದೆ. 16-ಇಂಚಿನ 10-ಸ್ಪೋಕ್ ಡೈಮಂಡ್ ಕಟ್ ಅಲಾಯ್ ವೀಲ್ಸ್, ಹಿಂಬದಿ (ರೇರ್) ಡೋರ್‌ಗಳಲ್ಲಿ ಸಾಂಪ್ರದಾಯಕ ಶೈಲಿ (ಟ್ರಡಿಷನ್-ಸ್ಟೈಲ್)ಯಲ್ಲಿರುವ ಹ್ಯಾಂಡಲ್‌ಗಳನ್ನು ಕೂಡ ಹೊಂದಿದೆ. ಹಿಂಭಾಗವು ಅತ್ಯುತ್ತಮ ವಿನ್ಯಾಸವನ್ನು ಒಳಗೊಂಡಿದೆ. ಸಿ-ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್ ಲೈಟ್‌ಗಳನ್ನು ತನ್ನದಾಗಿಸಿಕೊಂಡಿದೆ.
ನೂತನ ಮಾರುತಿ ಸುಜುಕಿ ಸ್ವಿಫ್ಟ್ ಒಳಭಾಗವು ಆಕರ್ಷವಾಗಿದ್ದು, ಭರಪೂರ ವೈಶಿಷ್ಟ್ಯಗಳನ್ನು ಹೊಂದಿರಲಿದೆ. 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಹೊಸದಾಗಿರುವ ಸ್ಟೀರಿಂಗ್ ವೀಲ್ ವೀಲ್ ಒಳಗೊಂಡಿರಲಿದ್ದು, ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಪಡೆದಿರುವ ಸಾಧ್ಯತೆಯಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಪವರ್‌ಟ್ರೇನ್ ಕುರಿತು ಯಾವುದೇ ಅಧಿಕೃತ ವಿವರಗಳು ದೊರೆತಿಲ್ಲ. ಇದು 1.2-ಲೀಟರ್ 3-ಸಿಲಿಂಡರ್ ಝಡ್-ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದಿರುವ ನಿರೀಕ್ಷೆಯಿದ್ದು, 81.6 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 112 ಎನ್ಎಂ ಪೀಕ್ ಹೊರಹಾಕಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್‌ನೊಂದಿಗೂ ಸಿಗಬಹುದು ಎನ್ನಲಾಗಿದೆ.
ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು, 25 ಕೆಎಂಪಿಎಲ್ ಗೂ ಹೆಚ್ಚಿನ ಮೈಲೇಜ್ ಕೊಡಬಹುದು. ರೂ.6.50 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಖರೀದಿಗೆ ಲಭ್ಯವಾಗಬಹುದು ಎಂದು ಹೇಳಲಾಗಿದೆ. ಮೇ.1ರಿಂದಲೇ ಈ ಕಾರಿನ ಬುಕ್ಕಿಂಗ್ ಪ್ರಾರಂಭವಾಗಿದ್ದು, ಆಸಕ್ತರು ರೂ.11 ಸಾವಿರ ಮುಂಗಡ ಹಣವನ್ನು ಕಟ್ಟುವ ಮೂಲಕ ಆರ್ಡರ್ ಮಾಡಬಹುದು.
ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಸ್ವಿಫ್ಟ್ ಹ್ಯಾಚ್‌ಬ್ಯಾಕ್, ರೂ.6.24 ಲಕ್ಷದಿಂದ ರೂ.9.28 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗುವ ಈ ಕಾರು, 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್‌ನ್ನು ಪಡೆದಿದೆ. 22.38 ರಿಂದ 30.90 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.
ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ & ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್-ಹೋಲ್ಡ್ ಕಂಟ್ರೋಲ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications