ಇವರಿಗೆ ಗುಡ್‍ನ್ಯೂಸ್.. ನಿಸ್ಸಾನ್‌ನ ಈ ಜನಪ್ರಿಯ ಕಾರಿಗೆ ರೂ.1.53 ಲಕ್ಷದವರೆಗೆ ಆಫರ್, 20 Km ಮೈಲೇಜ್.. 5 ಸೀಟರ್

ಜನಪ್ರಿಯ ಕಾರು ತಯಾರಕ ಕಂಪನಿ ನಿಸ್ಸಾನ್ ಮೋಟಾರ್ ಇಂಡಿಯಾ (Nissan Motor India), 2024ರ 'ಫ್ರೀಡಂ ಆಫರ್'ನ್ನು ಘೋಷಣೆ ಮಾಡಿದೆ. ನೂತನ ಮ್ಯಾಗ್ನೈಟ್ (Magnite) ಎಸ್‌ಯುವಿ ಖರೀದಿ ಮೇಲೆ ಬೃಹತ್ ಮೊತ್ತದ ರಿಯಾಯಿತಿ ಲಭ್ಯವಿದೆ. ಆಸಕ್ತ ರಕ್ಷಣಾ ಪಡೆ ಸಿಬ್ಬಂದಿ, ಕೇಂದ್ರೀಯ ಹಾಗೂ ರಾಜ್ಯ ಪೊಲೀಸ್ ಇಲಾಖೆ ಉದ್ಯೋಗಿಗಳು ಮಾತ್ರ ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು. ಅದರಲ್ಲೂ ಆಗಸ್ಟ್ 31ರವರೆಗೆ ಮ್ಯಾಗ್ನೈಟ್ ಕಾರನ್ನು ಬುಕ್ಕಿಂಗ್ ಮಾಡುವವರಿಗೆ ಈ ಹಣಕಾಸಿನ ಪ್ರಯೋಜನ ಸಿಗಲಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.

ರಕ್ಷಣಾ ಸಿಬ್ಬಂದಿಗಳು ಅಧಿಕೃತ ಸಿಎಸ್‌ಡಿ ಎಎಫ್‌ಡಿ ಪೋರ್ಟಲ್ (www.afd.csdindia.gov.in) ಮೂಲಕ ಹೊಸ ನಿಸ್ಸಾನ್‌ ಮ್ಯಾಗ್ನೈಟ್ (Nissan Magnite) ಕಾರನ್ನು ಆರ್ಡರ್ ಮಾಡಬಹುದು. ಸದ್ಯ 'ಎಕ್ಸ್ಇ' ರೂಪಾಂತರ (ವೇರಿಯೆಂಟ್) ರೂ.5.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 'ಫ್ರೀಡಂ ಆಫರ್'ನ ಭಾಗವಾಗಿ ಅದು ರೂ.4.99 ಲಕ್ಷಕ್ಕೆ (ಎಕ್ಸ್ ಶೋರೂಂ) ಸಿಗಲಿದ್ದು, ರೂ.1 ಲಕ್ಷ ಉಳಿಸಬಹುದು.

Freedom Offer Nissan Magnite Car Get Upto Rs 1 53 Lakh Discount Details

ರೂ.7.04 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿರುವ 'ಎಕ್ಸ್ಇ' ರೂಪಾಂತರ ರೂ.5,39 ಲಕ್ಷಕ್ಕೆ (ಎಕ್ಸ್ ಶೋರೂಂ) ಲಭ್ಯವಿದೆ. ಬರೋಬ್ಬರಿ ರೂ.1.64 ಲಕ್ಷ ಹಣವನ್ನು ಉಳಿತಾಯ ಮಾಡಬಹುದು. ಅದೇ ರೀತಿಯಲ್ಲಿ 'ಎಕ್ಸ್‌ವಿ' ರೂಪಾಂತರ ರೂ.7.82 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದ್ದು, ಹಣಕಾಸಿನ ಪ್ರಯೋಜನದ ಭಾಗವಾಗಿ ರಕ್ಷಣಾ ಸಿಬ್ಬಂದಿಗೆ ರೂ.6.29 ಲಕ್ಷ ಎಕ್ಸ್ ಶೋರೂಂ ದರಕ್ಕೆ ದೊರೆಯುತ್ತದೆ. ಇದರಿಂದ ರೂ.1.53 ಲಕ್ಷ ಉಳಿಸಬಹುದು.

ಕೇಂದ್ರೀಯ ಹಾಗೂ ರಾಜ್ಯ ಪೊಲೀಸ್ ಇಲಾಖೆ ಉದ್ಯೋಗಿಗಳು, ಮ್ಯಾಗ್ನೈಟ್‌ ಕಾರಿನ ಖರೀದಿ ಮೇಲೆ 'ಫ್ರೀಡಂ ಆಫರ್'ನ್ನು ಪಡೆಯಲು ದೇಶಾದ್ಯಂತ ಯಾವುದೇ ಅಧಿಕೃತ ನಿಸ್ಸಾನ್ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು. ಅವರಿಗೆ ಸ್ವಲ್ಪ ಕಡಿಮೆ ರಿಯಾಯಿತಿ ಲಭ್ಯವಾಗಲಿದ್ದು, ಎಕ್ಸ್ ಶೋರೂಂ ಮೇಲೆ ರೂ.34 ಸಾವಿರದಿಂದ ರೂ.1 ಲಕ್ಷವರೆಗೆ ಹಣವನ್ನು ಉಳಿತಾಯ ಮಾಡಬಹುದು.

Freedom Offer Nissan Magnite Car Get Upto Rs 1 53 Lakh Discount Details

ಈ ನಿಸ್ಸಾನ್‌ ಮ್ಯಾಗ್ನೈಟ್ ಎಸ್‌ಯುವಿಯು ಎಕ್ಸ್ಇ, ಎಕ್ಸ್ಎಲ್ ಹಾಗೂ ಎಕ್ಸ್‌ವಿ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ಬ್ಲೇಡ್ ಸಿಲ್ವರ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲಾಕ್, ಸ್ಯಾಂಡ್‌ಸ್ಟೋನ್ ಬ್ರೌನ್ ಒಳಗೊಂಡಂತೆ ಹಲವು ಬಣ್ಣಗಳನ್ನು ಪಡೆದಿದೆ. ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. ಪ್ರವಾಸದ ವೇಳೆಯಲ್ಲಿ ಹೆಚ್ಚಿನ ಲಗೇಜ್ 336 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.

ನೂತನ ನಿಸ್ಸಾನ್‌ ಮ್ಯಾಗ್ನೈಟ್ ಕಾರು 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಆಟೋಮೆಟಿಕ್ ಹಾಗೂ ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 17.40 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 40 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

Freedom Offer Nissan Magnite Car Get Upto Rs 1 53 Lakh Discount Details

ಈ ಕಾರು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಜೆಬಿಎಲ್ ಸ್ಪೀಕರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 12, 2024, 15:00 [IST]
English summary
Freedom offer nissan magnite car get upto rs 1 53 lakh discount details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+