7 ಜನ ಓಡಾಡಬಹುದಾದ ಫ್ಯಾಮಿಲಿ ಕಾರುಗಳಿವು.. ಗರಿಷ್ಠ ಮೈಲೇಜ್.. ಬೆಲೆ ಎಷ್ಟು?

ಪ್ರತಿಯೊಬ್ಬರಿಗೂ ಹೊಸ ಕಾರು ಖರೀದಿಸಬೇಕೆಂಬ ಕನಸಿರುತ್ತದೆ. ಆದಾಗ್ಯೂ ತಮ್ಮ ಕುಟುಂಬಕ್ಕೆ ಹ್ಯಾಚ್‌ಬ್ಯಾಕ್, ಎಸ್‌ಯುವಿ ಅಥವಾ ಎಂಪಿವಿಗಳಲ್ಲಿ ಯಾವುದು ಹೆಚ್ಚು ಸೂಕ್ತವಾಗಲಿದೆ ಎಂಬ ಗೊಂದಲವಿರುತ್ತದೆ. ನೀವು 7 ಜನ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದಾದ ಹೊಚ್ಚ ಹೊಸ ಕಾರನ್ನು ಹುಡುಕುತ್ತಿದ್ದರೆ.. ಮಾರುತಿ ಸುಜುಕಿ ಎರ್ಟಿಗಾ, ಇನ್ವಿಕ್ಟೊ, ರೆನಾಲ್ಟ್ ಟ್ರೈಬರ್ ಮತ್ತು ಮಹೀಂದ್ರಾ ಬೊಲೆರೊ ನಿಯೋಗಳು ಉತ್ತಮ ಆಯ್ಕೆಯಾಗಲಿವೆ. ಇಲ್ಲಿ ನೂತನ ಕಾರುಗಳ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಮೊದಲಿಗೆ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಕುರಿತಂತೆ ಮಾತನಾಡೋಣ. ಇದೊಂದು ಎಂಪಿವಿಯಾಗಿದ್ದು, ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Good Family Cars In India 7 Seater Maruti Suzuki Ertiga Invicto Renault Triber Mahindra Bolero Neo

ಈ ಎರ್ಟಿಗಾ ಕಾರಿನಲ್ಲಿ 7 ಮಂದಿ ಸಂಚರಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಪ್ಯಾಡಲ್ ಶಿಫ್ಟರ್‌ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 4 ಏರ್‌ಬ್ಯಾಗ್‌, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಹಾಗೂ ಹಿಲ್-ಹೋಲ್ಡ್ ಅನ್ನು ಪಡೆದಿದೆ.

ಮಾರುತಿ ಸುಜುಕಿ ಇನ್ವಿಕ್ಟೊ (Maruti Suzuki Invicto) ಬಗ್ಗೆ ಹೇಳುವುದಾದರೆ, ಈ ಎಂಪಿವಿ ರೂ.25.21 ಲಕ್ಷದಿಂದ ರೂ.28.92 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 7 ರಿಂದ 8 ಆಸನ ಆಯ್ಕೆಯಲ್ಲಿಯೂ ಲಭ್ಯವಿದ್ದು, 23 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Good Family Cars In India 7 Seater Maruti Suzuki Ertiga Invicto Renault Triber Mahindra Bolero Neo

ನೂತನ ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ರೆನಾಲ್ಟ್ ಟ್ರೈಬರ್ (Renault Triber) ಎಂಪಿವಿ ಕುರಿತಂತೆ ಮಾತನಾಡುವುದಾದರೆ, ಇದು ರೂ.6 ಲಕ್ಷದಿಂದ ರೂ.8.97 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7 ಆಸನ ವ್ಯವಸ್ಥೆಯನ್ನು ಪಡೆದಿದೆ.

Good Family Cars In India 7 Seater Maruti Suzuki Ertiga Invicto Renault Triber Mahindra Bolero Neo

ಈ ರೆನಾಲ್ಟ್ ಟ್ರೈಬರ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ 4 ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

ಮಹೀಂದ್ರಾ ಬೊಲೆರೊ ನಿಯೋ (Mahindra Bolero Neo) ಹೇಳುವುದಾದರೆ, ಈ ಎಸ್‌ಯುವಿ ರೂ.9.95 ಲಕ್ಷದಿಂದ ರೂ.12.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್‌ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 17.29 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Good Family Cars In India 7 Seater Maruti Suzuki Ertiga Invicto Renault Triber Mahindra Bolero Neo

ಹೊಚ್ಚ ಹೊಸ ಬೊಲೆರೊ ನಿಯೋದಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ಕೀಲೆಸ್ ಎಂಟ್ರಿಯಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ರಿವರ್ಸ್ ಅಸಿಸ್ಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, August 30, 2024, 20:53 [IST]
English summary
Good family cars in india 7 seater maruti suzuki ertiga invicto renault triber mahindra bolero neo
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+