ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು.. 5.32 ಲಕ್ಷ ಆರಂಭಿಕ ಬೆಲೆ, 7-ಸೀಟರ್, 26 ಕಿ.ಮೀ ಮೈಲೇಜ್!

ಭಾರತದಲ್ಲಿ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಕುಟುಂಬಕ್ಕಾಗಿ ಹೊಸ ಕಾರು ಖರೀದಿಸಬೇಕೆಂಬುದು ಹಲವರ ಕನಸು. ಆದಾಗ್ಯೂ ಹ್ಯಾಚ್‌ಬ್ಯಾಕ್, ಎಸ್‌ಯುವಿ ಮತ್ತು ಎಂಪಿವಿಗಳನ್ನೂ ಯಾವುದನ್ನು ಕೊಂಡುಕೊಳ್ಳಬೇಕು ಎಂಬುದರ ಬಗ್ಗೆಯೂ ಗೊಂದಲದಲ್ಲಿರುತ್ತಾರೆ. ನಿಮ್ಮ ಕುಟುಂಬಕ್ಕಾಗಿ ಹೊಸ ಕಾರನ್ನು ತೆಗೆದುಕೊಳ್ಳಲು ಆಯೋಚಿಸಿದ್ದೀರಾ.. ಹಾಗಾದರೆ ಕೈಗೆಟುಕುವ ದರದಲ್ಲಿ ಸಿಗುವ ಮಾರುತಿ ಸುಜುಕಿ ಇಕೋ (Maruti Suzuki Eeco) ಹಾಗೂ ರೆನಾಲ್ಟ್ ಟ್ರೈಬರ್ (Renault Triber) ಕಾರುಗಳು ಉತ್ತಮ ಆಯ್ಕೆಯಾಗಲಿವೆ. ಇಲ್ಲಿ ನೂತನ ಕಾರುಗಳ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ ಬಗ್ಗೆ ಮಾತನಾಡೋಣ. ಇದು ರೂ.5.32 ಲಕ್ಷದಿಂದ ರೂ.6.58 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯುತ್ತದೆ. 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19.71 ರಿಂದ 26.78 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Good Family Cars Maruti Suzuki Eeco Renault Triber Affordable Price High Mileage

ಈ ಇಕೋ ವ್ಯಾನ್ 5 ಅಥವಾ 7 ಆಸನ ವ್ಯವಸ್ಥೆಯಲ್ಲಿ ದೊಯುತ್ತದೆ. ವಾರಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 275 ರಿಂದ 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಹೊಚ್ಚ ಹೊಸ ಮಾರುತಿ ಸುಜುಕಿ ಇಕೋ ವ್ಯಾನ್, ಸೆಮಿ-ಡಿಜಿಟಲ್ ಸ್ಪೀಡೋಮೀಟರ್, ಮ್ಯಾನುವಲ್ ಎಸಿ ಮತ್ತು 12ವಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ಫ್ರಂಟ್ ಸೀಟ್‌ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

Good Family Cars Maruti Suzuki Eeco Renault Triber Affordable Price High Mileage

ರೆನಾಲ್ಟ್ ಟ್ರೈಬರ್ (Renault Triber) ಬಗ್ಗೆ ಹೇಳುವುದಾದರೆ, ಈ ಎಂಪಿವಿ ರೂ.6 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಸೇರಿದಂತೆ ವಿವಿಧ ರೂಪಾಂತರಗಳನ್ನು ಹೊಂದಿದೆ. ಐಸ್ ಕೂಲ್ ವೈಟ್, ಸೀಡರ್ ಬ್ರೌನ್, ಮೂನ್‌ಲೈಟ್ ಸಿಲ್ವರ್ ಮತ್ತು ಎಲೆಕ್ಟ್ರಿಕ್ ಬ್ಲೂ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.

ಈ ರೆನಾಲ್ಟ್ ಟ್ರೈಬರ್ ಎಂಪಿವಿ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದು 7 ಆಸನ ವ್ಯವಸ್ಥೆಯನ್ನು ಪಡೆದಿದೆ. 84 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ ರೆನಾಲ್ಟ್ ಟ್ರೈಬರ್ ಎಂಪಿವಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 4 ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 14, 2024, 15:00 [IST]
English summary
Good family cars maruti suzuki eeco renault triber affordable price high mileage
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+