ನಿಮ್ಮ ತುಂಬು ಕುಟುಂಬಕ್ಕೆ ಈ ಕಾರುಗಳು ಬೆಸ್ಟ್.. ಬಜೆಟ್ ಬೆಲೆ, ಸಖತ್ ಮೈಲೇಜ್.. 7-ಸೀಟರ್!
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕು ಎಂಬ ಬಹುದೊಡ್ಡ ಆಸೆಯಿರುತ್ತದೆ. ಆದರೆ, ಬಜೆಟ್ ಬೆಲೆಗೆ ತಮ್ಮ ಕುಟುಂಬಕ್ಕಾಗಿ ಯಾವ ಕಾರನ್ನು ತೆಗೆದುಕೊಂಡರೆ ಒಳಿತು ಎಂಬಿತ್ಯಾದಿ ಗೊಂದಲದಲ್ಲಿರುತ್ತಾರೆ. ಇಲ್ಲಿ ಅತ್ಯಂತ ಕಡಿಮೆ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಲಭ್ಯವಿರುವ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಎಕ್ಸ್ಎಲ್6 (XL6), ಇಕೋ ವ್ಯಾನ್ (Eeco Van), ರೆನಾಲ್ಟ್ ಟ್ರೈಬರ್ (Renault Triber) ಮತ್ತು ಮಹೀಂದ್ರಾ ಬೊಲೆರೊ ನಿಯೋ (Mahindra Bolero Neo) ಫ್ಯಾಮಿಲಿ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಮೊದಲಿಗೆ ಮಾರುತಿ ಸುಜುಕಿ ಎರ್ಟಿಗಾ ಎಂವಿಪಿ ಕುರಿತಂತೆ ಮಾತನಾಡುವುದಾದರೆ, ಈ ಕಾರು ರೂ.8.69 ಲಕ್ಷದಿಂದ ರೂ.13.03 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಈ ಎರ್ಟಿಗಾ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಪ್ಯಾಡಲ್ ಶಿಫ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 4 ಏರ್‌ಬ್ಯಾಗ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಹಾಗೂ ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಎಕ್ಸ್ಎಲ್6 ಕಾರು, ರೂ.11.61 ಲಕ್ಷದಿಂದ ರೂ.14.77 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 1.5-ಲೀಟರ್ ಪೆಟ್ರೋಲ್ /ಸಿಎನ್‌ಜಿ ಎಂಜಿನ್ ಪಡೆದಿದೆ. 20.27 ರಿಂದ 26.32 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್ಸ್ ಮತ್ತು ಆಟೋ ಎಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು 6 ಆಸನಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಇಕೋ ವ್ಯಾನ್ ಬಗ್ಗೆ ಹೇಳುವುದಾದರೆ, ಇದು ರೂ.5.32 ಲಕ್ಷದಿಂದ ರೂ.6.58 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19.71 ರಿಂದ 26.78 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸೆಮಿ-ಡಿಜಿಟಲ್ ಸ್ಪೀಡೋಮೀಟರ್, ಮ್ಯಾನುವಲ್ ಎಸಿ ಮತ್ತು 12ವಿ ಚಾರ್ಜಿಂಗ್ ಸಾಕೆಟ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. 5 ಅಥವಾ 7 ಆಸನ ವ್ಯವಸ್ಥೆಯಲ್ಲಿಯೂ ಲಭ್ಯವಿದೆ.
ರೆನಾಲ್ಟ್ ಟ್ರೈಬರ್ ಕುರಿತಂತೆ ಮಾತನಾಡುವುದಾದರೆ, ಈ ಎಂಪಿವಿ ರೂ.6 ಲಕ್ಷದಿಂದ ರೂ.8.97 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ ಸಹ 7 ಆಸನಗಳಿವೆ. 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಹೀಂದ್ರಾ ಬೊಲೆರೊ ನಿಯೋ ಕೂಡ ಜನಪ್ರಿಯ ಎಸ್‌ಯುವಿಯಾಗಿದೆ. ಇದು ರೂ.9.95 ಲಕ್ಷದಿಂದ ರೂ.12.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನ್ನು ಒಳಗೊಂಡಿದೆ. 17.29 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 7-ಜನರು ಓಡಾಟ ನಡೆಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications