ಮಧ್ಯಮ ವರ್ಗಕ್ಕೆ ಜಿಎಸ್‌ಟಿ ಬರೆ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗು ಹೊಡೆತ?
ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭಾರೀ ಡಿಮ್ಯಾಂಡ್ ಇದೆ. ಕಳೆದ ಹತ್ತು ವರ್ಷಗಳಲ್ಲಿ ಬಳಸಿದ ಕಾರು ಮಾರುಕಟ್ಟೆಯು ಹೆಮ್ಮರವಾಗಿ ಬೆಳೆದುನಿಂತಿದೆ. ಇದೀಗ ಸೆಕೆಂಡ್‌ಹ್ಯಾಂಡ್ ಕಾರು ಡೀಲರ್‌ಶಿಪ್‌ಗಳ ಮೂಲಕ ಕಾರು ಖರೀದಿ ಮಾಡುವವರಿಗೆ ಬಿಗ್ ಷಾಕ್ ಎದುರಾಗಿದೆ, ಜಿಎಸ್‌ಟಿಯನ್ನು ಹೆಚ್ಚಳ ಮಾಡಿ ಖರೀದಿದಾರರನ್ನು ಅಚ್ಚರಿಗೊಳಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳು (ಇವಿ) ಸೇರಿದಂತೆ ಬಳಸಿದ ಕಾರುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಈಗಿರುವ ಶೇ12 ರಿಂದ ಶೇ18 ಕ್ಕೆ ಹೆಚ್ಚಿಸಲು ಜಿಎಸ್‌ಟಿ ಕೌನ್ಸಿಲ್ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಈ ಪರಿಷ್ಕೃತ ತೆರಿಗೆ ದರವು ವ್ಯವಹಾರಗಳು ಅಥವಾ ವಿತರಕರ ಮೂಲಕ ಮಾಡಿದ ವಹಿವಾಟುಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದ್ದು, ಅವುಗಳನ್ನು ಪ್ರಮಾಣಿತ ಆಟೋಮೊಬೈಲ್ ತೆರಿಗೆ ದರಕ್ಕೆ ಅನುಗುಣವಾಗಿ ತರುಲಾಗುತ್ತದೆ. ಉಳಿದಂತೆ ಬಳಸಿದ ಕಾರುಗಳ ವೈಯಕ್ತಿಕ ಖರೀದಿದಾರರು ಮತ್ತು ಮಾರಾಟಗಾರರಿಗೆ ಅದೇ ಶೇ12 ರಷ್ಟು ಜಿಎಸ್‌ಟಿ ದರವಿರುತ್ತದೆ ಎಂಬುದನ್ನು ಗಮನಿಸಬೇಕು.

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲ್ಲಾ ಬಳಸಿದ ವಾಹನಗಳು (ಸೆಕೆಂಡ್ ಹ್ಯಾಂಡ್ ವಾಹನಗಳು) ಶೇ12 ರಷ್ಟು ಜಿಎಸ್‌ಟಿಯನ್ನು ಹೊಂದಿವೆ. ಇದರಲ್ಲಿ ಆಯಾ ವಿಭಾಗಗಳಿಗೆ ಅನುಗುಣವಾಗಿ ಜಿಎಸ್‌ಟಿಯನ್ನು ವಿಂಗಡಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಧಿಸಲಾಗುವ ತೆರಿಗೆ ಶೇಕಡಾ 12 ರಷ್ಟಿತ್ತು ಮತ್ತು ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 5 ರಷ್ಟು ಕಡಿಮೆ ದರವನ್ನು ಹೊಂದಿತ್ತು.
1,200 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಮತ್ತು 4,000 ಎಂಎಂ ಅಥವಾ ಅದಕ್ಕಿಂತ ಹೆಚ್ಚಿನ ಉದ್ದದ ಪೆಟ್ರೋಲ್ ವಾಹನಗಳು, 1,500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಮತ್ತು 4,000 ಎಂಎಂ ಉದ್ದದ ಡೀಸೆಲ್ ವಾಹನಗಳು ಮತ್ತು ಎಸ್‌ಯುವಿಗಳು 18 ರಷ್ಟು ಜಿಎಸ್‌ಟಿಯನ್ನು ಹೊಂದಿವೆ. ಇದರಲ್ಲಿ ಈಗ ಪರಿಷ್ಕರಣೆ ಮಾಡಿ ಎಲ್ಲದಕ್ಕೂ ಒಂದೇ ಜಿಎಸ್‌ಟಿ ತರಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ವಾಹನಗಳಿಗೆ ಏಕರೂಪದ ಶೇ18 ರಷ್ಟು ತೆರಿಗೆ ದರವನ್ನು ವಿಧಿಸಲು ನಿರ್ಧರಿಸಲಾಗಿದೆ. ಈ ತೆರಿಗೆ ವ್ಯವಸ್ಥೆಯ ಮೂಲಕ ಆದಾಯದ ಹರಿವನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಇದು ದೇಶದ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಕಾರು ಮಾಲೀಕರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ಆದರೂ ಕೌನ್ಸಿಲ್ ಚರ್ಚೆಗಳು ಮತ್ತು ನಿರ್ಧಾರದ ಪ್ರಕಾರ, ಹೊಸ ಸೇರ್ಪಡೆಯು ವ್ಯವಹಾರ ಮಾರಾಟ ಮತ್ತು ಖರೀದಿಗೆ ಮಾತ್ರ ಸೀಮಿತವಾಗಿದೆ. ಸರಳವಾಗಿ ಹೇಳುವುದಾದರೆ, ವೈಯಕ್ತಿವಾಗಿ ಬಳಸಿದ ವಾಹನಗಳನ್ನು ಮಾರಾಟ ಮಾಡುವ ಅಥವಾ ಖರೀದಿಸುವವರಿಗೆ ಇದರಿಂದ ಹೊಸದಾಗಿ ನಷ್ಟವೇನಿಲ್ಲ. ಆದ್ದರಿಂದ ಸದ್ಯಕ್ಕೆ, ವೈಯಕ್ತಿಕ ಖರೀದಿದಾರರು ಮತ್ತು ಮಾರಾಟಗಾರರು ವ್ಯಾಪಾರ ಘಟಕದಿಂದ ಖರೀದಿಸದ ಹೊರತು ಚಿಂತಿಸಬೇಕಾಗಿಲ್ಲ.

ಇತ್ತೀಚಿನ ನಿರ್ಧಾರವು ಬಳಸಿದ ವಾಹನ ಖರೀದಿಯ ಮಾರುಕಟ್ಟೆಯನ್ನು ನಿಧಾನಗೊಳಿಸಬಹುದು ಎಂದು ತಜ್ಞರು ನಂಬಿದ್ದಾರೆ. ಆದ್ದರಿಂದ, ಸವಕಳಿ ಪ್ರಯೋಜನಗಳನ್ನು ಅವಲಂಬಿಸಿರುವ ವ್ಯವಹಾರಗಳು ಹೆಚ್ಚಿನ ತೆರಿಗೆ ಪರಿಣಾಮಕ್ಕೆ ಹೊಂದಿಕೊಳ್ಳಲು ಹೊಸ ನೀತಿಗಳನ್ನು ರೂಪಿಸಬೇಕಾಗುತ್ತದೆ. ವಾಹನವನ್ನು ಖರೀದಿಸುವುದು, ದುರಸ್ತಿ ಮಾಡುವುದು ಮತ್ತು ನಿರ್ವಹಿಸುವುದು ನಂತರ ಅದನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೂ ಇದು ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications