ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಇಲ್ಲಿ ನೋಡಿ: ಸರ್ಕಾರದಿಂದ ಬಿಗ್ ಶಾಕ್!

ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಎಷ್ಟೋ ಮಂದಿ ಹೊಸ ಕಾರು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಬದಲೂ ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ಸಿಗುವ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುತ್ತಾರೆ. ಇದರಿಂದ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು (Used Cars) ಮಾರುಕಟ್ಟೆಯು ಭಾರೀ ಬೆಳವಣಿಗೆಯನ್ನು ಕಂಡಿದೆ. ಇದೀಗ ಸೆಕೆಂಡ್‌ಹ್ಯಾಂಡ್ ಕಾರು ಡೀಲರ್‌ಶಿಪ್‌ಗಳ ಮೂಲಕ ಕಾರು ಖರೀದಿ ಮಾಡುವವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ.

ಸರ್ಕಾರವು ಜಿಎಸ್‌ಟಿಯನ್ನು ಹೆಚ್ಚಳ ಮಾಡಿ ಖರೀದಿದಾರರನ್ನು ಅಚ್ಚರಿ ನೀಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳು (ಇವಿ) ಸೇರಿದಂತೆ ಬಳಸಿದ ಕಾರುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಈಗಿರುವ ಶೇ12 ರಿಂದ ಶೇ18 ಕ್ಕೆ ಹೆಚ್ಚಿಸಲು ಜಿಎಸ್‌ಟಿ ಕೌನ್ಸಿಲ್ ಅನುಮೋದನೆ ನೀಡಿದೆ. ಈ ಪರಿಷ್ಕೃತ ತೆರಿಗೆ ದರವು ವ್ಯವಹಾರಗಳು ಅಥವಾ ವಿತರಕರ ಮೂಲಕ ಮಾಡಿದ ವಹಿವಾಟುಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದೆ.

Used Cars

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ 21 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದ 55 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಎಸ್‌ಟಿ ತಿದ್ದುಪಡಿಗಳ ಕುರಿತು ಚರ್ಚಿಸಲಾಯಿತು. ಅಂದರೆ, ದೇಶದಲ್ಲಿ ವಿವಿಧ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾದ ಜಿಎಸ್ಟಿಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ಇದರಂತೆ ಕೆಲವು ಸರಕು ಮತ್ತು ಸೇವೆಗಳ ಮೇಲೆ ಜಿಎಸ್ಟಿಯನ್ನು ಕಡಿಮೆ ಮಾಡಲಾಗಿದೆ.

ಇನ್ನೂ ಉಳಿದಂತೆ ಕೆಲವು ಸರಕು ಮತ್ತು ಸೇವೆಗಳ ಮೇಲೆ ಜಿಎಸ್ಟಿ ಹೆಚ್ಚಿಸಲಾಗಿದೆ. ಅದರಂತೆ ಸೆಕೆಂಡ್ ಹ್ಯಾಂಡ್ ಕಾರನ್ನು ಬೇರೆಯವರಿಗೆ ಮಾರಾಟ ಮಾಡುವ ಜಿಎಸ್‌ಟಿಯನ್ನು 12% ರಿಂದ 18% ಕ್ಕೆ ಹೆಚ್ಚಿಸಲಾಗಿದೆ. 4 ಮೀಟರ್‌ಗಿಂತ ಹೆಚ್ಚಿನ ಉದ್ದದ ಉಪಯೋಗಿಸಿದ ಕಾರಿನ ಮಾರಾಟಕ್ಕೆ ಈಗಾಗಲೇ 18% GST ವಿಧಿಸಲಾಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಲು ನೋಂದಾಯಿಸಿದ ವಿತರಕರ ಮೇಲೆ ಈ ನಿರ್ಧಾರವು ನೇರವಾಗಿ ಪರಿಣಾಮ ಬೀರುತ್ತದೆ.

1200ಸಿಸಿ ವರೆಗಿನ ಎಂಜಿನ್ ಹೊಂದಿರುವ ವಾಹನಗಳನ್ನು ಮಾರಾಟ ಮಾಡುವಾಗ ಬದಲಾವಣೆ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ತಾನು ಬಳಸಿದ ವಾಹನವನ್ನು ನೇರವಾಗಿ ಮತ್ತೊಬ್ಬರಿಗೆ ಮಾರಾಟ ಮಾಡಿದಾಗ ತೆರಿಗೆ ಹೆಚ್ಚಳ ಅನ್ವಯವಾಗುವುದಿಲ್ಲ. ಈ ಜಿಎಸ್‌ಟಿ ಸುಧಾರಣೆಯು ಮುಖ್ಯವಾಗಿ ಡೀಲರ್‌ಶಿಪ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದೆ 1200 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಕಾರುಗಳಿಗೆ ಶೇ 18 ಹಾಗೂ ಶೇ 12ಕ್ಕಿಂತ ಕಡಿಮೆ ಇರುವ ಕಾರುಗಳಿಗೆ ತೆರಿಗೆ ವಿಧಿಸಲಾಗಿತ್ತು.

ಇನ್ನು ಮುಂದೆ 1200 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಮತ್ತು 4,000 ಎಂಎಂ ಅಥವಾ ಅದಕ್ಕಿಂತ ಹೆಚ್ಚಿನ ಉದ್ದದ ಪೆಟ್ರೋಲ್ ಎಂಜಿನ್ ಚಾಲಿತ ವಾಹನಗಳು, 1,500 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಮತ್ತು 4,000 ಎಂಎಂ ಅಥವಾ ಅದಕ್ಕಿಂತ ಹೆಚ್ಚಿನ ಉದ್ದದ ಡೀಸೆಲ್ ವಾಹನಗಳು, ಎಸ್‌ಯುವಿಗಳು 18 ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಪ್ರಮುಖ ಬ್ರಾಂಡ್‌ಗಳ ಸ್ಟ್ಯಾಂಡರ್ಡ್ ಸೆಕೆಂಡ್ ಹ್ಯಾಂಡ್ ಡೀಲರ್‌ಶಿಪ್‌ಗಳು ಮತ್ತು ಸ್ಪಿನ್ನಿ ಮತ್ತು ಕಾರ್ಸ್ 24 ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಆರ್‌ಟಿಒದಲ್ಲಿ ವಾಹನ ಮಾಲೀಕರ ಹೆಸರು ಮತ್ತು ವಿಮೆಯ ಬದಲಾವಣೆಯಂತಹ ದಾಖಲೆಗಳನ್ನು ಮಾಡುವವರು ಹೆಚ್ಚಿದ ಜಿಎಸ್‌ಟಿ ಮೊತ್ತವನ್ನು ಕಾರು ಮಾರಾಟಗಾರರಿಂದ ಸಂಗ್ರಹಿಸಬೇಕಾಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಉಪಯೋಗಿಸಿದ ಕಾರನ್ನು ಮಾರಾಟ ಮಾಡಲು ಬಯಸುವ ಜನರು ಇದರ ನಂತರ ಅಂತಹ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸಲು ಬಯಸುವುದಿಲ್ಲ.

ಇನ್ನು ಡೆಕ್ಕನ್ ಹೆರಾಲ್ಡ್ ವರದಿಯೊಂದು ಸಮೀಕ್ಷೆಯನ್ನು ಉಲ್ಲೇಖಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚು ಜನರು ತಮ್ಮ ಸ್ನೇಹಿತರ ವಲಯ, ಪರಿಚಯಸ್ಥರು ಅಥವಾ ವಾಹನ ದಲ್ಲಾಳಿಗಳ ಮೂಲಕ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತದೆ. ಪ್ರಸ್ತುತ ಅಂದಾಜಿನ ಪ್ರಕಾರ, 30 ಪ್ರತಿಶತದಷ್ಟು ಉಪಯೋಗಿಸಿದ ಕಾರು ಮಾರಾಟಗಾರರು ಸ್ಥಳೀಯ ಸ್ಥಳಗಳಲ್ಲಿ ಅಥವಾ ನೇರವಾಗಿ ಎರಡನೇ ವ್ಯಕ್ತಿಗೆಯಿಂದ ಖರೀದಿಸುತ್ತಾರೆ.

ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುವ ಹೆಚ್ಚು ಹೆಚ್ಚು ಜನರು ನೇರವಾಗಿ ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೆಚ್ಚಿನ ಖರೀದಿದಾರರು ಜನಪ್ರಿಯ ಜಾಹೀರಾತು ಸೈಟ್ OLX ಮೂಲಕ ಪಾವತಿ ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಸಮೀಕ್ಷೆಯ ಪ್ರಕಾರ, OLX ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲು ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ಸಿದ್ಧರಾಗುತ್ತಾರೆ.

ಇನ್ನು ಇದಲ್ಲದೇ ಶೇಕಡ 25ರಷ್ಟು ಜನರು ತಮ್ಮ ಹಳೆಯ ಕಾರನ್ನು ಡೀಲರ್‌ಶಿಪ್ ಶೋರೂಂಗಳಲ್ಲಿ ವಿನಿಮಯ ಮಾಡಿಕೊಂಡು ಹೊಸ ಕಾರನ್ನು ಪಡೆಯುತ್ತಾರೆ. ಜಿಎಸ್‌ಟಿ ಹೆಚ್ಚಳದಿಂದ ಶೋರೂಂಗಳಲ್ಲಿ ಉಪಯೋಗಿಸಿದ ಕಾರುಗಳ ವಿನಿಮಯ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಡೀಲರ್‌ಶಿಪ್‌ಗಳು ಬಳಸಿದ ಕಾರು ಮಾರಾಟದ ಮೇಲೆ ಜಿಎಸ್‌ಟಿ ವಿಧಿಸುಸಲಾಗುತ್ತದೆ. ಅವರು ಈ ಬಿಕ್ಕಟ್ಟನ್ನು ಹೇಗೆ ನಿವಾರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Article Published On: Tuesday, December 24, 2024, 13:32 [IST]
English summary
Gst council tax hike impact used cars details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+