ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ ರೀತಿಯದೇ ಬೇರೆ ಕಲ್ಲುಬಂಡೆ ಬೈಕ್‌ಗಳು‌ ಬೇಕಾ: ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳೆಂದರೆ ಭಾರತೀಯರಿಗೆ ಅದೊಂದು ರೀತಿಯ ಎಮೋಷನ್‌ ಎಂದೇ ಹೇಳಬಹುದು. ಹೀಗೆನ್ನಲು ಪ್ರಮುಖ ಕಾರಣವೇನೆಂದು ನೋಡಿದರೆ ಹಿಂದಿನ ಕಾಲದಲ್ಲಿ ಊರಿಗೋ, ಹಳ್ಳಿಗೋ ಒಂದೇ ಒಂದು ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಇರುತ್ತಿದ್ದವು. ಬಹುತೇಕರು ಆ ಸಮಯದಿಂದಲೇ ದೊಡ್ಡವರಾದ ಮೇಲೆ ನಾವೂ ಸಹ ಒಂದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಅನ್ನು ಕೊಳ್ಳಬೇಕು ಎಂಬ ಪ್ಲಾನ್‌ ಮಾಡುತ್ತಿದ್ದರು. ಅದೇ ರೀತಿ ಈ ಬೈಕ್‌ ಅನ್ನು ಭಾರತೀಯರು ನೆಚ್ಚಿಕೊಳ್ಳಲು ಇರುವ ಮತ್ತೊಂದು ಪ್ರಮುಖ ಕಾರಣವೆಂದರೆ ಇದರ ಬಿಲ್ಡ್‌ ಕ್ವಾಲಿಟಿ ಎಂದರೆ ತಪ್ಪಾಗಲಾರದು. ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳನ್ನು ಚೆನ್ನಾಗಿ ನೋಡಿಕೊಂಡರೆ ಎಷ್ಟೇ ವರ್ಷಗಳಾದರೂ ಕಲ್ಲುಬಂಡೆಯುಂತೆ ಇರುತ್ತದೆ.

ಇಂದಿನ ಈ ಲೇಖನದಲ್ಲಿ ನಾವು ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ನಂತೆ ಗಟ್ಟಿಮುಟ್ಟಾಗಿರುವ, ಕ್ಲಾಸಿಕ್‌ ಬದಲಿ ಆಯ್ಕೆಗಳು ಯಾವುದೆಂದು ನೋಡಲಿದ್ದೇವೆ. ಈ ಬೈಕ್‌ಗಳ ಕುರಿತಾಗಿ ಇನ್ನಷ್ಟು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ. ಹಾಗಾದರೆ ಈಗ ನಾವು ನೇರವಾಗಿ ವಿಷಯಕ್ಕೆ ಬರೋಣ.

Here Are The Complete List Of Bikes You Can Buy Instead Of Royal Enfield Classic 350

ಹೀರೋ ಮಾರ್ವಿಕ್‌: ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ ಬದಲಿಗೆ ಇರುವ ಮೊದಲ ಆಯ್ಕೆಯೆಂದರೆ ಅದು ಹೀರೋ ಮಾರ್ವಿಕ್‌. ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ (Hero) ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಮಾವ್ರಿಕ್ 440 (Mavrick 440) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿತ್ತು. ಇದರ ಎಂಟ್ರಿ ಲೆವೆಲ್ ವೇರಿಯಂಟ್ ರೂ.1.99 ಲಕ್ಷ, ಟಾಪ್ ಎಂಡ್ ವೇರಿಯಂಟ್ ರೂ.2.24 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಈ ಬೈಕ್ 440 ಸಿಸಿ ಆಯಿಲ್/ ಏರ್ - ಕೋಲ್ಡ್ ಎಂಜಿನ್ ಹೊಂದಿದ್ದು, 26 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 37 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

Here Are The Complete List Of Bikes You Can Buy Instead Of Royal Enfield Classic 350

ಹೋಂಡಾ ಹೈನೆಸ್‌ ಸಿವಿ 350: ಹೋಂಡಾ ಕಂಪನಿಯ ಈ ಬೈಕ್‌ ರಾಯಲ್‌ ಎನ್‌ಫೀಲ್ಡ್ ಕ್ಲಾಸಿಕ್‌ನ (Royal Enfield Classic 350) ಪ್ರಭಲ ಎದುರಾಳಿ ಎಂದರೆ ತಪ್ಪಾಗಲಾರದು. ಹೊಸ ಹೋಂಡಾ CB350 ಬೈಕ್ CB350 DLX ರೂಪಾಂತರದ ಬೆಲೆಯು ರೂ. 2 ಲಕ್ಷವಾದರೆ, CB350 DLX Pro ರೂಪಾಂತರದ ಬೆಲೆಯು ರೂ.2.18 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಹೋಂಡಾ CB350 ಬೈಕಿನಲ್ಲಿ 348.36cc, ಏರ್-ಕೂಲ್ಡ್, 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್ BSVI OBD2-B ಕಂಪ್ಲೈಂಟ್ PGM-FI ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5,500rpm ನಲ್ಲಿ 20.7hp ಮತ್ತು 3,000rpm ನಲ್ಲಿ 29.4Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

Here Are The Complete List Of Bikes You Can Buy Instead Of Royal Enfield Classic 350

ರಾಯಲ್‌ ಎನ್‌ಫೀಲ್ಡ್‌ ಮೀಟಿಯರ್‌ 350: ರಾಯಲ್‌ ಎನ್‌ಫೀಲ್ಡ್‌ ಮೀಟಿಯರ್‌ 350 ಬೈಕ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಬೇಸ್ ಮಾಡೆಲ್ ಬೆಲೆಯು ರೂ.93 ಲಕ್ಷದಿಂದ ಪ್ರಾರಂಭವಾದರೆ, ಟಾಪ್-ಎಂಡ್ ಮಾಡೆಲ್‌ ಬೆಲೆಯು ರೂ.2.25 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಕೂಡ ಮಾರಾಟವಾಗುತ್ತಿದೆ.

ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ.

ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ 350: ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬೈಕ್‌ನ ಅದೇ ಸೆಗ್ಮೆಂಟ್‌ನಲ್ಲಿರುವ ಮತ್ತೊಂದು ಬೈಕ್‌ ಇದು. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಯಲ್ಲಿ ಕಂಪನಿಯು ಹೊಸ 349cc, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 20.2bhp, 27Nm ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಎಂಜಿನ್ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಸಹ ಅನುಸರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 29, 2024, 18:53 [IST]
English summary
Here are the complete list of bikes you can buy instead of royal enfield classic 350
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+