ಬಿಡುಗಡೆಗೂ ಮುನ್ನ Honda Amaze ಫೇಸ್‌ಲಿಫ್ಟ್ ಬೆಲೆ ಸೋರಿಕೆ: ಇಷ್ಟು ಕಡಿಮೆ ಬೆಲೆಗೆ ರಾಶಿ ರಾಶಿ ಫೀಚರ್‌ಗಳು!
ಭಾರತದಲ್ಲಿ ಸದ್ಯಕ್ಕೆ ಹೋಂಡಾ ಕಂಪನಿ ಮಾರಾಟ ಮಾಡುತ್ತಿರುವ ಕಾರುಗಳಲ್ಲಿ ಅತೀ ಕಡಿಮೆ ಬೆಲೆಯ ಕಾರಾದ ಹೋಂಡಾ ಅಮೇಜ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇನ್ನೇನು ಕೆಲವೇ ತಿಂಗಳುಗಳ ಅಂತರದಲ್ಲಿ ಭಾರತದಲ್ಲಿ ಅಮೇಜ್ ಫೇಸ್‌ಲಿಫ್ಟ್ ಮಾದರಿ ಬಿಡುಗಡೆಯಾಗಲಿದ್ದು ಈಗಾಗಲೇ ಈ ಕಾರಿನ ಹಲವು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.
ಇದೀಗ ಈ ಕಾರಿನ ಬೆಲೆಯೂ ಸಹ ಸೋರಿಕೆಯಾಗಿದ್ದು, ಫೇಸ್‌ಲಿಫ್ಟ್ ಮಾದರಿಯ ಬೆಲೆ ಕಂಡು ಹಲವರು ಹುಬ್ಬೇರಿಸಿದ್ದಾರೆ. ಮಾಹಿತಿಗಳ ಪ್ರಕಾರ ಹೊಸ ಹೋಂಡಾ ಅಮೇಜ್‌ನ ಫೇಸ್‌ಲಿಫ್ಟ್ ದರ ಸುಮಾರು 7.93 ಲಕ್ಷ ರೂಗಳಿಂದ ಆರಂಭವಾಗಲಿದೆ. ಬಜೆಟ್‌ನಲ್ಲಿ ಸೆಡಾನ್ ಕಾರು ಬೇಕು, ಒಂದೊಳ್ಳೆ ಕಂಪನಿಯ ಕಾರೂ ಆಗಿರಬೇಕು ಎಂದುಕೊಳ್ಳುವವರಿಗೆ ಹೋಂಡಾ ಅಮೇಜ್ ಹೇಳಿ ಮಾಡಿಸಿದ ಕಾರು ಎಂಬುದು ಎಲ್ಲರ ಅಭಿಪ್ರಾಯ.

ಈ ಕಾರಿನಲ್ಲಿ ಅತ್ಯಾಧುನಿಕ ಆಫೀಚರ್‌ಗಳು ಸಹ ಸಿಗಲಿದ್ದು, ಇದರಲ್ಲಿ ಪ್ರಮುಖವಾಗಿ 7.25 ಇಂಚ್‌ನ ಇನ್ಪೋಟೈನ್‌ಮೆಂಟ್ ಡಿಸ್ಪ್ಲೇ ಇರಲಿದೆ. ಇದರ ಜೊತೆಗೆ 360 ಡಿಗ್ರೀ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಕ್ಲೈಮೇಟ್ ಕಂಟ್ರೋಲ್ ಹೀಗೆ ಹತ್ತು ಹಲವು ಫೀಚರ್‌ಗಳು ಈ ಕಾರಿನಲ್ಲಿ ಸಿಗಲಿದೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹೋಂಡಾ ಅಮೇಜ್‌ನ ಡಿಸೈನ್‌ಗಳನ್ನು ನೋಡುವುದಾದರೆ, ಈ ಕಾರಿನಲ್ಲಿ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಒಆರ್‌ವಿಎಂಗಳನ್ನು ನೀಡಲಾಗಿದೆ. ಈ ಮಿರರ್'ಗಳು ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು ಫೋಲ್ಡ್ ಮಾಡಬಹುದು. ಕ್ರೋಮ್ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು ಈ ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.

ಇನ್ನು ಈ ಕಾರಿನ ಹಿಂಭಾಗದಲ್ಲಿ ಸಿ ಶೇಪಿನಲ್ಲಿರುವ ಎಲ್ಇಡಿ ಟೇಲ್ ಲ್ಯಾಂಪ್, ಸಣ್ಣ ಬೂಟ್ ಲಿಪ್ ನೀಡಲಾಗಿದೆ. ರೇರ್ ಬಂಪರ್‌ನ ಕೆಳಭಾಗದಲ್ಲಿರುವ ಕ್ರೋಮ್ ಸ್ಟ್ರಿಪ್ ಈ ಕಾರಿನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಈ ಕಾರಿನ ಸೀಟುಗಳು, ಡೋರ್ ಹಾಗೂ ಡ್ಯಾಶ್ ಬೋರ್ಡ್ ಕೆಳಗಿನ ಭಾಗಗಳು ಬೀಜ್ ಬಣ್ಣವನ್ನು ಹೊಂದಿವೆ. ಇವುಗಳ ಮೇಲಿನ ಭಾಗ ಹಾಗೂ ಸೆಂಟರ್ ಕನ್ಸೋಲ್ ಕಪ್ಪು ಬಣ್ಣವನ್ನು ಹೊಂದಿವೆ.
ಈ ಕಾರಿನ ಎಂಜಿನ್ ನೋಡುವುದಾದೆ, ಟ್ರೋಲ್ ಮಾದರಿಯು 88 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರು ಇಕೋ ಲೈಟ್ ನಲ್ಲಿ ಸುಮಾರು 85 ಕಿ.ಮೀಗಳವರೆಗಿನ ವೇಗದಲ್ಲಿ ಚಲಿಸುತ್ತದೆ. ಇದರಿಂದ ಗರಿಷ್ಠ ಇಂಧನ ದಕ್ಷತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಎಸ್ ಮೋಡ್‌ನಲ್ಲಿ ಕಾರು ದೀರ್ಘಾವಧಿಯವರೆಗೆ ಗೇರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಥ್ರೊಟಲ್ ರೆಸ್ಪಾನ್ಸ್ ಗಮನಾರ್ಹವಾದ ಅಂತರದಿಂದ ತೀಕ್ಷ್ಣವಾಗುತ್ತದೆ.
Honda ಕಂಪನಿಯು 2013 ರಲ್ಲಿ ಮೊದಲ ಬಾರಿಗೆ ತನ್ನ Amaze ಕಾರ್ ಅನ್ನು ಬಿಡುಗಡೆಗೊಳಿಸಿತು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Dzire, Ford Aspire ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು. ಹಲವಾರು ಫೀಚರ್ ಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








