ಕ್ರ್ಯಾಶ್‌ಟೆಸ್ಟ್‌ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮಾರಾಟ ಮಾಡುತ್ತಿರುವ ಎರಡು ಸೆಡಾನ್ ಮಾದರಿಯ ಕಾರುಗಳಲ್ಲಿ ಹೋಂಡಾ ಅಮೇಜ್ ಸಹ ಒಂದು. ಕಡಿಮೆ ಬೆಲೆಗೆ ಸೆಡಾನ್ ಕಾರು ಬೇಕು ಎಂದುಕೊಳ್ಳುವವರ ನೆಚ್ಚಿನ ಆಯ್ಕೆಯೂ ಹೌದು ಈ ಹೋಂಡಾ ಅಮೇಜ್. ಇದೀಗ ಈ ಕಾರು ಪ್ರೀಯರಿಗೆ ಅಷ್ಟೊಂದು ಹಿತಕರವಲ್ಲದ ಸುದ್ದಿಯೊಂದು ಹೊರಬಿದ್ದಿದೆ.
ಕ್ರ್ಯಾಶ್ ಟೆಸ್ಟ್ ಎನ್ನುವುದು ಎಷ್ಟೊಂದು ಪ್ರಮುಖವಾದ ವಿಚಾರ ಎಂಬುದು ಎಲ್ಲರಿಗೂ ತಿಳಿದಿದೆ. ಒಂದು ಕಾರು ಪ್ರಯಾಣಿಕರಿಗೆ ಎಷ್ಟು ಸುರಕ್ಷಿತ ಎಂಬುದನ್ನು ಕ್ರ್ಯಾಶ್‌ಟೆಸ್ಟ್ ಮೂಲಕ ಅಳೆಯಲಾಗುತ್ತದೆ. ನಮ್ಮ ನಡುವೆ ಹಲವು ಕಾರು ಕಂಪನಿಗಳು ತಮ್ಮ ಕಾರುಗಳನ್ನು ಬಲಿಷ್ಟವಾಗಿ ನಿರ್ಮಿಸಿ 5 ಸ್ಟಾರ್ ರೇಟಿಂಗ್ ಅನ್ನು ಪಡೆಯುತ್ತವೆ. ಆದರೆ ಇದೀಗ ಬಂದ ವರದಿಯ ಪ್ರಕಾರ ಗ್ಲೋಬಲ್ ಕ್ರಾಶ್ ಟೆಸ್ಟ್‌ನಲ್ಲಿ 5 ಅಂಕಗಳಲ್ಲಿ ಕೇವಲ 2 ಅಂಕಗಳನ್ನು ಪಡೆದಿದೆ.

ಅದರಲ್ಲೂ ಕಾರಿನಲ್ಲಿ ಚೈಲ್ಡ್ ಒಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ ಒಂದೂ ಅಂಕವನ್ನು ಈ ಹೋಂಡಾ ಅಮೇಜ್ ಗಳಿಸಿಲ್ಲ ಎಂದು ತಿಳಿದು ಬಂದಿದೆ. ಈ ಕಾರಣದಿಂದ ಹೋಂಡಾ ಅಮೇಜ್ ಕಾರನ್ನು ಸುರಕ್ಷತೆ ಇಷ್ಟಪಡುವವರು ಕೊಳ್ಳುವುದು ಎಷ್ಟು ಸರಿ ಎಂಬುದು ಹಲವರ ಯಕ್ಷ ಪ್ರಶ್ನೆಯಾಗಿದೆ ಎನ್ನಲಾಗುತ್ತಿದೆ.
ಇನ್ನು ಮಾಹಿತಿಗಳ ಪ್ರಕಾರ, ಈ ವರ್ಷದ ದೀಪಾವಳಿ ಸಮಯದಲ್ಲಿ ಹೋಂಡಾ, ತನ್ನ ಅಮೇಜ್ (Honda Amaze) ಕಾರಿನ ಹೊಸ ಮಾದರಿಯನ್ನು ಭಾರತದಲ್ಲಿ ಲಾಂಚ್ ಮಾಡಲಿದ್ದು ಈ ಹಿನ್ನಲೆಯಲ್ಲಿ ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಅಮೇಜ್‌ನ ವೇರಿಯಂಟ್ ಅನ್ನು ಒಂದೊಂದಾಗೇ ಕಡಿತಗೊಳಿಸುತ್ತಿದ್ದು, ಇದೀಗ ಅಮೇಜ್ ಕೇವಲ ಎರಡು ವೇರಿಯಂಟ್‌ನಲ್ಲಿ ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.

ಮಾತ್ರವಲ್ಲದೇ, ಹೋಂಡಾ ಇನ್ನು ಮುಂದೆ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್ ಕಾರು ಮಾದರಿಯ ಎಸ್ ಮತ್ತು ವಿಎಕ್ಸ್ ವೇರಿಯಂಟ್‌ಗಳ್ನು ಮಾತ್ರ ಮಾರಾಟ ಮಾಡಲಿದೆ. ಈ ಎರಡೂ ವೇರಿಯಂಟ್‌ಗಳಿಗೆ ಸುಮಾರು 5,500 ರೂಗಳಷ್ಟು ಹೆಚ್ಚಾಗಿದ್ದು, ದೀಪಾವಳಿಯಲ್ಲಿ ಹೊಸ ಅಮೇಜ್ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಹೋಂಡಾ ಈ ನಡೆಗೆ ಮುಂದಾಗಿದೆ.
Honda ಕಂಪನಿಯು 2013 ರಲ್ಲಿ ಮೊದಲ ಬಾರಿಗೆ ತನ್ನ Amaze ಕಾರ್ ಅನ್ನು ಬಿಡುಗಡೆಗೊಳಿಸಿತು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Dzire, Ford Aspire ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು. ಹಲವಾರು ಫೀಚರ್ ಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.

ಈ ಕಾರಿನ ಎಂಜಿನ್ ನೋಡುವುದಾದೆ, ಟ್ರೋಲ್ ಮಾದರಿಯು 88 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು ಇಕೋ ಲೈಟ್ ನಲ್ಲಿ ಸುಮಾರು 85 ಕಿ.ಮೀಗಳವರೆಗಿನ ವೇಗದಲ್ಲಿ ಚಲಿಸುತ್ತದೆ. ಇದರಿಂದ ಗರಿಷ್ಠ ಇಂಧನ ದಕ್ಷತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಎಸ್ ಮೋಡ್‌ನಲ್ಲಿ ಕಾರು ದೀರ್ಘಾವಧಿಯವರೆಗೆ ಗೇರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಥ್ರೊಟಲ್ ರೆಸ್ಪಾನ್ಸ್ ಗಮನಾರ್ಹವಾದ ಅಂತರದಿಂದ ತೀಕ್ಷ್ಣವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








