ಈ ಸ್ವಿಫ್ಟ್ ಡಿಸೈರ್‌ನ ಪ್ರತಿಸ್ಪರ್ಧಿಗೆ ಭಾರೀ ಆಫರ್: ಮನೆಗೆ ತನ್ನಿ ಕಡಿಮೆ ಬೆಲೆಗೆ ಪ್ರೀಮಿಯಂ ಸೆಡಾನ್!
ಕಡಿಮೆ ಬೆಲೆಗೆ ಒಳ್ಳೆಯ ಕಂಪನಿಯಿಂದ ಒಂದು ಸೆಡಾನ್ ಖರೀದಿ ಮಾಡಬೇಕು ಎಂಬವರಿಗೆ ಹೋಂಡಾ ಕಂಪನಿಯ ಅಮೇಜ್ ಒಂದು ಅತ್ಯುತ್ತಮ ಆಯ್ಕೆ. ಭಾರತದಲ್ಲಿ ಹೋಂಡಾ ಕೇವಲ ಮೂರೇ ಮೂರು ಕಾರು ಮಾದರಿಯನ್ನು ಪ್ರಸ್ತುತವಾಗಿ ಮಾರಾಟ ಮಾಡುತ್ತಿದೆಯಾದರೂ, ಅದರಲ್ಲಿ ಅತೀ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾದ ಕಾರೆಂದರೆ ಅದು ಅಮೇಜ್. ಇನ್ನುಳಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಮಾರಾಟವಾಗುತ್ತಿದ್ದು ಈ ಎರಡೂ ಕಾರು ಮಾದರಿಗಳು ಅಮೇಜ್ ಗಿಂತ ಕೊಂಚ ದುಬಾರಿಯಾಗಿದೆ. ಇದೇ ಕಂಪನಿಯ ಮತ್ತೊಂದು ಸೆಡಾನ್ ಆಗಿರುವ ಸಿಟಿ ಸಹ ಸಾಕಷ್ಟು ಪ್ರಸಿದ್ದಿ ಹೊಂದಿದೆ.
ಇದೀಗ ಹೋಂಡಾ ಅಮೇಜ್ ಅನ್ನು ಭಾರತದಲ್ಲಿ ಖರೀದಿಸುವವರಿಗೆ ಕಂಪನಿ ಭರ್ಜರಿ ಆಫರ್ ನೀಡುತ್ತಿದೆ. ಹೌದು, ಹೋಂಡಾ ಅಮೇಜ್‌ನ ಇ (E) ವೇರಿಯಂಟ್‌ಗೆ ಕಂಪನಿ ಇದೀಗ 20 ಸಾವಿರ ರೂಗಳಷ್ಟು ಕಡಿತಗೊಳಿಸಿದ್ದು, ಹೊಸ ಅಮೇಜ್ ಕೊಳ್ಳುವವರಿಗೆ ಇದೊಂದು ಉತ್ತಮ ಆಯ್ಕೆಯಾಗಬಲ್ಲದು. ಇನ್ನು ಈ ಕಾರಿನ ಮತ್ತೊಂದು ವೇರಿಯಂಟ್ ಆದ ಎಸ್ ಗೆ ಸುಮಾರು 36 ಸಾವಿರ ರೂಗಳವರೆಗೆ ಆಪರ್ ಸಿಗುತ್ತಿದೆ.

Honda ಕಂಪನಿಯು 2013 ರಲ್ಲಿ ಮೊದಲ ಬಾರಿಗೆ ತನ್ನ Amaze ಕಾರ್ ಅನ್ನು ಬಿಡುಗಡೆಗೊಳಿಸಿತು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Dzire, Ford Aspire ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು. ಹಲವಾರು ಫೀಚರ್ ಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.
ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹೋಂಡಾ ಅಮೇಜ್‌ನ (Honda Amaze) ಡಿಸೈನ್‌ಗಳನ್ನು ನೋಡುವುದಾದರೆ, ಈ ಕಾರಿನಲ್ಲಿ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಒಆರ್‌ವಿಎಂಗಳನ್ನು ನೀಡಲಾಗಿದೆ. ಈ ಮಿರರ್'ಗಳು ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು ಫೋಲ್ಡ್ ಮಾಡಬಹುದು. ಕ್ರೋಮ್ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು ಈ ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.

ಇನ್ನು ಈ ಕಾರಿನ ಹಿಂಭಾಗದಲ್ಲಿ ಸಿ ಶೇಪಿನಲ್ಲಿರುವ ಎಲ್ಇಡಿ ಟೇಲ್ ಲ್ಯಾಂಪ್, ಸಣ್ಣ ಬೂಟ್ ಲಿಪ್ ನೀಡಲಾಗಿದೆ. ರೇರ್ ಬಂಪರ್‌ನ ಕೆಳಭಾಗದಲ್ಲಿರುವ ಕ್ರೋಮ್ ಸ್ಟ್ರಿಪ್ ಈ ಕಾರಿನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಈ ಕಾರಿನ ಸೀಟುಗಳು, ಡೋರ್ ಹಾಗೂ ಡ್ಯಾಶ್ ಬೋರ್ಡ್ ಕೆಳಗಿನ ಭಾಗಗಳು ಬೀಜ್ ಬಣ್ಣವನ್ನು ಹೊಂದಿವೆ. ಇವುಗಳ ಮೇಲಿನ ಭಾಗ ಹಾಗೂ ಸೆಂಟರ್ ಕನ್ಸೋಲ್ ಕಪ್ಪು ಬಣ್ಣವನ್ನು ಹೊಂದಿವೆ.
ಈ ಕಾರಿನ ಎಂಜಿನ್ ನೋಡುವುದಾದೆ, ಮಾದರಿಯು 88 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು ಇಕೋ ಲೈಟ್ ನಲ್ಲಿ ಸುಮಾರು 85 ಕಿ.ಮೀಗಳವರೆಗಿನ ವೇಗದಲ್ಲಿ ಚಲಿಸುತ್ತದೆ. ಇದರಿಂದ ಗರಿಷ್ಠ ಇಂಧನ ದಕ್ಷತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಎಸ್ ಮೋಡ್‌ನಲ್ಲಿ ಕಾರು ದೀರ್ಘಾವಧಿಯವರೆಗೆ ಗೇರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಥ್ರೊಟಲ್ ರೆಸ್ಪಾನ್ಸ್ ಗಮನಾರ್ಹವಾದ ಅಂತರದಿಂದ ತೀಕ್ಷ್ಣವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








