ಹೊಸ ಹೋಂಡಾ ಕಾರಿಗೆ ಫುಲ್ ಡಿಮ್ಯಾಂಡ್! ಅಮೇಜ್ ಆನ್‌ರೋಡ್ ಬೆಲೆಯೆಷ್ಟು?
ಹೋಂಡಾ (Honda) ಕಂಪನಿಯು ಇತ್ತೀಚೆಗೆ ಮೂರನೇ ತಲೆಮಾರಿನ ಹೋಂಡಾ ಅಮೇಜ್ (Honda amaze) ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. V, VX, ZX ಎಂಬ ಮೂರು ವೇರಿಯೆಂಟ್‌ಗಳಲ್ಲಿ ಸಿಗುವ ಈ ಕಾರಿನ ಬೆಲೆಯು 7.99 ಲಕ್ಷ ರೂ.(ಎಕ್ಸ್ ಶೋರೂಂ) ಗಳಿಂದ ಪ್ರಾರಂಭವಾಗಿ 10.89 ಲಕ್ಷ ರೂ.(ಎಕ್ಸ್ ಶೋರೂಂ)ಗಳವರೆಗೆ ಹೋಗುತ್ತದೆ. ಹೊಸ ಅಮೇಜ್ ಕಾರು ಮಾರುತಿ ಸುಜುಕಿ ಡಿಜೈರ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಲೇಖನದಲ್ಲಿ, ಭಾರತದ ಟಾಪ್ 10 ನಗರಗಳಲ್ಲಿ ಹೊಸ ಹೋಂಡಾ ಅಮೇಜ್‌ನ ಆನ್-ರೋಡ್ ಬೆಲೆಗಳನ್ನು ನೋಡೋಣ.
ಹೋಂಡಾ ಅಮೇಜ್ ಟಾಪ್ ಆಫ್ ಲೈನ್ ವೇರಿಯೆಂಟ್ ಆನ್‌ರೋಡ್ ಬೆಲೆಯು ಬೆಂಗಳೂರಿನಲ್ಲಿ ರೂ.13.4 ಲಕ್ಷಗಳಾಗಿದೆ. ಮುಂಬೈನಲ್ಲಿ 13 ಲಕ್ಷ ರೂ., ಚೆನ್ನೈನಲ್ಲಿ 13.5 ಲಕ್ಷ ರೂ., ದೆಹಲಿಯಲ್ಲಿ 12.6 ಲಕ್ಷ ರೂ., ಲಕ್ನೋದಲ್ಲಿ 12.65 ಲಕ್ಷ ರೂ., ಜೈಪುರದಲ್ಲಿ 12.7 ಲಕ್ಷ ರೂ., ಹೈದರಾಬಾದ್‌ನಲ್ಲಿ 13.4 ಲಕ್ಷ ರೂ., ಕೊಲ್ಕತ್ತಾದಲ್ಲಿ 12.2 ಲಕ್ಷ ರೂ., ಅಹಮದಾಬಾದ್‌ನಲ್ಲಿ 12.2 ಲಕ್ಷ ರೂ. ಬೆಲೆಯಿದೆ.

ಆಯಾ ನಗರಗಳಲ್ಲಿನ ಆಯ್ದ ಡೀಲರ್‌ಗಳಿಂದ ಮಾತ್ರ ಈ ಬೆಲೆಗಳನ್ನು ಸಂಗ್ರಹಿಸಲಾಗಿದೆ. ಇತರ ಡೀಲರ್‌ಗಳಲ್ಲಿ ಬೆಲೆಗಳು ಸ್ವಲ್ಪ ಬದಲಾಗಬಹುದು ಎಂಬುದನ್ನು ಗಮನಿಸಬೇಕು. ಎಲ್‌ಇಡಿ ಹೆಡ್‌ಲೈಟ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ಬಾನೆಟ್‌ನಾದ್ಯಂತ ಗ್ರಿಲ್ ಮೇಲಿನ ಕ್ರೋಮ್ ಸ್ಟ್ರಿಪ್‌ನೊಂದಿಗೆ ಆಕರ್ಷಕವಾಗಿ ಡಿಸೈನ ಮಾಡಲಾಗಿದೆ. ಒಟ್ಟಾರೆ ಹೋಂಡಾ ಎಲಿವೇಟ್ ಮತ್ತು ಸಿಟಿ ಕಾರಿನ ಮಿಶ್ರಿತ ವಿನ್ಯಾಸವನ್ನು ಹೊಂದಿದೆ.
ಹೊಸ ಹೋಂಡಾ ಅಮೇಜ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, 1.2 - ಲೀಟರ್, 4 - ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 90 ಬಿಹೆಚ್ ಪವರ್ ಹಾಗೂ 110 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.

ಮೈಲೇಜ್ ವಿಷಯಕ್ಕೆ ಬಂದರೆ, ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯಲ್ಲಿ 19.46 ಕಿ.ಮೀ ಮೈಲೇಜ್ ಮತ್ತು 5 - ಸ್ಪೀಡ್ ಎಂಟಿ ಆಯ್ಕೆಯಲ್ಲಿ 18.65 ಕಿ.ಮೀ ಮೈಲೇಜ್ ನೀಡುವುದಾಗಿ ಹೋಂಡಾ ಕಂಪನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ಆಗಿ ಹೋಂಡಾ ಕಂಪನಿಯು 3 ವರ್ಷಗಳು / ಅನಿಯಮಿತ ಕಿ.ಮೀ ವಾರಂಟಿಯನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದೆ.
ಹೊಸ ಹೋಂಡಾ ಅಮೇಜ್ ಕಾರಿನ ಫೀಚರ್ಸ್ ವಿಷಯಕ್ಕೆ ಬಂದರೆ, ಒಟ್ಟಾರೆ ಒಳಾಂಗಣ ವಿನ್ಯಾಸವು ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಹೋಲುತ್ತದೆ. ಆಪಲ್ ಕಾರ್ಪ್ಲೇ / ಆಂಡ್ರಾಯ್ಡ್ ಆಟೋ ಜೊತೆಗೆ ಈ ಸೆಡಾನ್ ಕಾರಿನಲ್ಲಿ ಡಿಜಿಟಲ್ ಕ್ಲಸ್ಟರ್ ನೊಂದಿಗೆ 10.25 - ಇಂಚಿನ ಫ್ರೀ -ಸ್ಟ್ಯಾಂಡಿಂಗ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಹಿಂಭಾಗದ ಎಸಿ ವೆಂಟ್ ಗಳು, 460 ಲೀಟರ್ ಬೂಟ್ ಸ್ಪೇಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್ ಲೆಸ್ ಚಾರ್ಜರ್, ರಿಮೋಟ್ ಸ್ಟಾರ್ಟ್ ವಿತ್ ಎಸಿ ಕಂಟ್ರೋಲ್, ಆರು ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ ಮತ್ತು ಸೆನ್ಸಾರ್ ಆಧಾರಿತ ಎಡಿಎಎಸ್ ಸಿಸ್ಟಮ್ ಅನ್ನು ಹೊಂದಿದೆ. ಜೊತೆಗೆ ಹೋಂಡಾ ಕನೆಕ್ಟೆಡ್ ಕಾರ್ ಟೆಕ್ 5 ವರ್ಷಗಳ ಉಚಿತ ಚಂದಾದಾರಿಕೆ ಕೂಡ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








