ಕಡಿಮೆ ಬೆಲೆಗೆ ಅದ್ಭುತ ಕಾರನ್ನು ಪರಿಚಯಿಸಿದರೂ ಹೋಂಡಾ ಮಾರಾಟದಲ್ಲಿ ಕುಸಿತ: ಕಾರಣವೇನು?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Cars India) ತನ್ನ 2024ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿ ಪ್ರಕಾರ, ಹೋಂಡಾ ಕಂಪನಿಯು ಕಳೆದ ತಿಂಗಳಿನಲ್ಲಿ 10,726 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಭಾರತದಲ್ಲಿ ಮಾರಾಟವಾಗುವ ಕಾರುಗಳು ಮತ್ತು ಇತರ ದೇಶಗಳಿಗೆ ರಫ್ತು ಮಾಡಲಾದ ಮಾದರಿಗಳು ಕೂಡ ಸೇರಿವೆ. ಹೋಂಡಾ (Honda) ಕಂಪನಿಯು ಸದ್ಯ ಭಾರತೀಯ ಮಾರುಕಟ್ತೆಯಲ್ಲಿ ಎಲಿವೇಟ್, ಸಿಟಿ ಮತ್ತು ಅಮೇಜ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಳೆದ ತಿಂಗಳ ಮಾರಾಟದಲ್ಲಿ ಹೋಂಡಾ ಕುಸಿತವನ್ನು ಕಂಡಿದೆ.

ಭಾರತದಲ್ಲಿ ಹೋಂಡಾ ಕಾರು ಮಾರಾಟವು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಸುಮಾರು 10 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೋಂಡಾ ದೇಶೀಯ ಮಾರುಕಟ್ಟೆಯಲ್ಲಿ 8,730 ಯುನಿಟ್‌ಗಳನ್ನು ಮತ್ತು 3,161 ಯುನಿಟ್‌ಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗಿದೆ. ಕಳೆದ ತಿಂಗಳು, ಒಟ್ಟಾರೆ ದೇಶೀಯ ಮಾರಾಟವು 5,005 ಯುನಿಟ್‌ಗಳಿಗೆ ಇಳಿದಿದೆ.

Honda Car Sales

ರಫ್ತು ಮಾಡಲಾದ ಯುನಿಟ್ ಗಳು ಸಂಖ್ಯೆಯು 5,721 ಕ್ಕೆ ಜಿಗಿದಿದೆ, ಕಳೆದ ವರ್ಷ ನವೆಂಬರ್‌ನಿಂದ 2,560 ಯುನಿಟ್‌ಗಳು ಹೆಚ್ಚಾಗಿದೆ. ನವೆಂಬರ್‌ನಲ್ಲಿ ಹೋಂಡಾದ ಹೆಚ್ಚಿನ ಮಾರಾಟವು ಅದರ ಪ್ರಮುಖ ಎಸ್‍ಯುವಿ ಎಲಿವೇಟ್‌ನಿಂದ ಬಂದಿದೆ. ದೇಶೀಯ ವಲಯದಲ್ಲಿನ ಮಾರಾಟದ ಜೊತೆಗೆ, ಎಲಿವೇಟ್ ಈ ಅವಧಿಯಲ್ಲಿ ರಫ್ತುಗಳಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಿದೆ.

ಹೋಂಡಾ ತನ್ನ ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಎದುರಾಳಿ ಮಾರುತಿ ಸುಜುಕಿ ಡಿಜೈರ್ ಮಾದರಿ ಕೂಡ ಹೊಸ ನವೀಕರಣಗಳೊಂದಿಗೆ ಈ ಹೋಂಡಾ ಅಮೇಜ್ ಕಾರಿಗೆ ಪ್ರಬಲ ಪ್ರತಿಸ್ಪಧಿಯಾಗಿದೆ. ಇದೀಗ ಹೋಂಡಾ ಅಮೇಜ್ ಕಾರಿನ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದೆ. ಈ ಹೊಸ ಹೋಂಡಾ ಅಮೇಜ್ ಕಾರು ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ.

Honda Car Sales

ಈ ಹೋಂಡಾ ಅಮೇಜ್ ಕಾರು 2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾದರಿಯಾಗಿದೆ. ಈ ಹೋಂಡಾ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಉತ್ತಮ ಮಾರಾಟಗಾರರಲ್ಲಿ ಒಂದಾಗಿದೆ. ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರಿನಲ್ಲಿ ಬೋಲ್ಡ್ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನಲ್ಲಿ 1.2-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳಬಹುದು.

ಈ ಎಂಜಿನ್ 89 bhp ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಹೊಸ ಹೋಂಡಾ ಅಮೇಜ್ ಬಗ್ಗೆ ಹೆಚ್ಚು ಬಹಿರಂಗಪಡಿಸಲಾಗಿಲ್ಲವಾದರೂ, ಈ ಸೆಡಾನ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

Honda Car Sales

ಮೂರನೇ ತಲೆಮಾರಿನ ಹೋಂಡಾ ಅಮೇಜ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಅಮೇಜ್ ಮಾದರಿಗೆ ಸಿಟಿಯ ವಿನ್ಯಾಸ ಶೈಲಿಯನ್ನು ಹೊಂದಿರಲಿದೆ. ಮುಂಭಾಗದಲ್ಲಿ, ಹೊಸ ಅಮೇಜ್ ಮಧ್ಯದಲ್ಲಿ ಹೋಂಡಾ ಲೋಗೋದೊಂದಿಗೆ ದೊಡ್ಡ ಮತ್ತು ಅಗಲವಾದ ಗ್ರಿಲ್ ಅನ್ನು ಹೊಂದಿರುತ್ತದೆ. ಈ ಹೊಸ ಮಾದರಿಯ ಮುಂಭಾಗದ ಬಂಪರ್ ಅಗ್ರೇಸಿವ್ ಲೈನ್ ನೊಂದಿಗೆ ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಅಮೇಜ್ ಸೆಡಾನ್ ನಲ್ಲಿ ಸ್ಪೋರ್ಟಿ ಲುಕ್ ನೀಡಲು ಬಾನೆಟ್ ಕೂಡ ಮಸ್ಕಲರ್ ಕ್ರೀಸ್‌ಗಳನ್ನು ಹೊಂದಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 3, 2024, 11:56 [IST]
English summary
Honda car sales in november 2024 details
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+