Honda Cars: ಹೋಂಡಾ ಕಾರುಗಳಿಗೆ ಬೆಲೆ ಏರಿಕೆ ಬಿಸಿ... ಇನ್ಮುಂದೆ ಈ ಕಾರುಗಳ ಬೆಲೆಯೆಷ್ಟು ಗೊತ್ತಾ?

ಸದ್ಯಕ್ಕೆ ಭಾರತದಲ್ಲಿ ಕೆಲವೇ ಕೆಲವು ಕಾರು ಮಾದರಿಗಳು ಲಭ್ಯವಿರುವುದು ಎಂಬುದು ಎಲ್ಲರಿಗೂ ತಿಳಿದಿದೆ. ಹೋಂಡಾ ಎಲಿವೇಟ್‌, ಅಮೇಜ್‌ ಮತ್ತು ಹೋಂಡಾ ಸಿಟಿ ಸದ್ಯಕ್ಕೆ ಭಾರತಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದೀಗ ಹೋಂಡಾ ಕುರಿತಾದ ಹೊಸದೊಂದು ಸುದ್ದಿ ಹೊರಬಿದ್ದಿದ್ದು, ಕಾರು ಪ್ರೀಯರ ಮುಖದಲ್ಲಿದ್ದ ಮಂದಹಾಸ ಮರೆಯಾಗುವಂತೆ ಮಾಡಿದೆ.

ಮಾಹಿತಿಗಳ ಪ್ರಕಾರ ಹೋಂಡಾ (Honda Cars) ಕಂಪನಿಯು ಭಾರತದಲ್ಲಿ ತನ್ನ ಕಾರುಗಳ ಮೇಲಿನ ಬೆಲೆಯನ್ನು ಏರಿಸಲಿದೆ ಎಂದು ತಿಳಿದು ಬಂದಿದೆ. ಹೌದು, ಮುಂದಿನ ತಿಂಗಳು ಅಂದರೆ ಎಪ್ರಿಲ್‌ ೨೦೨೪ ರಿಂದ ಹೋಂಡಾ ತನ್ನ ಎಲ್ಲಾ ಕಾರುಗಳಿಗೂ ಬೆಲೆ ಏರಿಕೆ ಮಾಡಲಿದ್ದು, ಹೋಂಡಾ ಕಾರು ಪ್ರೀಯರಿಗೆ ನಿರಾಸೆ ಉಂಟು ಮಾಡಲಿದೆ. ಕಂಪನಿ ತನ್ನ ಯಾವ ಮಾಡೆಲ್‌ ಮೇಲೆ ಎಷ್ಟು ಬೆಲೆ ಹೆಚ್ಚು ಮಾಡಲಿದೆ ಎಂದು ಇನ್ನೂ ತಿಳಿದು ಬಂದಿಲ್ಲವಾದರೂ, ಬೆಲೆ ಏರಿಕೆ ಅಂತೂ ಪಕ್ಕಾ ಎಂಬ ಮಾಹಿತಿಗಳು ಸಿಕ್ಕಿವೆ.

Honda Cars Elevate Amaze City Price To Be Increase From April 2024

ಸದ್ಯಕ್ಕೆ ಹೋಂಡಾ ಕಾರುಗಳಲ್ಲಿ ಅಮೇಜ್‌ ಎಂಟ್ರಿ ಲೆವೆಲ್‌ನಲ್ಲಿ ಇದ್ದು ಈ ಕಾರು ಸುಮಾರು 7.16 lakh ರೂಗಳಿಂದ ಆರಂಭವಾಗುತ್ತದೆ. ಇದೇ ಸಧರ್ಭದಲ್ಲಿ ಭಾರತದಲ್ಲಿ ಸದ್ಯಕ್ಕೆ ಹೋಂಡ ಮಾರಾಟ ಮಾಡುತ್ತಿರುವ ಒಂದೇ ಒಂದು ಎಸ್‌ಯುವಿಯಾದ ಹೋಂಡಾ ಎಲಿವೇಟ್‌ 11.58 lakh ರೂಗಳಿಂದ ಮತ್ತು ಪ್ರಸಿದ್ದ ಹೋಂಡಾ ಸಿಟಿ ಹೈಬ್ರಿಡ್ ಸೆಡಾನ್ ಸುಮಾರು 18.89 lakh ರೂಗಳಿಂದ ಆರಂಭವಾಗುತ್ತಿದೆ.

7.16 ಲಕ್ಷ ರೂಗಳಿಂದ ಆರಂಭವಾಗುವ ಹೋಂಡಾ ಅಮೇಜ್‌ ಬಜೆಟ್‌ ಬೆಲೆಯ ಒಂದು ಉತ್ತಮ ಸೆಡಾನ್‌ ಆಗಿದೆ. ಹೋಂಡಾ ಅಮೇಜ್ (Honda Amaze) ಕಾರು ಈ ವರ್ಷದ ದೀಪಾವಳಿ ಹಬ್ಬದ ಅವಧಿಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹೋಂಡಾ ಅಮೇಜ್ ಅನ್ನು ಸಿಟಿ ಮತ್ತು ಎಲಿವೇಟ್ ಮಿಡ್ ಸೈಜ್ ಎಸ್‍ಯುವಿಗೆ ಆಧಾರವಾಗಿರುವ ಅದೇ ಫ್ಲಾಟ್ ಫಾರ್ಮ್ ನಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

Honda Cars Elevate Amaze City Price To Be Increase From April 2024

ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಪಡೆಯಬಹುದು. ಸೆಡಾನ್ ಹೊಸ ಸಿಟಿ ಮತ್ತು ಎಲಿವೇಟ್‌ನಿಂದ ಹಲವಾರು ಆಂತರಿಕ ಘಟಕಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇನ್ನು ವರದಿಗಳ ಪ್ರಕಾರ ಹೊಸ ಜನರೇಷನ್ ಅಮೇಜ್ ಹೋಂಡಾ ಸೆನ್ಸಿಂಗ್ ಸೂಟ್ ಅನ್ನು ಸಹ ಪಡೆಯಬಹುದು.

ಹೋಂಡಾ ಎಲಿವೇಟ್‌ ಬಗ್ಗೆ ನೋಡುವುದಾದರೆ, ಸದ್ಯ ಎಲಿವೇಟ್ ಎಸ್‌ಯುವಿಯನ್ನು 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಮಾರಾಟ ಮಾಡುತ್ತಿದೆ. ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ. ಹೋಂಡಾ ಎಲಿವೇಟ್ ಎಸ್‍ಯುವಿ ಈ ಎಂಜಿನ್ 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಈ ಎಸ್‍ಯುವಿಯು ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನದ ಜೊತೆಗೆ ಸ್ಥಿತಿ ಮತ್ತು ಹೆಚ್ಚು ವಿಶೇಷವಾದ ಖರೀದಿದಾರರನ್ನು ಆಕರ್ಷಿಸಿಸುವಂತೆ ವಿನ್ಯಾಸಗೊಳಿಸಿದೆ. ಹೊಸ ಎಸ್‍ಯುವಿ ಮಾದರಿಯ ವಿನ್ಯಾಸವು ನ್ಯೂ ಜನರೇಷನ್ CR-V ಮತ್ತು WR-V ಎಸ್‍ಯುವಿಗಳಿಂದ ಸ್ಫೂರ್ತಿ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, March 18, 2024, 13:14 [IST]
English summary
Honda cars elevate amaze city price to be increase from april 2024
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+