ಶ್ರಾವಣದಲ್ಲಿ ಹೊಸ ಹೋಂಡಾ ಕಾರನ್ನು ಮನೆಗೆ ತರುವವರಿಗೆ ಶುಭಸುದ್ದಿ.. ರೂ.90,000ವರೆಗೆ ಹಣ ಉಳಿತಾಯ!

ಭಾರತದಲ್ಲಿ ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಿದ್ದು, ಹೊಸ ಕಾರು ಖರೀದಿಸಬೇಕು ಎಂದು ಗಂಡ-ಹೆಂಡತಿ ಇಬ್ಬರು ದುಡಿಯುತ್ತಾರೆ. ಆದಾಗ್ಯೂ ಕಾರುಗಳ ಬೆಲೆ ಹೆಚ್ಚಿದ್ದು, ಹಲವರು ನೂತನ ಕಾರುಗಳನ್ನು ಕೊಂಡುಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಅಂತಹವರಿಗಾಗಿ ಜನಪ್ರಿಯ ವಾಹನ ತಯಾರಕ ಕಂಪನಿ 'ಹೋಂಡಾ' ಭಾರಿ ಹಣಕಾಸಿನ ಪ್ರಯೋಜನಗಳನ್ನು ಘೋಷಿಸಿದೆ. ಕನಸಿನ ಕಾರುಗಳಾದ ಎಲಿವೇಟ್, ಅಮೇಜ್ ಹಾಗೂ ಸಿಟಿಯನ್ನು ತೆಗೆದುಕೊಳ್ಳಲು ಬಯಸುವ ಗ್ರಾಹಕರಿಗೆ ಈ ಕೊಡುಗೆಗಳು ಲಭ್ಯವಾಗಲಿದ್ದು, ಇದರಿಂದ ಸಾವಿರಾರು ರೂಪಾಯಿ ಹಣ ಉಳಿಸಬಹುದು.

ಈ ಕುರಿತಂತೆ ಹೋಂಡಾ ಕಾರ್ ಇಂಡಿಯಾ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದೆ. 'ಫ್ರೀಡಂ ಫೆಸ್ಟ್ ಅಭಿಯಾನ ಶುರು ಮಾಡಲಾಗಿದ್ದು, ಹೊಸ ಕಾರಿನ ಖರೀದಿ ಮೇಲೆ 3 ವರ್ಷಗಳ ಉಚಿತ ನಿರ್ವಹಣಾ ಪ್ಯಾಕೇಜ್ (Free Maintenance Package) ನೀಡಲಾಗುತ್ತದೆ' ಎಂದು ತಿಳಿಸಿದೆ. ಇದರೊಟ್ಟಿಗೆ ಅಮೇಜ್ ರೂ.96,000, ಸಿಟಿ ರೂ.88,000 ದಿಂದ ರೂ.90,000 ಮತ್ತು ಎಲಿವೇಟ್ ಕಾರುಗಳು ರೂ.88,000ವರೆಗೆ ಹಣಕಾಸು ಪ್ರಯೋಜನ ಪಡೆದಿವೆ.

Honda Cars Get Huge Offer In August 2024 Upto Rs 96 000 Benefits details

ದೇಶೀಯ ಮಾರುಕಟ್ಟೆಯಲ್ಲಿ ನೂತನ ಹೋಂಡಾ ಅಮೇಜ್ (Honda Amaze) ಸೆಡಾನ್ ರೂ.7.20 ಲಕ್ಷದಿಂದ ರೂ.9.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇ, ಎಸ್ ಹಾಗೂ ವಿಎಕ್ಸ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯನ್ನು ಹೊಂದಿದ್ದು, 5 ಆಸನ ವ್ಯವಸ್ಥೆಯನ್ನು ಒಳಗೊಂಡಿದೆ. 2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದೆ. ಜೊತೆಗೆ 18.3 ರಿಂದ 18.6 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಅಮೇಜ್ ಸೆಡಾನ್ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್ಸ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡುಯಲ್ ಏರ್‌ಬ್ಯಾಗ್‌, ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.

Honda Cars Get Huge Offer In August 2024 Upto Rs 96 000 Benefits details

ಹೋಂಡಾ ಎಲಿವೇಟ್ (Honda Elevate) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ರೂ.11.91 ಲಕ್ಷದಿಂದ ರೂ.16.51 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಎಸ್‌ವಿ, ವಿ, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ರೂಪಾಂತರಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 5 ಮಂದಿ ಸುಲಭವಾಗಿ ಪ್ರಯಾಣಿಯಬಹುದು. 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 15.31 ರಿಂದ 16.92 ಕೆಎಂಪಿಎಲ್‌ವರೆಗೆ ನೀಡುತ್ತದೆ.

ಈ ಹೋಂಡಾ ಎಲಿವೇಟ್ ಎಸ್‌ಯುವಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ.

ಹೋಂಡಾ ಸಿಟಿ (Honda City) ಸೆಡಾನ್ ಬಗ್ಗೆ ಮಾತನಾಡುವುದಾದರೆ, ಇದು ರೂ.12.08 ಲಕ್ಷದಿಂದ ರೂ.16.35 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್‌ ಪಡೆದಿದ್ದು, 18.4 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಹೋಂಡಾ ಫ್ರೀಡಂ ಫೆಸ್ಟ್ (Honda Freedom Fest) ಅಭಿಯಾನ ಭಾಗವಾಗಿರುವ 3 ವರ್ಷಗಳ ಉಚಿತ ನಿರ್ವಹಣಾ ಪ್ಯಾಕೇಜ್ ಪ್ರಯೋಜನ ಎಲ್ಲಿವರೆಗೆ ಲಭ್ಯವಾಗುತ್ತದೆ ಎಂಬುದರ ಕುರಿತಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಆಸಕ್ತ ಗ್ರಾಹಕರು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ. ಅಲ್ಲಿ ಪ್ರತಿಯೊಂದು ಹಣಕಾಸಿನ ಪ್ರಯೋಜನದ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 5, 2024, 13:50 [IST]
English summary
Honda cars get huge offer in august 2024 upto rs 96000 benefits details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+