Honda: ಹೋಂಡಾದ ಈ ಕಾರುಗಳಿಗೆ 1 ಲಕ್ಷವರೆಗೆ ರಿಯಾಯಿತಿ.. ಈಗ ಬಿಟ್ಟರೆ ಸಿಗುವುದಿಲ್ಲ!
ಜಪಾನ್ ದೇಶದ ಹೋಂಡಾ (Honda) ದೇಶೀಯ ಕಾರು ಮಾರುಕಟ್ಟೆಯಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಈ ಜನವರಿಯಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಿಟಿ (City) ಹಾಗೂ ಅಮೇಜ್ (Amaze) ಸೆಡಾನ್‌ಗಳ ಮೇಲೆ ರೂ.1 ಲಕ್ಷವರೆಗೆ ರಿಯಾಯಿತಿ ಸೌಲಭ್ಯವನ್ನು ಘೋಷಣೆ ಮಾಡಿದೆ.
ಮೊದಲಿಗೆ ಹೋಂಡಾ ಸಿಟಿ ಹೈಬ್ರಿಡ್ (Honda City e:HEV) ಸೆಡಾನ್ ಪಡೆದುಕೊಂಡಿರುವ ಡಿಸ್ಕೌಂಟ್ ಆಫರ್ ಬಗ್ಗೆ ಮಾತನಾಡೋಣ. ಈ ಕಾರು, ರೂ.1 ಲಕ್ಷವರೆಗೆ ಫ್ಲಾಟ್ ನಗದು ರಿಯಾಯಿತಿ (Flat Cash Discount)ಯನ್ನು ಪಡೆದಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಹೈಬ್ರಿಡ್ ಮಾದರಿ ರೂ.18.89 ಲಕ್ಷದಿಂದ ರೂ.20.39 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ & ಟ್ವಿನ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 126 PS ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 27.13 kmpl ಮೈಲೇಜ್ ನೀಡುತ್ತದೆ. 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಹೋಂಡಾ ಸಿಟಿ (Honda City) ಸಾಮಾನ್ಯ ಮಾದರಿ ರೂ.88,600 ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಇದರಲ್ಲಿ ರೂ.40,000 ವರೆಗೆ ನಗದು ರಿಯಾಯಿತಿ (Cash Discount), ರೂ.4,000 ಲಾಯಲ್ಟಿ ಬೋನಸ್ (Loyalty Bonus), ರೂ.6,000 ವಿನಿಮಯ ಬೋನಸ್ (Exchange Bonus) ಒಳಗೊಂಡಂತೆ ವಿವಿಧ ಡಿಸ್ಕೌಂಟ್ ಆಫರ್ಸ್ ಇವೆ.

ಈ ಹೋಂಡಾ ಸಿಟಿ ಸೆಡಾನ್, ರೂ.11.63 ಲಕ್ಷದಿಂದ ರೂ.16.11 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.5 - ಲೀಟರ್ ಪೆಟ್ರೋಲ್ ಎಂಜಿನ್, 6 - ಸ್ವೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ.
ಹೋಂಡಾ ಅಮೇಜ್ (Honda Amaze) ಕೂಡ ಭರ್ಜರಿ ಡಿಸ್ಕೌಂಟ್ ಆಫರ್ ಪಡೆದಿದ್ದು, ಒಟ್ಟು 72,000ವರೆಗೆ ರಿಯಾಯಿತಿ ಪ್ರಯೋಜನಗಳು ಲಭ್ಯವಿವೆ. ಅದರಲ್ಲಿ ರೂ.45,000 ವರೆಗೆ ನಗದು ರಿಯಾಯಿತಿ, ರೂ.4,000 ವರೆಗೆ ಲಾಯಲ್ಟಿ ಬೋನಸ್, ರೂ.23,000 ಕಾರ್ಪೊರೇಟ್ ರಿಯಾಯಿತಿ ಸೇರಿದಂತೆ ಹಲವು ಡಿಸ್ಕೌಂಟ್ ಪ್ರಯೋಜನಗಳಿವೆ. ಈ ಕಾರು, ರೂ.7.10 ಲಕ್ಷದಿಂದ ರೂ.9.86 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.
ಹೋಂಡಾ ಅಮೇಜ್, 1.2 - ಲೀಟರ್ ಪೆಟ್ರೋಲ್ ಎಂಜಿನ್, 5 - ಸ್ವೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. 18.3 - 18.6 kmpl ಮೈಲೇಜ್ ನೀಡಲಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ರೂಪಾಂತರಗಳು, ಬಣ್ಣಗಳನ್ನು ಆಧರಿಸಿ, ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂ ಸಂಪರ್ಕಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








